ಚಿಕ್ಕಟ್ಟಿ ಸಂಸ್ಥೆಯಲ್ಲಿ ಪಿಯುಸಿ ಸಾಧಕರಿಗೆ ಸನ್ಮಾನ

ನಗರದ ಬಿಪಿನ್​ ಚಿಕ್ಕಟ್ಟಿ ಸಂಸ್ಥೆಯಲ್ಲಿ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾಥಿರ್ನಿಯರನ್ನು ಸನ್ಮಾನಿಸಲಾಯಿತು. ಎಸ್​.ವಿ. ಸಂಕನೂರು, ಪ್ರೊ. ಎಸ್​. ವೈ. ಚಿಕ್ಕಟ್ಟಿ , ಎನ್​. ವಿ. ಜೋಶಿ, ಪ್ರೊ. ಬಿ. ವಿ. ಜೋಶಿ, ಎಂ. ಆರ್​. ಅಂಗಡಿ, ಎಸ್​. ಬಿ. ಹಿರೇಮಠ, ಶೋಭಾ  ಸ್ಥಾವರಮಠ ಇತರರು ಇದ್ದರು. ಶ್ರೀಶೈಲ ಬಡಿಗೇರ ಇತರರು ಇದ್ದರು.
ನಗರದ ಬಿಪಿನ್​ ಚಿಕ್ಕಟ್ಟಿ ಸಂಸ್ಥೆಯಲ್ಲಿ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾಥಿರ್ನಿಯರನ್ನು ಸನ್ಮಾನಿಸಲಾಯಿತು. ಎಸ್​.ವಿ. ಸಂಕನೂರು, ಪ್ರೊ. ಎಸ್​. ವೈ. ಚಿಕ್ಕಟ್ಟಿ , ಎನ್​. ವಿ. ಜೋಶಿ, ಪ್ರೊ. ಬಿ. ವಿ. ಜೋಶಿ, ಎಂ. ಆರ್​. ಅಂಗಡಿ, ಎಸ್​. ಬಿ. ಹಿರೇಮಠ, ಶೋಭಾ ಸ್ಥಾವರಮಠ ಇತರರು ಇದ್ದರು. ಶ್ರೀಶೈಲ ಬಡಿಗೇರ ಇತರರು ಇದ್ದರು.
Published on
ಉತ್ತಮ ಅಂಕಗಳ ಜತೆಗೆ ಸಂಸ್ಕಾರವು ಅತೀ ಮುಖ್ಯ: ಎಸ್​.ವಿ. ಸಂಕನೂರು
ವಿಜಯವಾಣಿ ಸುದ್ದಿಜಾಳ ಗದಗ
ನಗರದ ಚಿಕ್ಕಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ದ್ವೀತಿಯ ಪಿಯುಸಿ ಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾಥಿರ್ಗಳಿಗೆ ಸನ್ಮಾನ ಸಮಾರಂಭ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್​ ಶಾಸಕ ಎಸ್​.ವಿ. ಸಂಕನೂರು, ಅಂಕಗಳ ಜೊತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವುದು ಗುರುವಿನ ಕಾರ್ಯ. ಗುಣಮಟ್ಟದ ಶಿಣದ ಜೊತೆಗೆ ವಿದ್ಯಾಥಿರ್ಗಳ ಭವಿಷ್ಯ ರೂಪಿಸುವಲ್ಲಿ ಚಿಕ್ಕಟ್ಟಿ ಶಿಣ ಸಂಸ್ಥೆ ಶ್ರಮಿಸುತ್ತಿದೆ. ಮಕ್ಕಳ ಶಿಣಕ್ಕೆ ಪೂರಕವಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ. ಈ ಎಲ್ಲಾ ಸೌಲಭ್ಯಗಳೊಂದಿಗೆ ನಿಮ್ಮ ನಿರಂತರ ಅಧ್ಯಯನ ಹಾಗೂ ಪ್ರಾಧ್ಯಾಪಕರ ಮಾರ್ಗದರ್ಶನದ ಲವೇ ಈ ಸಾಧನೆ. ಪ್ರಾಧ್ಯಾಪಕರು ವಿದ್ಯಾಥಿರ್ಗಳಲ್ಲಿ ಜ್ಞಾನವನ್ನು ತುಂಬುವುದಷ್ಟೇ ಅಲ್ಲ ಅವರ ಜೀವನದ ಮೌಲ್ಯಗಳನ್ನು ಬೆಳೆಸುತ್ತಾರೆ. ಪೋಷಕರ ಸಹಾಯವು ವಿದ್ಯಾಥಿರ್ಗಳ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಮೇಲೆ ವಿಶ್ವಾಸ ಇಟ್ಟು ಅವರಿಗೆ ಅಗತ್ಯವಾದ ಪ್ರೋತ್ಸಾಹ ನೀಡುತ್ತಿರುವ ಪಾಲಕರ ಕಾರ್ಯ ಶ್ಲಾನೀಯ. ತಮ್ಮ ಮಕ್ಕಳಿಗೆ ಒತ್ತಡದ ಶಿಣಕ್ಕಿಂತ ಅವರ ಆಸಕ್ತಿಯ ವಿಷಯದ ಕುರಿತು ವಿದ್ಯಾಭ್ಯಾಸ ಮಾಡಿಸುವುದು ಉತ್ತಮ. ಹಾಗೆಯೇ ವಿದ್ಯಾಥಿರ್ಗಳು ಆಸಕ್ತಿಯ ವಿಷಯದ ಕುರಿತು ಪಾಲಕರ ಮನವೊಲಿಸಿ ತಿಳಿಸಿ ಹೇಳಬೇಕು. ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾನೀಯ. ಇದು ಇತರ ವಿದ್ಯಾಥಿರ್ಗಳಿಗೆ ಸ್ಪೂತಿರ್ದಾಯ ಎಂದರು.
ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್​. ವೈ. ಚಿಕ್ಕಟ್ಟಿ ಮಾತನಾಡಿ, ವಿದ್ಯಾಥಿರ್ನಿಯರು ಅತ್ಯುತ್ತಮ ಲಿತಾಂಶ ತಂದು ಕಾಲೇಜಿನ ಗೌರವವನ್ನು ಹೆಚ್ಚಿಸಿದ್ದಾರೆ. ಉತ್ತಮ ಲಿತಾಂಶ ಗಳಿಸುವುದು ಸುಲಭವಲ್ಲ. ಅದರ ಹಿಂದೆ ನಿರಂತರ ಪರಿಶ್ರಮ, ಶಿಸ್ತಿನ ಅಧ್ಯಯನ ಹಾಗೂ ಗುರಿಯತ್ತ ಇರುವ ದೃಢ ನಿಶ್ಚಯ ಅಗತ್ಯವಿದೆ. ನಮ್ಮ ವಿದ್ಯಾಥಿರ್ನಿಯರು ಅದನ್ನು ಸಾಬೀತುಪಡಿಸಿದ್ದಾರೆ. ಈ ಲಿತಾಂಶ ನಿಮ್ಮ ಭವಿಷ್ಯದ ಮೊದಲ ಮೆಟ್ಟಿಲು ಮಾತ್ರ, ಯಶಸ್ಸು ಬಂದಾಗ ವಿನಯವನ್ನು ಉಳಿಸಿಕೊಳ್ಳಬೇಕು. ವಿಲತೆ ಎದುರಾದರೆ ಧೈರ್ಯ ಕಳೆದುಕೊಳ್ಳಬಾರದು. ಜೀವನದಲ್ಲಿ ಸಾಧನೆ ಮಾಡಲು ಆತ್ಮವಿಶ್ವಾಸ, ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವ ಅವಶ್ಯಕ. ತಾವು ಇನ್ನೂ ಹೆಚ್ಚಿನ ಸಾಧನೆ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಪಿಯುಸಿಯಲ್ಲಿ ಸಾಧನೆ ಮಾಡಿದ ನಿಸರ್ಗ ವಸ್ತ್ರದ, ಸಫಿಯಾ ಅಣ್ಣಿಗೇರಿ, ಸಾಯದಾ ಎಸ್​. ಬಿ., ಪ್ರೀತಿ ಯಳವತ್ತಿ, ದಿವ್ಯ ಮುರಗೋಡ ಅವರನ್ನು ಸನ್ಮಾನಿಸಲಾಯಿತು.
ಎನ್​. ವಿ. ಜೋಶಿ, ಪ್ರೊ. ಬಿ. ವಿ. ಜೋಶಿ, ಎಂ. ಆರ್​. ಅಂಗಡಿ, ಎಸ್​. ಬಿ. ಹಿರೇಮಠ, ಶೋಭಾ ಸ್ಥಾವರಮಠ ಇತರರು ಇದ್ದರು. ಶ್ರೀಶೈಲ ಬಡಿಗೇರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net