

218 ಕೋಟಿ ಮೌಲ್ಯದ ಬೆಳೆ ನಾಶ!
ಬರ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ
ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ಮೂರ್ನಾಲ್ಕು ದಶಕದಲ್ಲೇ ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ಬರಗಾಲ ಆವರಿಸಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 2.40 ಲಕ್ಷ ಬೆಳೆ ನಾಶ ಆಗಿದೆ. ಬೆಳೆ ನಾಶದ ಪ್ರಮಾಣ ಒಟ್ಟು 218 ಕೋಟಿ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಬರ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಹೆಸರು, ಜೋಳ ಸೇರಿದಂತೆ ಪ್ರಮುಖ ಬೆಳೆಗಳು ಮಣ್ಣು ಕಚ್ಚಿವೆ. ಮಳೆಯ ಅಭಾವದಿಂದ ಜಿಲ್ಲೆಯ ಕೃಷಿ ಬದುಕು ಸಂರ್ಪೂಣ ಬುಡಮೇಲಾಗಿದೆ. ಮುಂಗಾರು ಹಂಗಾಮಿನ ಸ್ವಲ್ಪ ಮಳೆ ಆಗಿತ್ತು. ಮಳೆ ಹಿನ್ನೆಲೆ ಆರಂಭದಲ್ಲಿ ಚಿಗುರೊಡೆದಿದ್ದ ರೈತರ ನಿರೀಕ್ಷೆಗಳು ಹುಸಿಯಾಗಿವೆ. ತೀವ್ರ ಮಳೆ ಕೊರತೆ ಹಿನ್ನೆಲೆ ಬಿತ್ತನೆ ಪೈಕಿ ಶೇ. 80 ರಷ್ಟು ಬೆಳೆ ಹಾನಿ ಆಗಿದೆ. ವಾಡಿಕೆಗಿಂತ ಶೇ.32 ರಷ್ಟು ಮಳೆ ಕೊರತೆ ಆಗಿದೆ.
ಜಿಲ್ಲೆಯಲ್ಲಿ ಒಟ್ಟು 2.50 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳಿವೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 2.90 ಲಕ್ಷ ಹೆ, ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬಿತ್ತನೆ ಗುರಿ ಹೊಂದಲಾಗಿತ್ತು. 2.40 ಲಕ್ಷ ಹೆಕ್ಟೇರ ಪ್ರದೇಶದಲ್ಲಿ ರೈತರು ಬಿತ್ತನೆ ರ್ಪೂಣಗೊಳಿಸಿದ್ದರು. ಆರಂಭದಲ್ಲಿ ಮುಂಗಾರು ಉತ್ತಮವಾಗಿದ್ದರಿಂದ ಜಿಲ್ಲೆಯ ಪ್ರಮುಖ ಬೆಳೆಗಳಾದ ಶೇಂಗಾ, ಹೆಸರು, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ ಹಾಗೂ ತೋಟಗಾರಿಕಾ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ ಉತ್ತಮವಾಗಿಯೇ ಮೊಳಕೆಯೊಡೆದಿದ್ದವು. ನಂತರದಲ್ಲಿ ಮಳೆ ಅಭಾವದಿಂದ ಬೆಳೆಗಗಳು ಒಣಗಿವೆ.
ರೈತರಿಗೆ ನಷ್ಟ:
ಪ್ರತಿ ಎಕರೆಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಕೃಷಿ ಕಾಮಿರ್ಕರ ಕೂಲಿಗಾಗಿ ರೈತರು 15 ರಿಂದ 25 ಸಾವಿರದವರೆಗೆ ವೆಚ್ಚ ಮಾಡಿದ್ದಾರೆ. ಗದಗ, ಶಿರಹಟ್ಟಿ, ಮುಂಡರಗಿ, ಲೆ$್ಮಶ್ವರ, ರೋಣ, ನರಗುಂದ ಹಾಗೂ ಗಜೇಂದ್ರಗಡ ತಾಲೂಕುಗಳ ಬಹುತೇಕ ಭಾಗಗಳಲ್ಲಿ ಹೆಸರು ಮತ್ತು ಶೇಂಗಾ ಬೆಳೆಗಳು ಸಂರ್ಪೂಣ ನಾಶವಾಗಿವೆ. ತೋಟಗಾರಿಕಾ ಬೆಳೆಗಳು ಬೆಳೆಯುವ ಮೊದಲೇ ಒಣಗಿ ಹೋಗಿವೆ. ಶೇಂಗಾ, ಮೆಕ್ಕೆಜೋಳ ಸೇರಿದಂತೆ ಇನ್ನುಳಿದ ಬೆಳೆಗಳ ಹೊಲ ಗದ್ದೆಗಳಲ್ಲಿ ಅನಿವಾರ್ಯತೆ ಎದುರಾಗಿ ರೈತರು ಜಾನುವಾರುಗಳನ್ನು ಮೇಯಿಸುತ್ತಿರುವುದು ಗ್ರಾಮೀಣ ಭಾಗದಲ್ಲಿ ಪ್ರಮುಖವಾಗಿ ಕಂಡು ಬರುತ್ತಿದೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆಯಂತೆ ಜಿಲ್ಲೆಯಾದ್ಯಂತ ಒಟ್ಟು 218 ಕೋಟಿಗೂ ಅಧಿಕ ನಷ್ಟ ಸಂಭವಿಸಿರುವುದು ದಾಖಲಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಗದಗ ಜಿಲ್ಲೆಯನ್ನು ಸಂರ್ಪೂಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಯಮಾವಳಿಗಳ ಅನ್ವಯ ಎಕರೆವಾರು ವೈಜ್ಞಾನಿಕ ಪರಿಹಾರ ನೀಡಬೇಕು, ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಬೆಳೆ ವಿಮೆ ಹಣವನ್ನು ವಿಳಂಬವಿಲ್ಲದೇ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.