ಕಾಂಗ್ರೆಸ್ಸಿನ ವೇಣುಗೋಪಾಲ, ಸುರ್ಜೆವಾಲ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಡಿ.ಕೆ. ಶಿವಕುಮಾರ ಅವರ ನಾಲ್ಕು ತಂಡಗಳು ಕಾಂಗ್ರೆಸ್ಸಿನಲ್ಲಿ ಸೃಷ್ಟಿಯಾಗಿವೆ. ಹೀಗಾಗಿ ಇದೊಂದು ಸಮ್ಮಿಶ್ರ ಸರ್ಕಾರದಂತೆ ಭಾಸವಾಗುತ್ತಿದೆ. ಸಂಪುಟ ವಿಸ್ತರಣೆಯಲ್ಲಿ ಅಸಮಧಾನದ ಹೊಗೆ ಆಡುತ್ತಿದ್ದು, ಯಾಗಾವ ಬೇಕಾದರೂ ಸರ್ಕಾರ ಬಿದ್ದು ಚುನಾವಣೆ ನಡೆಯಬಹುದು ಎಂದು ಮಾಜಿ ಸಚಿವ, ಶಾಸಕ ಸಿ. ಸಿ. ಪಾಟೀಲ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಸಚಿವ ಸಂಪುಟ ಪಟ್ಟಿಯಲ್ಲಿ ಪ್ರಕಟಣೆಗೊಂದ ಇಬ್ಬರ ಹೆಸರನ್ನು ತೆಗೆದು ಮತ್ತೊಬ್ಬರಿಗೆ ಅವಕಾಶ ನೀಡಲಾಗಿದೆ. ಯಾರ ಪ್ರಭಾವಕ್ಕೆ ಒಳಗಾಗಿ ಹೀಗೆ ಮಾಡಲಾಯಿತು ಎಂದು ಕಾಂಗ್ರೆಸ್ ಮುಖಂಡರು ಬಹಿರಂಗ ಪಡಿಸಬೇಕು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ತಂದಾಗ ಇದೇ ಕಾಂಗ್ರೆಸ್ ಪಕ್ಷ ವಿರೋಧಿಸಿತ್ತು. ಆದರೆ, ಈಗಿರುವ ಸಿಎಂ ಡಿ.ಕೆ. ಶಿವಕುಮಾರ ಸಂಪುಟದಲ್ಲಿ ಒಬ್ಬರೂ ಮಹಿಳಾ ಸಚಿವರಿಲ್ಲ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ ಕುರಿತು ವ್ಯಂಗ್ಯವಾಡಿದ ಸಿ.ಸಿ. ಪಾಟೀಲ, ಅವರ ತಲೆಯಲ್ಲಿ ಏನಿದೆ ಎಂಬುದೇ ಗೊತ್ತಾಗುತ್ತಿಲ್ಲ. ಗ್ರಾಪಂ ಚುನಾವಣೆಯನ್ನೇ ಸ್ಪಧಿರ್ಸದ ಹರಿಪ್ರಸಾದ ಅರಿಗೆ ಪಕ್ಷದ ಉನ್ನತ ಸ್ಥಾನ ನೀಡಲಾಗಿದೆ. ಅವರು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು ಎಂದರು.
