ದೊಡ್ಡೂರ ಗ್ರಾಮ ಪಂಚಾಯಿತಿಯಲ್ಲಿ ಉಚಿತ ಆರೋಗ್ಯ ಶಿಬಿರ : ನೂರಾರು ಗ್ರಾಮಸ್ಥರಿಗೆ ಲಾಭ

Gadag Laxmeshwa
Gadag Laxmeshwa
Published on

Gadag: ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಜಿಲ್ಲಾ ಆಸ್ಪತ್ರೆ ಗದಗ, ಸ್ಮೈಲ್ ಫೌಂಡೇಶನ್ ಗದಗ, ಅಂಬಿಕಾ ಬ್ಲಡ್ ಬ್ಯಾಂಕ್ ಗದಗ ಹಾಗೂ ದೊಡ್ಡೂರ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಶಿಬಿರದಲ್ಲಿ ಚಿಕ್ಕ ಮಕ್ಕಳ ತಜ್ಞರಾದ ಡಾ. ವೆಂಕಟೇಶ್ ರಾಠೋಡ, ಸ್ತ್ರೀರೋಗ ತಜ್ಞರಾದ ಡಾ. ಸುನಿತಾ, ಹೃದಯರೋಗ ಹಾಗೂ ಮಧುಮೇಹ ತಜ್ಞರಾದ ಡಾ. ಸುನಿಲ್ ಹಬೀಬ, ಹಾಗು ಡಾ. ರವಿ ಕಡಗಾವಿ ಅವರು ಭಾಗವಹಿಸಿ ಗ್ರಾಮಸ್ಥರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಸಲಹೆಗಳನ್ನು ನೀಡಿದರು. ಮಕ್ಕಳ ಆರೋಗ್ಯ, ಮಹಿಳೆಯರ ಆರೋಗ್ಯ, ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಮಧುಮೇಹ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಕೃಷ್ಣಾ ಲಮಾಣಿ, ನಾನಪ್ಪ ಲಮಾಣಿ, ಶಂಕ್ರಣ್ಣ ಲಮಾಣಿ, ನಿಂಗಪ್ಪ ಬಂಕಾಪೂರ, ಫಕ್ಕೀರಗೌಡ್ರ ಭರಮಗೌಡ್ರ ಉಪಸ್ಥಿತರಿದ್ದರು. ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ರೀಯಾಜ ಖತೀಬ್ ಮಾತನಾಡಿ ಆರೋಗ್ಯ ಪ್ರತಿಯೊಬ್ಬರಿಗೂ ಅವಶ್ಯ, ಇಂದಿನ ಅಧುನಿಕ ದಿನಮಾನದಲ್ಲಿ ಯಾರು ಆರೋಗ್ಯದ ಬಗ್ಗೆ ಖಾಳಜಿ ತಗೆದುಕೊಳ್ಳುತ್ತಿಲ್ಲಾ, ಅತಿಯಾದ ಒತ್ತಡದಿಂದ ಬದುಕು ಸಾಗಿಸುತ್ತಿರಿ, ಇದರಿಂದ ಬಿಪಿ, ಶುಗರ್ ಬರುತ್ತದೆ, ಆದ್ದರಿಂದ ಅದಷ್ಟು ಒತ್ತಡ ರಹಿತ ಬದುಕ್ಕನ್ನು ಕಟ್ಟಿಕೊಳ್ಳಲು ಎಲ್ಲರೂ ಕಾಳಜಿ ವಹಿಸಿ ಎಂದರು..

ಕಾರ್ಯಕ್ರಮ ದಲ್ಲಿ ಪಂಚಾಯಿತಿ ಕಾರ್ಯದರ್ಶಿಗಳಾದ ರಾಮಯ್ಯ ಗುರವಿನರವರು ಕಾರ್ಯಕ್ರಮದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಊರಿನ ಹಿರಿಯರಾದ ಎನ್.ಎಚ್. ಹಡಪದರವರು, ಗುಡ್ಡಪ್ಪ ಹಡಪದರವರು, ಅಮರಪ್ಪ ಗುಡಗುಂಟಿರವರು, ರವಿ ಭಜಕ್ಕನವರು ಸೇರಿದಂತೆ ಅನೇಕ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಗ್ರಾಮೀಣ ಭಾಗದಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಅಗತ್ಯವಾಗಿದ್ದು, ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ವೈದ್ಯರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net