ವಾಣಿಜ್ಯೋದ್ಯಮ ಸಂಸ್ಥೆ ಉದ್ಯೋಗ ಮೇಳ ಪೂರ್ವಭಾವಿ ಸಭೆ

 ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಏಪ್ರಿಲ್​ ಎರಡನೇ ವಾರದಲ್ಲಿ ಹಮ್ಮಿಕೊಳ್ಳುತ್ತಿರುವ ಬೃಹತ್​ ಉದ್ಯೋಗ ಮೇಳ ಕುರಿತು ಕೆ.ಎಚ್​. ಪಾಟೀಲ ಸಭಾಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ನಟರಾಜ ಮೂರಶಿಳ್ಳಿ, ಶರಣಬಸಪ್ಪ ಗುಡಿಮನಿ, ಚನ್ನವಿರಪ್ಪ ಪ್ರಭಣ್ಣ ಹುಣಸಿಕಟ್ಟಿ, ಭರಮಪ್ಪ ಬಡಪ್ಪಳವರ, ಕೊಟ್ರಗೌಡ ಹಿರೇಗೌಡ್ರ, ಅಜಯಕುಮಾರ ಸಿ., ಜಗದೀಶಸಿಂಗ ಬ್ಯಾಳಿ,  ಶರಣಬಸವರಾಜ ಅಂಗಡಿ, ಭಾಗ್ಯಶ್ರೀ ವಿ. ಎಂ, ಶಿವಪ್ಪ ಕುರಿ, ಕಿಶೋರ ರಾಯ್ಕರ ಇತರರು ಇದ್ದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಏಪ್ರಿಲ್​ ಎರಡನೇ ವಾರದಲ್ಲಿ ಹಮ್ಮಿಕೊಳ್ಳುತ್ತಿರುವ ಬೃಹತ್​ ಉದ್ಯೋಗ ಮೇಳ ಕುರಿತು ಕೆ.ಎಚ್​. ಪಾಟೀಲ ಸಭಾಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ನಟರಾಜ ಮೂರಶಿಳ್ಳಿ, ಶರಣಬಸಪ್ಪ ಗುಡಿಮನಿ, ಚನ್ನವಿರಪ್ಪ ಪ್ರಭಣ್ಣ ಹುಣಸಿಕಟ್ಟಿ, ಭರಮಪ್ಪ ಬಡಪ್ಪಳವರ, ಕೊಟ್ರಗೌಡ ಹಿರೇಗೌಡ್ರ, ಅಜಯಕುಮಾರ ಸಿ., ಜಗದೀಶಸಿಂಗ ಬ್ಯಾಳಿ, ಶರಣಬಸವರಾಜ ಅಂಗಡಿ, ಭಾಗ್ಯಶ್ರೀ ವಿ. ಎಂ, ಶಿವಪ್ಪ ಕುರಿ, ಕಿಶೋರ ರಾಯ್ಕರ ಇತರರು ಇದ್ದರು.
Published on
ನಿರುದ್ಯೋಗ ನಿವಾರಣೆಗೆ ಉದ್ಯೋಗಮೇಳ ಅವಶ್ಯ& ನಟರಾಜ ಮೂರಶಿಳ್ಳಿ
ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಏಪ್ರಿಲ್​ ಎರಡನೇ ವಾರದಲ್ಲಿ ಹಮ್ಮಿಕೊಳ್ಳುತ್ತಿರುವ ಬೃಹತ್​ ಉದ್ಯೋಗ ಮೇಳ ಕುರಿತು ಕೆ.ಎಚ್​. ಪಾಟೀಲ ಸಭಾಭವನದಲ್ಲಿ ಇತ್ತೀಚೆಗೆ ಪೂರ್ವಭಾವಿ ಸಭೆ ಜರುಗಿತು.
