ಕುಮಾರವ್ಯಾಸ ಭಾರತ ಪ್ರಸಾರಕ್ಕೆ ಗಮಕ ಕಲೆ ಅಗತ್ಯ: ವಿವೇಕಾನಂದಗೌಡ ಪಾಟೀಲ

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ  ಗಮನ ವಾಚನ ವ್ಯಾಖ್ಯಾನ ಕಾರ್ಯಕ್ರಮ ಜರುಗಿತು. ವಿವೇಕಾನಂದಗೌಡ ಪಾಟೀಲ, ಗುರುಮೂತಿರ್ ದೇಶಪಾಂಡೆ, ಸಂಧ್ಯಾ ರಮೇಶ,  ಮೀನಾ ಶ್ರೀಪಾದ, ದತ್ತಪ್ರಸನ್ನ ಪಾಟೀಲ ಇತರರು ಇದ್ದರು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಮನ ವಾಚನ ವ್ಯಾಖ್ಯಾನ ಕಾರ್ಯಕ್ರಮ ಜರುಗಿತು. ವಿವೇಕಾನಂದಗೌಡ ಪಾಟೀಲ, ಗುರುಮೂತಿರ್ ದೇಶಪಾಂಡೆ, ಸಂಧ್ಯಾ ರಮೇಶ, ಮೀನಾ ಶ್ರೀಪಾದ, ದತ್ತಪ್ರಸನ್ನ ಪಾಟೀಲ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಕುಮಾರವ್ಯಾಸನು ಹಾಡಿದನೆಂದರೆ ಕಲಿಯುವ ದ್ವಾಪರವಾಗುವುದು ಎಂಬ ಕುವೆಂಪು ಅವರ ಸಾಲುಗಳು ಗದುಗಿನ ಭಾರತ ಕಾವ್ಯದ ಹಿರಿಮೆಯನ್ನು ಸಾರುತ್ತದೆ. ರೂಪಕಗಳ ಮೂಲಕ ಮಹಾಭಾರತದ ಅನೇಕ ಪ್ರಸಂಗಗಳನ್ನು ತನ್ನ ಕಾವ್ಯಕುಸರಿಯಿಂದ ಕಲಾತ್ಮಕವಾಗಿ ಕುಮಾರವ್ಯಾಸ ಕಟ್ಟಿಕೊಟ್ಟಿದ್ದಾನೆ ಎಂದು ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಕುಮಾರವ್ಯಾಸ ಭಾರತದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಅವರು, ಇಂತಹ ಕಾವ್ಯವನ್ನು ಹಾಡುವ ಮತ್ತು ವ್ಯಾಖ್ಯಾನಿಸುವ ಮೂಲಕ ಸಹೃದಯರಲ್ಲಿ ಅನಿರ್ವಚನೀಯ ಆನಂದವನ್ನು ಗಮಕಿಗಳು ಮಾಡುತ್ತಾ ಬಂದಿದ್ದಾರೆ. ಗಮಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಸಮುದಾಯದಿಂದ ನಡೆಯಬೇಕು. ಕುಮಾರವ್ಯಾಸ ಪರಿಸರದ ಈ ನೆಲದಲ್ಲಿ ಗಮಕಿಗಳನ್ನು ಹೆಚ್ಚು ರೂಪಿಸುವ ಹಿನ್ನೆಲೆಯಲ್ಲಿ ಇಲ್ಲಿಯ ಸಂಗೀತ ಪಾಠಶಾಲೆಗಳು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಕುಮಾರವ್ಯಾಸ ಪ್ರತಿಷ್ಠಾನ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಕನ್ನಡದ ಶ್ರೇಷ್ಠ ಕವಿ ಕುಮಾರವ್ಯಾಸನನ್ನು ವಿದ್ಯಾಥಿರ್ಗಳಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಪ್ರತಿಷ್ಠಾನ ಹಾಗೂ ಪರಿಷತ್ತಿನ ವತಿಯಿಂದ ಯೋಜನೆಯನ್ನು ರೂಪಿಸಲಾಗಿದೆ. ಹಳಗನ್ನಡ ಕಾವ್ಯದ ಬಗೆಗೆ ಆಸಕ್ತಿ ಮೂಡಿಸಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದರು.
ರಾಹುಲ ಗಿಡ್ನಂದಿ, ಸುಮನ ಪಾಟೀಲ, ಚಂದ್ರಶೇಖರ ವಸ್ತ್ರದ, ಅಂದಾನಪ್ಪ ವಿಭೂತಿ, ವಿ. ಎಸ್​. ದಲಾಲಿ, ಎಸ್​. ಪಿ. ಹೊಂಬಳ, ರವೀಂದ್ರ ಜೋಶಿ, ಈಶ್ವರಪ್ಪ ಕುಬುಸದ, ರಾಜೇಂದ್ರ ಕುಲಕಣಿರ್, ಜೆ. ಎ. ಪಾಟೀಲ, ಯಲ್ಲಪ್ಪ ಹಂದ್ರಾಳ, ಬೂದೇಶ ಮಜ್ಜಿಗುಡ್ಡ, ಮಲ್ಲಿಕಾರ್ಜುನ ಬಾರಕೇರ, ರತ್ನಕ್ಕ ಪಾಟೀಲ, ಶಾಂತಾಬಾಯಿ ಕುಲಕಣಿರ್, ಎನ್​. ವಿ. ಪುರಾಣಿಕ, ಪ್ರಶಾಂತ ಪಾಟೀಲ, ಷಡರಿ ಮೆಣಸಿನಕಾಯಿ, ಸಿ.ಎಂ.ಮಾರನಬಸರಿ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net