ಇಂದಿನಿಂದ ಮುದೇನೂರ ಲಕ್ಕಮ್ಮದೇವಿ ಕಾರ್ತಿಕೋತ್ಸವ

ತಾಲೂಕಿನ ಮುದೇನೂರ ಗ್ರಾಮದ ಶ್ರೀ ಲಕ್ಕಮ್ಮದೇವಿ
ತಾಲೂಕಿನ ಮುದೇನೂರ ಗ್ರಾಮದ ಶ್ರೀ ಲಕ್ಕಮ್ಮದೇವಿ
Published on
ಡಾ.ರೇವಣಸಿದ್ದಪ್ಪ ಕುಳ್ಳೂರ ರಾಮದುರ್ಗ
ತಾಲೂಕಿನ ಮುದೇನೂರ ಗ್ರಾಮದಲ್ಲಿ ಡಿ.2ರಿಂದ 9ರ ವರೆಗೆ ಶ್ರೀ ಲಕ್ಕಮ್ಮದೇವಿ ಕಾರ್ತಿಕೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.
ಮುದೇನೂರ ಲಕ್ಕಮ್ಮ ಲಕ್ಷಿ$್ಮ ದೇವಿಯಾಗಿ, ಗ್ರಾಮದ ಒಡತಿಯಾಗಿ ಹಾಗೂ ನಂಬಿ ಬಂದ ಭಕ್ತರ ಮನೆ ಮನ ಬೆಳಗುವ ಕರುಣಾಮಯಿ. ಉತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿ ಇಷ್ಟಾರ್ಥ ಸಿದ್ಧಿಸುವಂತೆ ಭಕ್ತಿಸೇವೆ ಸಲ್ಲಿಸುತ್ತಾರೆ.
ಯುಗಾದಿಗೆ ದೇವಿಗೆ ವಿಶೇಷ ಅಭಿಷೇಕ: ಯುಗಾದಿ ಹಬ್ಬ ಭಾರತೀಯರಿಗೆ ಮೊದಲ ಹಬ್ಬ. ಅಂದು ವಿಜಯಪುರ ಜಿಲ್ಲೆಯ ಗಲಗಲಿ ಗ್ರಾಮದ ಮೂಲಕ ಹರಿದು ಹೋಗುವ ಕೃಷ್ಣಾ ನದಿಯಲ್ಲಿ ಭಕ್ತರು ಪುಣ್ಯಸ್ಥಾನ ಮಾಡಿ ಪಾದಯಾತ್ರೆ ಮೂಲಕ ಅಲ್ಲಿಂದ ನದಿ ನೀರು ತಂದು ಲಕ್ಕಮ್ಮದೇವಿಗೆ ಅಭಿಷೇಕ ಮಾಡುವುದು ಸಂಪ್ರದಾಯವಾಗಿದೆ.
ಯುಗಾದಿ ಸೇರಿ ನಾಗಪಂಚಮಿ, ಮಹಾನವಮಿ, ಅನಂತನ ಹುಣ್ಣಿಮೆ ಹಾಗೂ ದೀಪಾವಳಿ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಗದಗ ಹಾಗೂ ಬೆಳಗಾವಿ ಸೇರಿ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ.
ಶತಮಾನಗಳ ಇತಿಹಾಸ ಹೊಂದಿದ ಮುದೇನೂರ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವ ಪ್ರತಿ 5 ವರ್ಷಗಳಿಗೊಮ್ಮೆ ದೇವರ ಹಬ್ಬದ ಹೆಸರಲ್ಲಿ 9 ದಿನಗಳವರೆಗೆ ನಡೆಯುತ್ತದೆ. ಸುತ್ತಮುತ್ತಲಿನ ಗ್ರಾಮಗಳ ಜನರು ಜಾತಿಬೇಧ ಮರೆತು ಪಾಲ್ಗೊಳ್ಳುವುದು ವಿಶೇಷ.
ಭಾವಚಿತ್ರ ನಿಷಿದ್ಧ: ಲಕ್ಕಮ್ಮದೇವಿ ಮೂರ್ತಿ ೋಟೋ ತೆಗೆಯುವುದು ಇಲ್ಲಿ ನಿಷಿದ್ಧ. ದೇವಿ ಭಾವಚಿತ್ರ ಮಾರಾಟಕ್ಕೂ ಅವಕಾಶವಿಲ್ಲ. ಮಾರಾಟಕ್ಕೆ ಮುಂದಾದವರು ತಕ್ಕ ಶಾಸ್ತಿ ಅನುಭವಿಸಿದ ನಿದರ್ಶನಗಳಿವೆ.
ವಿವಿಧ ಕಾರ್ಯಕ್ರಮ: ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಅಂಗವಾಗಿ ಅದ್ದೂರಿ ಉತ್ಸವ ನೆರವೇರುತ್ತದೆ. ಡಿ.2ರಂದು ಶ್ರೀ ಲಕ್ಷಿ$್ಮದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಪೂಜೆ ನೆರವೇರಲಿದೆ. ರಾತ್ರಿ 10 ಗಂಟೆಗೆ ಸ್ಥಳಿಯ ಬೀರಲಿಂಗೇಶ್ವರ ನಾಟ್ಯ ಸಂ "ಸಿಡಿದೆದ್ದ ಶಿವಶಕ್ತಿ' ನಾಟಕ ಪ್ರದರ್ಶಿಸಲಿದೆ.
ಡಿ.3ರಂದು ಪಲ್ಲಕ್ಕಿ ಉತ್ಸವ, ಬೆಳಗ್ಗೆ 9 ಗಂಟೆಗೆ ಜೋಡೆತ್ತು ಬಂಡಿ ಸ್ಪರ್ಧೆ ಹಾಗೂ ರಾತ್ರಿ 9 ಗಂಟೆಗೆ ಬಾದಾಮಿಯ
ಎಸ್​.ಪಿ.ಮೆಲೋಡಿಯಸ್​ ತಂಡ ರಸಮಂಜರಿ ಕಾರ್ಯಕ್ರಮ ನೀಡಲಿದೆ. ಡಿ.6 ರಂದು ಸಂಜೆ 5 ಗಂಟೆಗೆ ಕಬಡ್ಡಿ ಪಂದ್ಯಾವಳಿ ನಡೆಯಲಿವೆ. ಡಿ.9 ರಂದು ದೇವಸ್ಥಾನದಲ್ಲಿ ಮರು ಕಾರ್ತಿಕೋತ್ಸವ ಜರುಗಲಿದೆ. ರಾತ್ರಿ ಜಮಖಂಡಿಯ ಶ್ರೀ ಗುರು
ಪುಟ್ಟರಾಜ ಕಲಾ ನಾಟ್ಯ ಸಂ "ಮಗ ಹೋದರೂ ಮಾಂಗಲ್ಯ ಬೇಕು' ಸಾಮಾಜಿಕ ನಾಟಕವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net