ಚಾರ್ರ್ಟಡ ಅಕೌಂಟೆಂಟ್​ ನಟರಾಜ ಮೂರಶಿಳ್ಳಿ ಮಾತನಾಡಿ, ಉದ್ಯೋಗ ಮೇಳದಿಂದ ಸಾಕಷ್ಟು ವಿದ್ಯಾಥಿರ್ಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಕಾಲೇಜಿನಿಂದ ಹೊರ ಬರುವ ವಿದ್ಯಾಥಿರ್ಗಳಿಗೆ ಕೌಶಲ್ಯದ ಕೊರತೆ ಇರುತ್ತದೆ. ಕೆಲಸ ಸಿಗದೇ ನಿರುದ್ಯೋಗಿ ಆಗುತ್ತಾರೆ. ಈ ನಿಟ್ಟಿನಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ. ಈ ಹಿಂದೆ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 1000ಕ್ಕೂ ಹೆಚ್ಚು ವಿದ್ಯಾಥಿರ್ಗಳಿಗೆ ಉದ್ಯೋಗ ಲಭಿಸಿತ್ತು. ಈ ನಿಟ್ಟಿನಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಏ. 2ನೇ ವಾರದಲ್ಲಿ ಬೃಹತ್​ ಪ್ರಮಾಣದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ಲೇಸಮೆಂಟ್​ ಆಫೀಸರ್​ ಗಿರೀಶ ಮಾತನಾಡಿ, ಈಗಾಗಲೇ ಸಾಕಷ್ಟು ಜಿಲ್ಲೆಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳುವ ಮುಖಾಂತರ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಬೇಕೆಮದು ವಾಣಿಜ್ಯೋದ್ಯಮ ಸಂಸ್ಥೆಯಿಂದ ಹಮ್ಮಿಕೊಳ್ಳುತ್ತಿರುವ ಬೃಹತ್​ ಉದ್ಯೋಗ ಮೇಳದಲ್ಲಿ 60ಕ್ಕೂ ಹೆಚ್ಚು ಬೃಹತ್​ ಕಂಪನಿಗಳು ಪಾಲ್ಗೊಳ್ಳುವ ನಿರೀೆ ಇದೆ. ಏಪ್ರಿಲ್​ ತಿಂಗಳಲ್ಲಿ ಪರೀೆಗಳು ಸಂರ್ಪೂಣವಾಗಿ ಮುಗಿದಿರುವ ಕಾರಣ ಏಪ್ರಿಲ್​ ತಿಂಗಳಲ್ಲಿ ಮೇಳ ಹಮ್ಮಿಕೊಳ್ಳುವುದು ಸೂಕ್ತ ಎಂದರು.
ವಾಣೀಜ್ಯೋದ್ಯಮ ಸಂಸ್ಥೆಯ ಅಧ್ಯ ಶರಣಬಸಪ್ಪ ಸಂಗಪ್ಪ ಗುಡಿಮನಿ ಮಾತನಾಡಿ, ಸಂಸ್ಥೆಯು 50 ವರ್ಷಗಳಿಂದ ಸತತ ಸೇವಾ ಭಾವನೆಯೊಂದಿಗೆ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತ ತನ್ನ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮವನ್ನು ಯಶಸ್ವಿಯಾಗಿ ಆಚರಣೆ ಮಾಡಿಕೊಂಡಿದೆ. ಈ ಹಿಂದೆ ಸಂಸ್ಥೆಯಿಂದ ಬೃಹತ್​ ಪ್ರಮಾಣದಲ್ಲಿ ಉದ್ಯೋಗಮೇಳವನ್ನು ಹಮ್ಮಿಕೊಂಡಿತ್ತು. ಈ ಉದ್ಯೋಗ ಮೇಳದಲ್ಲಿ 5 ಸಾವಿರಕ್ಕೂ ಹೆಚ್ಚು ಅಭ್ಯಥಿರ್ಗಳು ಪಾಲ್ಗೊಂಡಿದ್ದರು. ಇದರಲ್ಲಿ 1000ಕ್ಕೂ ಅಧಿಕ ಯುವಕರಿಗೆ ಉದ್ಯೋಗ ದೊರಕಿರುವುದು ಸಂತೋಷ ತಂದಿದೆ. ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಬೃಹತ್​ ಪ್ರಮಾಣದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಗದಗ ಬೆಟಗೇರಿ ಅವಳಿ ನಗರದ ಪದವಿ ಪೂರ್ವ, ಪದವಿ, ನಸಿರ್ಂಗ್​, ಇಂಜನಿಯರಿಂಗ್​, ಬಿಸಿಎ, ಐಟಿಐ, ಬಿಬಿಎ, ಡಿಪ್ಲೋಮಾ ಇನ್ನೀತರ ಪದವಿದರ ಕಾಲೇಜುಗಳ ಪ್ರಾಚಾರ್ಯರರು ಭಾಗವಹಿಸಿದ್ದರು. ಚನ್ನವಿರಪ್ಪ ಪ್ರಭಣ್ಣ ಹುಣಸಿಕಟ್ಟಿ, ಭರಮಪ್ಪ ಬಡಪ್ಪಳವರ, ಕೊಟ್ರಗೌಡ ಹಿರೇಗೌಡ್ರ, ಅಜಯಕುಮಾರ ಸಿ., ಜಗದೀಶಸಿಂಗ ಬ್ಯಾಳಿ, ಶರಣಬಸವರಾಜ ಅಂಗಡಿ, ಭಾಗ್ಯಶ್ರೀ ವಿ. ಎಂ, ಶಿವಪ್ಪ ಕುರಿ, ಕಿಶೋರ ರಾಯ್ಕರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net