ಕಾಂಗ್ರೆಸ್ಸಿನಲ್ಲಿ ಒಳಬೇಗುದಿ ಹೆಚ್ಚಾಗುತ್ತಿದೆ. ಸಂಪುಟ ವಿಸ್ತರಣೆ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ ಆಗಿಲ್ಲ. ಕಾಂಗ್ರೆಸ್ಸಿನಲ್ಲಿ ಅಸಮಧಾನ ಎಷ್ಟಿದೆ ಎಂಬುದು ತಿಳಿಯುತ್ತಿದೆ. ಗದಗ ಜಿಲ್ಲೆಗೆ ಸಚಿವ ಸ್ಥಾನಮಾನ ತಪ್ಪಿದ್ದು ನೋವಿನ ವಿಷಯ. ಪಕ್ಷ ಯಾವುದೇ ಇದ್ದರೂ ಸಹ ಜಿಲ್ಲೆಗೊಂದು ಜಿಲ್ಲೆಗೊಂದು ಸಚಿವ ಸ್ಥಾನ ಇರಬೇಕು. ಜಿಲ್ಲೆಗೊಂದು ಮಂತ್ರಿ ಇರಲಿಲ್ಲ ಅಂದರೆ ಅಧಿಕಾರಿಗಳು ನಿಯಂತ್ರಣಕ್ಕೆ ಸಿಗುವುದಿಲ್ಲ. ಅಭಿವೃದ್ಧಿ ಕುಂಟಿತ ಆಗುತ್ತದೆ ಎಂದರು.
ಬಿಜೆಪಿ ಕುರಿತು ಹೇಳಿಕೆ ನೀಡುತ್ತಿರುವ ಪ್ರಿಯಾಂಕ ರ್ಖಗೆ ಕುರಿತು ಮಾತನಾಡಿದ ಅವರು, ಪ್ರಿಯಾಂಕಾ ರ್ಖಗೆ ಅವರಿಗೆ ತಮಗೆ ಕೊಟ್ಟ ಸಚಿವ ಸ್ಥಾನ ಯಾವುದು ಎಂಬುದೇ ಗೊತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅವರ ಕ್ಷೇತ್ರದಲ್ಲೇ ಜೈಲು ಹಾರಿ ಮೂವರು ಅಪರಾಧಿಗಳು ಪರಾರಿ ಆಗಿದ್ದಾರೆ. ಹೀಗಿರುವಾಗ ಆಡಳಿತ ವ್ಯವಸ್ಥೆ ಸುಧಾರಿಸುವ ಬದಲಾಗಿ ಅನಗತ್ಯ ರಾಜಕಾರಣದಲ್ಲೇ ಸಮಯ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಇಸ್ಪೀಟ್, ಮರಳು, ಡ್ರಗ್ಸ್ ದಂಧೆ ಹೆಚ್ಚಾಗಿದೆ. ಮೊದಲ ವ್ಯವಸ್ಥೆ ಸುಧಾರಿಸಲು ಕೆಲಸ ಮಾಡಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ ರಾಜು ಕುರಡಗಿ, ಎಂ. ಎಸ್. ಕರೀಗೌಡರ, ಉಷಾ ದಾಸರ, ಎಂ. ಎಂ. ಹಿರೇಮಠ, ಲಿಂಗಾರಾಜ ಪಾಟೀಲ, ಮಂಜುನಾಥ ಮುಳಗುಂದ, ಅನೀಲ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ಇತರರು ಇದ್ದರು.
ಎಐಸಿಸಿ ಲೆಟರ್ ಹೆಡ್ ನಲ್ಲಿ ಸಭಾಪತಿ, ಸಭಾಧ್ಯಕ್ಷರ ಹೆಸರೂ ಸೂಚಿಸಲು ಇವರು ಯಾರು? ಸಂವಿಧಾನಿಕ ಸುದ್ದೆಯನ್ನು ಪಕ್ಷದ ಲೆಟರ್ ಹೆಡ್ ನಲ್ಲಿ ನಮೂದಿಸುವುದು ಯಾವ ಸಂವಿಧಾನ. ಪ್ರತಿ ಮಾತಿನಲ್ಲಿ ಸಂವಿಧಾನ ಪುಸ್ತಕ ಹಿಡಿದು ತಿರುಗಾಡುವ ಕಾಂಗ್ರೆಸ್ ನಾಯಕರಿಗೆ ಇದು ಅರಿವಿಗಿಲ್ಲವೇ ಎಂದು ಸಿಸಿ ಪಾಟೀಲ ಪ್ರಶ್ನಿಸಿದರು.