ಕೆ. ಎಚ್​. ಪಾಟೀಲ ಜನ್ಮಜಯಂತಿ : ಅನ್ನ ವಸ್ತ್ರ ದಾನದ ಮೂಲಕ ಗೌರವ ನಮನ

ಗದಗ ತಾಲೂಕಿನ ಹುಲಕೋಟಿಯ ಸುರಭಿ ವೃದ್ಧಾಶ್ರಮದಲ್ಲಿ ಕೆ. ಎಚ್​. ಪಾಟೀಲ ಜನ್ಮದಿನ ನಿಮಿತ್ಯ ವಿವಿಧ ಸಾಮಗ್ರಿಗಳನ್ನು ವಿತರಿಸಲಾಯಿತು. ಎಸ್​. ಆರ್​. ನೀಲಗುಂದ, ಸುಧಾ ಕೌಜಗೇರಿ, ಅಪ್ಪಣ್ಣ ಹಂಜೆ, ಬಸವರಾಜ ಬಳಗಾನುರುಮಠ, ಸಾರಿಕಾ ಪಾಟೀಲ ಇತರರು ಇದ್ದರು.
ಗದಗ ತಾಲೂಕಿನ ಹುಲಕೋಟಿಯ ಸುರಭಿ ವೃದ್ಧಾಶ್ರಮದಲ್ಲಿ ಕೆ. ಎಚ್​. ಪಾಟೀಲ ಜನ್ಮದಿನ ನಿಮಿತ್ಯ ವಿವಿಧ ಸಾಮಗ್ರಿಗಳನ್ನು ವಿತರಿಸಲಾಯಿತು. ಎಸ್​. ಆರ್​. ನೀಲಗುಂದ, ಸುಧಾ ಕೌಜಗೇರಿ, ಅಪ್ಪಣ್ಣ ಹಂಜೆ, ಬಸವರಾಜ ಬಳಗಾನುರುಮಠ, ಸಾರಿಕಾ ಪಾಟೀಲ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ತನು ಮನ ಧನದಿಂದ ಸರ್ಮಪಿಸಿಕೊಂಡು ಜನಸಾಮಾನ್ಯರ ಏಳಿಗೆಯನ್ನೇ ತಮ್ಮ ಉಸಿರಾಗಿಸಿಕೊಂಡು ಬಾಳಿದ ಕೆ.ಎಚ್​. ಪಾಟೀಲರು ರಾಜಕೀಯ, ಔದ್ಯೋಗಿಕ, ಶೈಣಿಕ, ಸಾಮಾಜಿಕ, ಕೃಷಿ, ಅರಣ್ಯ, ಸಹಕಾರ ಮುಂತಾದ ೇತ್ರಗಳಲ್ಲಿ ಕೈಗೊಂಡ ಕಾರ್ಯಗಳು ಸದಾಕಾಲ ಸ್ಮರಣೀಯ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಸ್​. ಆರ್​. ನೀಲಗುಂದ ಹೇಳಿದರು.
ಹುಲಕೋಟಿಯ ಕೆ. ಎಚ್​. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಮತ್ತು ಸಿಬ್ಬಂದಿ ಕಲ್ಯಾಣ ಟಕಗಳು ಸಂಯುಕ್ತವಾಗಿ ಶುಕ್ರವಾರ ಕೆ. ಎಚ್​. ಪಾಟೀಲರ 101ನೆಯ ಜನ್ಮಜಯಂತಿ ಅಂಗವಾಗಿ ಕೈಗೊಂಡಿದ್ದ ಹುಲಕೋಟಿಯ ಸುರಭಿ ವೃದ್ಧಾಶ್ರಮಕ್ಕೆ ಹಾಸು ಹೊದಿಕೆ ಮತ್ತು ಆಹಾರ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆ.ಎಚ್​. ಪಾಟೀಲರು ದಯೆ, ಅನುಕಂಪ, ಸಮಾನತೆ, ಸೇವೆ, ಸ್ವಾಭಿಮಾನ, ತ್ಯಾಗ, ಉಪಕಾರ, ಪರಾಕ್ರಮ, ಸಹಕಾರ, ಸಹಬಾಳ್ವೆ, ಐಕ್ಯತೆ, ಸಭ್ಯತೆ, ಸಾತ್ವಿಕತೆ, ವಿನಯತೆ, ಮಿತೃತ್ವ, ಭ್ರಾತೃತ್ವ, ನಿಷ್ಠೆ, ನ್ಯಾಯ, ಶ್ರದ್ಧೆ, ಬಂಧುತ್ವ, ಬದ್ಧತೆ, ಪ್ರಾಮಾಣಿಕತೆ, ಸ್ನೇಹ, ವಾತ್ಸಲ್ಯ, ಔದಾರ್ಯ, ಪಾವನತೆ, ಛಲ, ಸ್ವಂತಿಕೆ, ವಿಚಾರಶೀಲತೆ, ಮನೋವೈಶಾಲ್ಯತೆ ಮುಂತಾದ ಮಾನವೀಯ ಮೌಲ್ಯಗಳಿಂದ ಕರ್ನಾಟಕದ ಸಹಕಾರ ಚಳವಳಿಯ ಭೀಷ್ಮ, ಜನಪರ ನಾಯಕ, ಅಭಿವೃದ್ಧಿಯ ರೂವಾರಿ, ಹುಲಕೋಟಿ ಹುಲಿ ಎಂದು ಪ್ರಸಿದ್ಧರಾಗಿದ್ದರು. ಅವರ ರೈತಪರಕ್ಷಪಾತ ನೀತಿ ಅನುಸರಿಸಿದ್ದರು ಎಂದರು.
ಪ್ರಾಚಾರ್ಯ ಡಾ. ಸುಧಾ ಕೌಜಗೇರಿ ಮಾತನಾಡಿ, ಕೆ.ಎಚ್​. ಪಾಟೀಲರ ಹೆಸರನ್ನು ಹೊಂದಿರುವ ಕಾಲೇಜು ಅವರ ಶೈಣಿಕ ಚಿಂತನೆಗಳ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತ ಮುನ್ನಡೆಯುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ವಿದ್ಯಾಥಿರ್ಗಳ ಸಂಖ್ಯೆ ಹೆಚ್ಚುತ್ತಿದೆ. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯರು ಮತ್ತು ಸದಸ್ಯರು ಕಾಲೇಜಿನಲ್ಲಿ "ಕೆ.ಎಚ್​. ಪಾಟೀಲ ಸಂಶೋಧನ ಕೇಂದ್ರ' ಸ್ಥಾಪನೆಗೆ ಮುಂದಾದರೆ ಈ ಮೂಲಕ ಅವರ ಚಿಂತನೆಗಳು, ಸೇವೆ, ಸಮಾಜಮುಖಿ ಕಾರ್ಯಗಳನ್ನು ವಿವಿಧ ಆಯಾಮಗಳಲ್ಲಿ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ ಎಂದರು.
ವೃದ್ಧಾಶ್ರಮದ ಮೇಲ್ವಿಚಾರಕ ರಾಜೇಸಾಬ ಏಕ್ಲಾಸಪುರ ಅವರು ಸುರಭಿ ವೃದ್ಧಾಶ್ರಮದ ಹಿನ್ನೆಲೆ, ವ್ಯವಸ್ಥೆ, ವೃದ್ಧರ ಮನೋಭಿಲಾಷೆಗಳ ಕುರಿತು ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಶೋಕ ಕಮ್ಮಾರ, ಕಾರ್ಯಕ್ರಮ ಸಂಯೋಜಕ ಬಸವರಾಜ ಬಳಗಾನೂರಮಠ, ಮಹಿಳಾ ವೇದಿಕೆ ಸಂಚಾಲಕಿ ಡಾ. ಸಾರಿಕಾ ಪಾಟೀಲ, ಎನ್​ಎಸ್​ಎಸ್​ ಸಂಯೋಜಕ ಡಾ. ಅಪ್ಪಣ್ಣ ಹಂಜೆ, ಸಾಂಸತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ, ಐಕ್ಯುಎಸಿ ಸಂಚಾಲಕ ಡಾ. ಜಿತೇಂದ್ರ ಜಾಗೀರದಾರ, ಜಯಶ್ರೀ ಗೋಣಿಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net