ದಂಡಿನ ದಂಪತಿಗಳ ಸ್ಮಾರಕ ನಿರ್ಮಾಣ ಪೂರ್ವಭಾವಿ ಸಭೆ

 ಗದಗ ಕೆವಿಎಸ್​ಆರ್​ ಸಂಸ್ಥೆಯಲ್ಲಿ ಏರ್ಪಡಿಸಿದ್ದ ದಂಡಿನ ದಂಪತಿಗಳ ಸ್ಮಾರಕ ನಿರ್ಮಾಣ ಪೂರ್ವಭಾವಿ ಸಭೆಯಲ್ಲಿ ಶರಣು ಗೋಗೇರಿ ಮಾತನಾಡಿದರು. ರವಿ ದಂಡಿನ, ಶಶಿಧರ ಕುರಿ, ವೈ. ಕೆ. ಪಿಡಗಣ್ಣನವರ, ಸಂದೀಪ ಬೂದಿಹಾಳ, ಎಸ್​.ಎಸ್​.ತಳ್ಳಿಹಾಳ, ಡಾ. ಎಸ್​. ಎ್​. ಜಕಬಾಳ, ಅನೀಲ ವೈದ್ಯ, ಡಾ. ಎಸ್​. ಡಿ. ಶೇಖ, ಡಾ. ಜಿ. ಎಂ. ಸುಣಗಾರ, ಡಾ. ಯತ್ನಟ್ಟಿ  ಹಲವರು ಇದ್ದರು.
ಗದಗ ಕೆವಿಎಸ್​ಆರ್​ ಸಂಸ್ಥೆಯಲ್ಲಿ ಏರ್ಪಡಿಸಿದ್ದ ದಂಡಿನ ದಂಪತಿಗಳ ಸ್ಮಾರಕ ನಿರ್ಮಾಣ ಪೂರ್ವಭಾವಿ ಸಭೆಯಲ್ಲಿ ಶರಣು ಗೋಗೇರಿ ಮಾತನಾಡಿದರು. ರವಿ ದಂಡಿನ, ಶಶಿಧರ ಕುರಿ, ವೈ. ಕೆ. ಪಿಡಗಣ್ಣನವರ, ಸಂದೀಪ ಬೂದಿಹಾಳ, ಎಸ್​.ಎಸ್​.ತಳ್ಳಿಹಾಳ, ಡಾ. ಎಸ್​. ಎ್​. ಜಕಬಾಳ, ಅನೀಲ ವೈದ್ಯ, ಡಾ. ಎಸ್​. ಡಿ. ಶೇಖ, ಡಾ. ಜಿ. ಎಂ. ಸುಣಗಾರ, ಡಾ. ಯತ್ನಟ್ಟಿ ಹಲವರು ಇದ್ದರು.
Published on

