ಡಾ. ಬಿ. ಎಫ್ ದಂಡಿನ, ಶಕುಂತಲಾಬಾಯಿ ದಂಡಿನ ಸ್ಮಾರಕ ಭವನ ನಿರ್ಮಾಣಕ್ಕೆ ಆ. 5 ರಂದು ಭೂಮಿಪೂಜೆ
ದಂಡಿನ ಸ್ಮಾರಕ ಭವನ ನಿರ್ಮಾಣ ಕುರಿತು ಎಂ.ಎನ್. ಕಾಮನಹಳ್ಳಿ ಸುದ್ದಿಗೋಷ್ಟಿ ನಡೆಸಿದರು. ರುದ್ರಣ್ಣ ಗುಳಗುಳಿ, ರವಿ ದಂಡಿನ, ಪ್ರೊ. ಅನಿಲ ವೈದ್ಯ, ಡಾ. ಎನ್.ಎಂ ಅಂಬನಿ, ಬಸವರಾಜ ಬಿಂಗಿ, ಯಲ್ಲಪ್ಪ ಗುರಿಕಾರ, ವೈ.ಡಿ ಜಡದೇಲಿ ಇದ್ದರು.
ಕನಕದಾಸ ಶಿಕ್ಷಣ ಸಮಿತಿ, ಡಾ. ಬಿ. ಎಫ್. ದಂಡಿನ ವಿದ್ಯಾಥಿರ್ ಬಳಗದ ವತಿಯಿಂದ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಡಾ. ಬಿ. ಎಫ್. ದಂಡಿನ ಹಾಗೂ ಶಕುಂತಲಾಬಾಯಿ ದಂಡಿನ ಅವರಿಗೆ ಸಾರ್ವಜನಿಕ ನುಡಿನಮನ ಸಭೆ, ಸ್ಮಾರಕ ಭೂಮಿಪೂಜಾ ಕಾರ್ಯಕ್ರಮವನ್ನು ಆ. 5 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಗಾಣಿಗ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್ಎಸ್ ನಿವೃತ್ತ ಪ್ರಾಚಾರ್ಯ ಎಂ.ಎನ್. ಕಾಮನಹಳ್ಳಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಮಂಗೇಶ್ ಭೇಂಡೆ, ಬಸವರಾಜ ಬೊಮ್ಮಾಯಿ. ಸಿ. ಸಿ ಪಾಟೀಲ, ಡಾ. ಎಚ್.ಕೆ ಪಾಟೀಲ, ಎಸ್.ಎಸ್ ಪಾಟೀಲ, ಡಿ. ಆರ್. ಪಾಟೀಲ, ದೊಡ್ಡನಗೌಡ ಪಾಟೀಲ, ಪಿ.ಜಿ.ಆರ್ ಸಿಂಧ್ಯಾ, ಎಂ.ಆರ್ ಹುಲಿನಾಯ್ಕರ, ಡಾ. ತೇಜಸ್ವಿ ಕಟ್ಟಿಮನಿ, ಮಲ್ಲಿಕಾರ್ಜುನ ಸಿದ್ದಣ್ಣನವರ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದರು.
ಡಾ. ಡಿ. ಬಿ ಗವಾನಿ ಮಾತನಾಡಿ, ಗ್ರಾಮಿಣ ಭಾಗದ ವಿದ್ಯಾಥಿರ್ಗಳು ಹೆಚ್ಚಿನ ಪ್ರಮಾಣದಲ್ಲಿ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಓದಿದ ಸಾವಿರಾರು ವಿದ್ಯಾಥಿರ್ಗಳು ಇಂದು ಶಿಕ್ಷಕರಾಗಿ, ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅಗಲಿಕೆಯಿಂದ ಅಪಾರ ವಿದ್ಯಾಥಿರ್ ಸಮೂಹ, ಅಭಿಮಾನಿಗಳು ದುಃಖತಪ್ತರಾಗಿದ್ದಾರೆ. ಅವರ ನೆನಪಿಗಾಗಿ ಸ್ಮಾರಕ ಭವನ ನಿರ್ಮಾಸಿ ಅಜರಾಮರವಾಗಿಸುವ ಗುರಿ ಹೊಂದಲಾಗಿದೆ ಎಂದರು.
ಹಾಲುಮತ ಸಮಾಜದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ ಡಾ. ಬಿ. ಎಫ್ ದಂಡಿನ ಶಿಕ್ಷಕರಾಗಿ ವೃತ್ತಿ ಆರಂಭಿಸಿ 65 ಶಿಕ್ಷಣ ಸಂಸ್ಥೆ ಹುಟ್ಟುಹಾಕುವ ಮೂಲಕ ಶಿಕ್ಷಣಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಜೀವನದ ಕೊನೆಯ ಕ್ಷಣದ ವರೆಗೆ ಶಿಕ್ಷಣವೇ ನನ್ನ ಉಸಿರು ಎಂದು ಬದುಕಿದರು. ರಾಜಕಾರಣದಲ್ಲೂ ಅವರು ಗುರುತಿಸಿಕೊಂಡು ಸಮಾಜಮುಖಿ ಕಾರ್ಯ ಮಾಡಿದ್ದಾರೆ ಎಂದರು.
ರವಿ ದಂಡಿನ, ಪ್ರೊ. ಅನಿಲ ವೈದ್ಯ, ಡಾ. ಎನ್.ಎಂ ಅಂಬನಿ, ಬಸವರಾಜ ಬಿಂಗಿ, ಯಲ್ಲಪ್ಪ ಗುರಿಕಾರ, ವೈ.ಡಿ ಜಡದೇಲಿ ಇದ್ದರು.