ಗದಗ: ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಮಾರಾಟ ಮಳಿಗೆಗಳಲ್ಲಿ ಸ್ಥಳಿಯರಿಗೆ ಅವಕಾಶ ಕಲ್ಪಿಸಬೇಕು ಎಂದು ವೀರಶೈವ ಲಿಂಗಾಯ ವೇದಿಕೆಯಿಂದ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ ಅವರಿಗೆ ಮನವಿ ಸಲ್ಲಿಸಲಾಯಿತು. ಏ. 1 ರಿಂದ 4ರ ವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ. ಕೇವಲ ನಾಲ್ಕು ದಿನಗಳ ಕಾಲ ಇರುವ ಜಾತ್ರಾ ಮಹೋತ್ಸವು ತಿಂಗಳಾನುಗಟ್ಟಲೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಳಿಗೆಗಳನ್ನು ಹಾಕುಲು ಹೊರ ರಾಜ್ಯದವರಿಗೆ ಅನುಮತಿ ಕೊಡುತ್ತಾರೆ. ಸ್ಥಳಿಯರಿಗೆ ಅವಕಾಶ ನೀಡಬೇಕು. ಜಾತ್ರಾ ಮಹೋತ್ಸವಕ್ಕೆ ದೇಣಿಗೆಗೆ, ಸೇವೆಗೆ ಸ್ಥಳಿಯ ಭಕ್ತರು ಬೇಕು. ಆದರೆ, ವ್ಯವಹಾರಕ್ಕೆ ಮಾತ್ರ ಅನ್ಯ ರಾಜ್ಯದವರು ಬೇಕೆ? ಎಂದು ಪ್ರಶ್ನಿಸಿ ಜಾತ್ರಾ ಮಹೋತ್ಸವದ ಅಧ್ಯರಾದ ವಿನಾಯಕ ಮಾನ್ವಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹೇಶ ರೋಖಡೆ, ರಾಜು ಗದ್ದಿ, ಪಿ. ಎಸ್. ಕಾಳೆ, ರಾಜು ದಮಾಮ, ಕುಮಾರ ನಡಗೇರಿ, ಶರಣೇಶ ಇಟಗಿ, ವೆಂಕಟೇಶ ದೊಡ್ಡಮನಿ, ಅಶೋಕ ಭಜಂತ್ರ, ಸಂಜೀವ ವಾಲ್ಮೀಕಿ, ರವಿ ಜಾಲಗಾರ, ರಾಮು ಗೌಡರ, ಸದಾನಂದ ಸಿಂಗ್ ರ್ಗುಲಹೋಸೂರ ಹಲವರು ಇದ್ದರು.