ಆ. 5 ರಂದು ಭೂಮಿಪೂಜೆಗೆ ನಿರ್ಧಾರ

ವಿಜಯವಾಣಿ ಸುದ್ದಿಜಾಲ ಗದಗ
ಅರ ದಾಸೋಹಿ ಡಾ. ಬಿ.ಎ್​. ದಂಡಿನ ಹಾಗೂ ಅವರ ಧರ್ಮಪತ್ನಿ ಸ್ಮರಣಾರ್ಥ ಸ್ಮಾರಕ ಭವನ ನಿಮಿರ್ಸುವ ಉದ್ದೇಶದಿಂದ ಡಾ.ಬಿ.ಎ್​.ದಂಡಿನ ವಿದ್ಯಾಥಿರ್ ಬಳಗ ವತಿಯಿಂದ ನಗರದ ಕೆವಿಎಸ್​ಆರ್​ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ರವಿವಾರ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಂಟಕ ಡಾ.ಶರಣು ಗೋಗೇರಿ, ಸಾಮಾನ್ಯ ಕುಟುಂಬದಿಂದ ಬಂದು ತಮ್ಮ ಶ್ರಮ, ದೂರದೃಷ್ಟಿಯಿಂದ ಕನಕದಾಸ ಶಿಣ ಸಂಸ್ಥೆಯನ್ನು ಕಟ್ಟಿದ ಡಾ.ದಂಡಿನ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಭವ್ಯ ಸ್ಮಾರಕ ನಿಮಿರ್ಸುವುದು ನಮ್ಮ ಉದ್ದೇಶವಾಗಿದೆ. ಆ.5 ರಂದು ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದರು.
ವಿಜಯನಗರ ಪಿಯು ಕಾಲೇಜು ಪ್ರಾಚಾರ್ಯ ಸಂದೀಪ ಬೂದಿಹಾಳ ಮಾತನಾಡಿ, ಆ. 5 ರಂದು ಡಾ. ದಂಡಿನ ಅವರ ಜನ್ಮದಿನದಂದು ಪಾತೀತವಾಗಿ ಎಲ್ಲ ಗಣ್ಯರು, ಹಳೆಯ ವಿದ್ಯಾಥಿರ್ಗಳು, ಶಿಕರನ್ನು ಆಹ್ವಾನಿಸಿ ನುಡಿನಮನ ಹಾಗೂ ಸ್ಮಾರಕದ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ನಿವೃತ್ತ ದೈಹಿಕ ಶಿಣ ಶಿಕ ಎಸ್​. ಎಸ್​. ತಳ್ಳಿಹಾಳ, ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಅವರು ದೇಶ ವಿದೇಶದಲ್ಲಿರುವ ಹಳೆಯ ವಿದ್ಯಾಥಿರ್ಗಳನ್ನು ಸಂಪಕಿರ್ಸಿ ಸ್ಮಾರಕ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನಕದಾಸ ಶಿಣ ಸಮಿತಿಯ ಚೇರಮನ್​ ರವೀಂದ್ರನಾಥ ದಂಡಿನ ಮಾತನಾಡಿ, ಹಳೆಯ ವಿದ್ಯಾಥಿರ್ಗಳು ಸ್ಮಾರಕ ನಿರ್ಮಾಣ ಕೈಗೆತ್ತಿಕೊಂಡಿರುವುದು ತಂದೆ ತಾಯಿಗೆ ಸಲ್ಲಿಸುವ ಅತ್ಯುನ್ನತ ಗೌರವ. ಜನ್ಮಸ್ಥಳ ದ್ಯಾಮನಹುಣಸಿಯಲ್ಲಿ ನಿಮಿರ್ಸುವ ಚಿಂತನೆ ಇದ್ದರೂ, ವಿದ್ಯಾಥಿರ್ಗಳ ಹಾಗೂ ಅಭಿಮಾನಿಗಳ ಅಪೇೆಯ ಮೇರೆಗೆ ಗದಗದಲ್ಲೇ ನಿಮಿರ್ಸಲು ತೀರ್ಮಾನಿಸಲಾಗಿದೆ. ಕನಕದಾಸ ಸಂಸ್ಥೆಯ ನಿಜವಾದ ಸಂಪತ್ತು ಹಳೆಯ ವಿದ್ಯಾಥಿರ್ಗಳೇ ಎಂದರು.
ಎಂ.ಎನ್​. ಕಾಮನಹಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ವೈ. ವಿ. ಮುಕ್ಕಣ್ಣನವರ ಅಧ್ಯತೆ ವಹಿಸಿದ್ದರು. ಶಶಿಧರ ಕುರಿ, ವೈ. ಕೆ. ಪಿಡಗಣ್ಣನವರ, ಸಂದೀಪ ಬೂದಿಹಾಳ, ಎಸ್​.ಎಸ್​.ತಳ್ಳಿಹಾಳ, ಡಾ. ಎಸ್​. ಎ್​. ಜಕಬಾಳ, ಅನೀಲ ವೈದ್ಯ, ಡಾ. ಎಸ್​. ಡಿ. ಶೇಖ, ಡಾ. ಜಿ. ಎಂ. ಸುಣಗಾರ, ಡಾ. ಯತ್ನಟ್ಟಿ ಹಲವರು ಇದ್ದರು.






ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net