ಆಯುರ್ವೇದ ಔಷಧಿ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್​?

ಗದಗ
ಗದಗ
Published on
ವಿಜಯವಾಣಿ ವಿಶೇಷ ಗದಗ
ಜಿಲ್ಲೆಯಲ್ಲಿ ಆಯುಷ್​ ಇಲಾಖೆ ಅಕ್ರಮಗಳು ದಿನೇ ದಿನೆ ಹೊರಬರುತ್ತಿವೆ. ಅಕ್ರಮಕ್ಕೆ ಹೂರಿನ ಹಾರಕ್ಕೆ ಮತ್ತೊಂದು ಹೂವು ಎಂಬಂತೆ ಬಳಕೆಗೆ ಯೋಗ್ಯವಲದಲ್ಲ ಔಷಧಗಳನ್ನು ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತೇ ಎಂಬ ಅನುಮಾನ ಆರೋಪಗಳು ಸರ್ಕಾರಿ ಔಷಧ ಪ್ರಯೋಗಾಲಯದ ವರದಿಗಳು ಪುಷ್ಠಿಕರಿಸುತ್ತಿವೆ.
ಹೌದು, 2024&25ನೇ ಸಾಲಿನಲ್ಲಿ ಆಯುಷ್​ ಆಸ್ಪತ್ರೆಗಳಿಗೆ ಸರಬರಾಜಾಗಿರುವ ಕೆಲವು ಔಷಧಿಗಳು ಬಳಕೆಗೆ ಯೋಗ್ಯವಲ್ಲ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಸರ್ಕಾರಿ ಔಷಧ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಬಳಕೆಗೆ ಯೋಗ್ಯವಲ್ಲದ ಔಷಧಿಗಳನ್ನೇ ಚಿಕಿತ್ಸೆಗೆ ಬರುವ ರೋಗಿಗಳಿಗೆ ಇಲಾಖೆ ಬಳಸಿದ್ದಾರೆ ಎಂಬುದಾಗಿ ಸಾರ್ವಜನಕಿರು ಆರೋಪಿಸುತ್ತಿದ್ದಾರೆ.
ಗದಗ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ 2024&25ನೇ ಸಾಲಿನಲ್ಲಿ ಮಧ್ಯಪ್ರದೇಶದ ಜಮ್ನಾ ಹರ್ಬಲ್​ ರೀಸರ್ಚ ಲಿ., ನವದೆಹಲಿಯ ರೋನ್ಪಾಲ್​ ಬಯೋಟೆಕ್​ ಪೈ.ಲಿ., ಭೂಷಣ್​ ಫಾರ್ಮಾಸ್ಯುಟಿಕಲ್ಸ್​ ಲಿ. ಕಂಪನಿಗಳು ಪೂರೈಕೆ ಮಾಡಿದ್ದ ಕೆಲವು ಔಷಧಿಗಳನ್ನು ಇದೇ ವರ್ಷದ ಮೇ ಮತ್ತು ಜೂನ್​ ನಲ್ಲಿ ಬೆಂಗಳೂರಿನ ಸರ್ಕಾರಿ ಔಷಧಿ ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಿವಿಧ ಔಷಧಿಗಳು ಬಳಕೆಗೆ ಯೋಗ್ಯವಲ್ಲ ಎಂದು ವರದಿ ನೀಡಲಾಗಿದೆ.
ಗದಗ ಜಿಲ್ಲೆಗೆ ಪೂರೈಕೆ:
ಜಮ್ನಾ ಹರ್ಬಲ್​ ರೀಸರ್ಚ ಲಿ ಹಾಗೂ ರೋನ್ಪಾಲ್​ ಬಯೋಟೆಕ್​ ಸಂಸ್ಥೆಯವರು ಜಿಲ್ಲೆಯ ಆಯುಷ್​ ಆಸ್ಪತ್ರೆಗೆ ಪೂರೈಕೆ ಮಾಡಿದ್ದ ಅಮೃತರಿಶ್ತಾ, ಚಂದನಸವ್​, ದ್ರಾಕ್ಷಾರಿಶ್ತಾ, ಅಜ್ಮೋದಾದಿ ರ್ಚೂಣ, ತ್ರಿಕಾಟು ರ್ಚೂಣ, ಸೌಭಾಗ್ಯ ಶುಂಠಿ ಪಾಕ, ಇಂದುಕಾಂತ ಗ್ರಿತಾ ಔಷಧಿ ದ್ರವ್ಯಗಳು ಸೇರಿವೆ. ಈ ಔಷಧಿ ದ್ರವ್ಯಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದ ತಜ್ಞರು "ನಾಟ್​ ಆ್​ ಸ್ಟಾಂಡರ್ಡ ಕ್ವಾಲಿಟಿ (ಎನ್​ಎಸ್​ಕ್ಯು/ಉತ್ತಮ ಗುಣಮಟ್ಟದ್ದ ಔಷಧವಲ್ಲ) ಹಾಗೂ ನೋ ಒಪಿನಿಯನ್​ ಎಂದು ಷರಾ ಬರೆದಿದ್ದಾರೆ. ಜತೆಗೆ ಈ ಔಷಧಿ ದ್ರವ್ಯಗಳನ್ನು ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ವಿತರಿಸದಂತೆ ಆಯುಷ್​ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net