ಹೊಸ ಬನಶಂಕರಿ ದೇವಸ್ಥಾನದ ಶ್ರೀಚಕ್ರ ಸ್ಥಾಪನೆ

  ಬೆಟಗೇರಿಯ ಹೊಸ ಬನಶಂಕರಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಳಸಾರೋಹಣ ಕಾರ್ಯಕ್ರಮವನ್ನು ದಯಾನಮದ ಪುರಿ ಶ್ರೀಗಳು  ಉದ್ಘಾಟಿಸಿದರು. ಅನಿಲ ಗಡ್ಡಿ. ರಾವೇಂದ್ರ ಯಳವತ್ತಿ, ರ್ಪೂಣಿಮಾ ಭರದ್ವಾಡ, ಮಲ್ಲಿಕಾರ್ಜುನ ಬೆಲ್ಲದ, ಅಶೋಕ ಹೊನ್ನಳ್ಳಿ, ವಿಶ್ವನಾಥ ವನಕಿಯವರ, ಈಶ್ವರ ಯಳವತ್ತಿ, ಅಶೋಕ ಅಂಟಿನ, ಮಂಜುನಾಥ ಹರವಿ, ಪ್ರವಿಣ ಚಾವಲಾ ಇತರರು ಇದ್ದರು.
ಬೆಟಗೇರಿಯ ಹೊಸ ಬನಶಂಕರಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಳಸಾರೋಹಣ ಕಾರ್ಯಕ್ರಮವನ್ನು ದಯಾನಮದ ಪುರಿ ಶ್ರೀಗಳು ಉದ್ಘಾಟಿಸಿದರು. ಅನಿಲ ಗಡ್ಡಿ. ರಾವೇಂದ್ರ ಯಳವತ್ತಿ, ರ್ಪೂಣಿಮಾ ಭರದ್ವಾಡ, ಮಲ್ಲಿಕಾರ್ಜುನ ಬೆಲ್ಲದ, ಅಶೋಕ ಹೊನ್ನಳ್ಳಿ, ವಿಶ್ವನಾಥ ವನಕಿಯವರ, ಈಶ್ವರ ಯಳವತ್ತಿ, ಅಶೋಕ ಅಂಟಿನ, ಮಂಜುನಾಥ ಹರವಿ, ಪ್ರವಿಣ ಚಾವಲಾ ಇತರರು ಇದ್ದರು.
Published on
ಗೋಪುರದ ಕಳಸಾರೋಹಣ ಹಾಗೂ ಬನಶಂಕರಿ ಸ್ಮತಿ ಸ್ಮರಣ ಸಂಚಿಕೆ ಬಿಡುಗಡೆ
ವಿಜಯವಾಣಿ ಸುದ್ದಿಜಾಲ ಗದಗ
ಇಚ್ಛಾಶಕ್ತಿಯಿಂದ ಅಮೃತ ಳಿಗೆಯಲ್ಲಿ ಮಾಡುವ ಸಂಕಲ್ಪ ಎಲ್ಲ ಕಾರ್ಯಗಳನ್ನು ಅಮೃತಗೊಳಿಸುತ್ತದೆ ಎಂದು ಹಂಪಿ ಹೇಮಕೋಟ ಶ್ರಿಗಾಯತ್ರಿ ಪೀಠಾಧಿಪತಿ ದಯಾನಂದ ಪುರಿ ಶ್ರೀಗಳು ಹೇಳಿದರು.
ನಗರದ ಬೆಟಗೇರಿಯ ಹೊಸ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮಲ್ಲಿ ಸಂಕಲ್ಪ ಹಾಗೂ ಆತ್ಮ ಶುದ್ಧಿಯಿಂದ ಮಾಡುವ ಕಾರ್ಯಗಳು ದೇವರ ಅನುಗ್ರಹದಿಂದ ಯಶಸ್ವಿ ಆಗುತ್ತವೆ. ಆ ದೆಸೆಯಲ್ಲಿ ಹೊಸ ಬನಶಂಕರಿ ದೇವಸ್ಥಾನದ ಸಮಿತಿಯವರು ಸಮಾಜ ಬಾಂಧವರೆಲ್ಲರು ವಿಶ್ವಾಸಗಳಿಸಿ, ಸಂಕಲ್ಪದಿಂದ ಮಾಡಿದ ಫಲವಾಗಿ ಬಹಳ ದಿನಗಳಿಂದ ಸಾಧ್ಯವಾಗಿರದ ಶ್ರೀ ಚಕ್ರಸ್ಥಾಪನೆ, ಗೋಪುರ ನಿರ್ಮಾಣ ಮತ್ತು ಸಮುದಾಯ ಭವನ ನಿಮಿರ್ಸಿ ಸಮಾಜದ ಪ್ರಗತಿಗೆ ಕಾರಣರಾಗಿದ್ದಾರೆ. ಶ್ರೀಚಕ್ರ ಹಾಗೂ ಗೋಪುರ ನಿರ್ಮಾಣದಿಂದ ದೇವಾಲಯ ಮತ್ತು ಸಮಾಜ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ರಾಜ್ಯ ದೇವಾಂಗ ಸಂದ ಅಧ್ಯಕ್ಷ ರವೀಂದ್ರ ಕಲಬುಗಿರ್ ಮಾತನಾಡಿ ದೇವಸ್ಥಾನದ ಕಮಿಟಿಯವರು ನಮ್ಮ ದೇವಾಂಗ ಸಮಾಜದವರ ಜೊತೆಗೆ ಇತರೆ ಸಮಾಜದವರೊಂದಿಗೆ ಹೊಂದಿದ ಉತ್ತಮವಾದ ಬಾಂಧವ್ಯ ಸಹಕಾರದಿಂದ ಹಲವು ವರ್ಷಗಳಿಂದ ಸಾಧ್ಯವಾಗಿರದಿದ್ದ ದೇವಸ್ಥಾನದ ಗೋಪುರ ನಿರ್ಮಾಣ ಮತ್ತು ಶ್ರೀಚಕ್ರ ಸ್ಥಾಪನೆ ಕೈಗೂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಮತಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಅನಿಲ ಗಡ್ಡಿ ಮಾತನಾಡಿದರು. ರಾವೇಂದ್ರ ಯಳವತ್ತಿ, ರ್ಪೂಣಿಮಾ ಭರದ್ವಾಡ, ಮಲ್ಲಿಕಾರ್ಜುನ ಬೆಲ್ಲದ, ಅಶೋಕ ಹೊನ್ನಳ್ಳಿ, ವಿಶ್ವನಾಥ ವನಕಿಯವರ, ಈಶ್ವರ ಯಳವತ್ತಿ, ಅಶೋಕ ಅಂಟಿನ, ಮಂಜುನಾಥ ಹರವಿ, ಪ್ರವಿಣ ಚಾವಲಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net