ಡಾ. ರಾಜಕುಮಾರ ಸ್ಮರಣೆ, ಅವರ ಮೌಲ್ಯಗಳು ಇಂದಿಗೂ ಪ್ರೇರಣೆ: ಜಿಲ್ಲಾಧಿಕಾರಿ ಸಿ. ಎನ್​. ಶ್ರಿಧರ

ಗದಗ ಜಿಲ್ಲಾಡಳಿತ ಭವನದಲ್ಲಿ ಡಾ. ರಾಜಕುಮಾರ ಜನ್ಮದಿನಾಚರಣೆ ಆಚರಿಸಲಾಯಿತು. ಸಿ.ಎನ್​. ಶ್ರೀಧರ, ಬಸವರಾಜ ಮನಗುಂಡಿ, ಡಾ.ದುರಗೇಶ.ಕೆ.ಆರ್​., ಸಿ. ಆರ್​. ಮುಂಡರಗಿ, ಡಾ. ನಂದಾ ಹಣಬರಹಟ್ಟಿ, ವಸಂತ ಮಡ್ಲೂರ, ಆರ್​ ಎಸ್​ ಬುರಡಿ, ವಿಠಲ್​ ಪರಾಪುರ, ನಾಗರಾಜ ಗುತ್ತಿ, ಮಲ್ಲಿಕಾರ್ಜುನ ಸಂಗಾಪುರ, ವಿನಾಯಕ ಕಜಕೋಶಿ, ಮಲ್ಲೇಶ ಪರಾಪುರ, ರಾಮು ಬಳ್ಳಾರಿ, ಮೇನಾ ಕೊಟ್ಟೂರು ಇತರರು ಇದ್ದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಡಾ. ರಾಜಕುಮಾರ ಜನ್ಮದಿನಾಚರಣೆ ಆಚರಿಸಲಾಯಿತು. ಸಿ.ಎನ್​. ಶ್ರೀಧರ, ಬಸವರಾಜ ಮನಗುಂಡಿ, ಡಾ.ದುರಗೇಶ.ಕೆ.ಆರ್​., ಸಿ. ಆರ್​. ಮುಂಡರಗಿ, ಡಾ. ನಂದಾ ಹಣಬರಹಟ್ಟಿ, ವಸಂತ ಮಡ್ಲೂರ, ಆರ್​ ಎಸ್​ ಬುರಡಿ, ವಿಠಲ್​ ಪರಾಪುರ, ನಾಗರಾಜ ಗುತ್ತಿ, ಮಲ್ಲಿಕಾರ್ಜುನ ಸಂಗಾಪುರ, ವಿನಾಯಕ ಕಜಕೋಶಿ, ಮಲ್ಲೇಶ ಪರಾಪುರ, ರಾಮು ಬಳ್ಳಾರಿ, ಮೇನಾ ಕೊಟ್ಟೂರು ಇತರರು ಇದ್ದರು.
Published on
ವರನಟ ಡಾ. ರಾಜಕುಮಾರ ಜನ್ಮದಿನಚಾರಣೆ
ವಿಜಯವಾಣಿ ಸುದ್ದಿಜಾಲ ಗದಗ
ಕನ್ನಡ ಚಲನ ಚಿತ್ರರಂಗದ ಅಪ್ರತಿಮ ನಟ ಡಾ. ರಾಜಕುಮಾರ ಅವರ ವ್ಯಕ್ತಿತ್ವ, ಮೌಲ್ಯಗಳು ಮತ್ತು ಸಮಾಜದ ಮೇಲಿನ ಬದ್ಧತೆ ಇಂದಿನ ಯುವಪೀಳಿಗೆಗೆ ದಿಕ್ಕು ತೋರಿಸುತ್ತವೆ. ಡಾ. ರಾಜಕುಮಾರ ಅವರು ಒಬ್ಬ ವ್ಯಕ್ತಿ ಅಲ್ಲ. ಕನ್ನಡ ಚಿತ್ರರಂಗಕ್ಕೆ ಶಕ್ತಿ ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ. ರಾಜಕುಮಾರ ಜನ್ಮದಿನಾಚರಣೆ ಕಾರ್ಯಕ್ರಮವ ಉದ್ಘಾಟಿಸಿ ಮಾತನಾಡಿದ ಅವರು, ಡಾ. ರಾಜಕುಮಾರ ಅವರು ಸರಳತೆ, ಶಿಸ್ತಿನ ಜೀವನ ಮತ್ತು ಮಾನವೀಯತೆಗಾಗಿ ಹೆಸರಾಗಿದ್ದ ಮಹಾನ್​ ವ್ಯಕ್ತಿ. ಅವರ ನಡೆ-ನುಡಿಗಳು ಸಮಾಜಕ್ಕೆ ಮಾದರಿಯಾಗಿದ್ದು, ಯುವಕರು ಅವರ ಜೀವನದಿಂದ ಪಾಠಗಳನ್ನು ಕಲಿಯಬೇಕು. ರಾಜಕುಮಾರ ಅವರು ಕನ್ನಡ ಚಿತ್ರರಂಗದಲ್ಲಿ ಸಾಧಿಸಿದ ಯಶಸ್ಸಿನ ಜೊತೆಗೆ ಕನ್ನಡ ಭಾಷೆ, ಸಂಸತಿ ಮತ್ತು ನಾಡಿನ ಮೇಲಿನ ಅಪಾರ ಪ್ರೀತಿ ಎಲ್ಲರಿಗೂ ಪ್ರೇರಣೆಯಾಗಿದೆ, ಡಾ. ರಾಜಕುಮಾರ ಅವರಂತಹ ವ್ಯಕ್ತಿತ್ವಗಳು ಸಮಾಜದಲ್ಲಿ ಸದಾ ಸ್ಮರಣೀಯ ಆಗಿರುತ್ತದೆ ಎಂದರು. ಪ್ರೀತಿನೆ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳ್ವೆಗೆ ಎಂಬ ಡಾ. ರಾಜ್​ ಕುಮಾರ ಅವರ ಗೀತೆಯನ್ನು ವೇದಿಕೆ ಮೇಲೆ ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಹಾಡಿದರು.
ಅಖಿಲ ಕರ್ನಾಟಕ ಡಾ. ರಾಜಕುಮಾರ್​ ಅಭಿಮಾನಿಗಳ ಸಂಘಗಳ ಒಕ್ಕೂಟದ ಗೌರವಧ್ಯಕ್ಷ ಬಸವರಾಜ ಮನಗುಂಡಿ ಮಾತನಾಡಿ, ರಂಗಭೂಮಿಯಿಂದ ಬೆಳ್ಳಿ ತೆರೆಯವರೆಗೆ ವರನಟರಾದ ಡಾ. ರಾಜಕುಮಾರ್​ ಅವರ ಮೊದಲಿನ ಹೆಸರು ಮುತ್ತುರಾಜು. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗುಬ್ಬಿ ವೀರಣ್ಣನವರ ರಂಗಭೂಮಿ ನಾಟಕ ಕಂಪನಿಯನ್ನು ಸೇರುವ ಮೂಲಕ ತಮ್ಮ ವೃತ್ತೀಜಿವನವನ್ನು ಪ್ರಾರಂಭಿಸಿದರು. ಬಾಲನಟನಾಗಿ ಅಭಿನಯ ಪಯಣ ಆರಂಭಿಸಿದ ಇವರು, 1954 ರಲ್ಲಿ ತೆರೆಕಂಡ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪನೆ ಮಾಡಿದರು. ಇಂದಿನ ಕಾಲದ ನಟರು ತೆರೆಯ ಮೇಲೆ ಧೂಮಪಾನ ಮತ್ತು ಮದ್ಯಪಾನದ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಡಾ. ರಾಜ ಅವರು ತಮ್ಮ ಇಡೀ ಜೀವನದಲ್ಲಿ ಒಂದೇ ಒಂದು ಚಿತ್ರದಲ್ಲೂ ಇಂತಹ ಸಮಾಜಕ್ಕೆ ತಪ್ಪು ಸಂದೇಶ ನೀಡುವ ದೃಶ್ಯಗಳಲ್ಲಿ ನಟಿಸಲಿಲ್ಲ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ದುರಗೇಶ.ಕೆ.ಆರ್​., ಜಿಲ್ಲಾ ಪಂಚಾಯತ್​ ಉಪಕಾರ್ಯದಶಿರ್ ಸಿ. ಆರ್​. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಡಿಡಿಪಿಐ ಆರ್​ ಎಸ್​ ಬುರಡಿ, ವಿಠಲ್​ ಪರಾಪುರ, ನಾಗರಾಜ ಗುತ್ತಿ, ಮಲ್ಲಿಕಾರ್ಜುನ ಸಂಗಾಪುರ, ವಿನಾಯಕ ಕಜಕೋಶಿ, ಮಲ್ಲೇಶ ಪರಾಪುರ, ರಾಮು ಬಳ್ಳಾರಿ, ಮೇನಾ ಕೊಟ್ಟೂರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net