ಸೆ. 9 ರಂದು ಸಭಾಪತಿ, ಉಪಸಭಾಪತಿ ಸೇರಿದಂತೆ ಹಲವರಿಗೆ ಸನ್ಮಾನ: ಡಿ. ಆರ್​ ಪಾಟೀಲ.

ಗದಗ ನಗರದಲ್ಲಿ ವಿವಿಧ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವ ಕುರಿತು ಡಿ.ಆರ್​. ಪಾಟೀಲ ಸುದ್ದಿಗೋಷ್ಠಿ ನಡೆಸಿದರು.  ಕೃಷ್ಣಗೌಡ ಪಾಟೀಲ, ರಾಮಕೃಷ್ಣ ದೊಡ್ಡಮನಿ, ಟಿ. ಈಶ್ವರ, ಬಿ. ಬಿ ಅಸೂಟಿ,  ಹುಬ್ಬಳ್ಳಿ, ವಿವೇಕ ಯಾವಗಲ್​ ಇದ್ದರು.
ಗದಗ ನಗರದಲ್ಲಿ ವಿವಿಧ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವ ಕುರಿತು ಡಿ.ಆರ್​. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಕೃಷ್ಣಗೌಡ ಪಾಟೀಲ, ರಾಮಕೃಷ್ಣ ದೊಡ್ಡಮನಿ, ಟಿ. ಈಶ್ವರ, ಬಿ. ಬಿ ಅಸೂಟಿ, ಹುಬ್ಬಳ್ಳಿ, ವಿವೇಕ ಯಾವಗಲ್​ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ನಾಗರಿಕ ಸಮಿತಿಯಿಂದ ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೇರಿದ ಗಣ್ಯರಿಗೆ ಸನ್ಮಾನ ಸಮಾರಂಭ ಸೆ. 9, 2026 ರಂದು ಕಾಟನ್​ ಸೇಲ್​ ಸೊಸೈಟಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಿ. ಆರ್​. ಪಾಟೀಲ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸುವರು, ಶಾಸಕ ಡಾ. ಹೆಚ್​. ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದರು. ವಿಧಾನ ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಆಗಿರುವ ರೋಣದ ಶಾಸಕ ಜಿ.ಎಸ್​. ಪಾಟೀಲ ಹಾಗೂ ರಾಜ್ಯ ವಿಧಾನ ಪರಿಷತ್​ ಸಭಾಪತಿ ಸಲೀಂ ಅಹ್ಮದ್​ ಅವರನ್ನು ಸನ್ಮಾನಿಸಲಾಗುವುದು. ಉನ್ನತ ಶಿಕ್ಷಣ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಬಸವರಾಜ ರಾಯರೆಡ್ಡಿ ಹಾಗೂ ವಿಧಾನ ಪರಿಷತ್​ ಉಪ ಸಭಾಪತಿಯಾಗಿ ಆಯ್ಕೆ ಆಗಿರುವ ಉಮಾಶ್ರೀ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ವಿಧಾನಸಭಾ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವ ಮಂಕಾಳ ವೈದ್ಯ, ಕರ್ನಾಟಕ ಚೇಂಬರ್​ ಆಫ್​ ಕಾಮರ್ಸ ಹುಬ್ಬಳ್ಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಜಿ. ಕೆ. ಆದಪ್ಪಗೌಡ್ರ ಅವರನ್ನು ಸನ್ಮಾನಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ. ಸಿ. ಪಾಟೀಲ, ಎನ್​. ಹೆಚ್​. ಕೋನರಡ್ಡಿ, ಡಾ. ಚಂದ್ರು ಲಮಾಣಿ, ಪ್ರೊ. ಎಸ್​. ವಿ. ಸಂಕನೂರ, ಎಫ್​. ಹೆಚ್​. ಜಕ್ಕಪ್ಪನವರ, ಜಿ.ಎಸ್​. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕೃಷ್ಣಾ ಪರಾಪೂರ, ಶಕುಂತಲಾ ಅಕ್ಕಿ, ಸುಜಾತ ದೊಡ್ಡಮನಿ, ವಾಸಣ್ಣ ಕುರಡಗಿ, ಸಿದ್ದಲಿಂಗೇಶ್ವರ ಪಾಟೀಲ ಅವರು ಭಾಗವಹಿಸಲಿದ್ದಾರೆ ಎಂದರು.
ಮಾಜಿ ಸಚಿವ ಬಿ.ಆರ್​. ಯಾವಗಲ್ಲ ಮಾತನಾಡಿ, ಒಂದೇ ಜಿಲ್ಲೆಯ ಇಬ್ಬರು ಜನಪ್ರತಿನಿಧಿಗಳು ಪರಿಷತ್​ ಹಾಗೂ ವಿಧಾನಸಭೆಯ ಅಧ್ಯಕ್ಷರಾಗಿದ್ದು ಸಂತಸ ತಂದಿದೆ. ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ಸಲೀಂ ಅಹ್ಮದ್​ ಹಾಗೂ ಜಿ. ಎಸ್​ ಪಾಟೀಲರರಿಗೆ ಸಿಕ್ಕಿದೆ. ಪಕ್ಷಾತಿತವಾಗಿ ಪ್ರೀತಿ, ವಿಶ್ವಾಸ ಗಳಿಸಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ. ಎಸ್​ ಗಡ್ಡದೇವರಮಠ, ಸಿದ್ದಲಿಂಗೇಶ ಪಾಟೀಲ, ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net