ಬಳ್ಳುಂಡಗಿ ಜಾಕ್ವೆಲ್ನಿಂದ ಆಳಂದ ತಾಲೂಕಿನ ಅಮರ್ಜಾ ಅಣೆಕಟ್ಟಿಗೆ ನೀರು ತುಂಬಿಸುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸುಮಾರು 318 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಯೋಜನೆಯು ಅಫಜಲಪುರ ಪಟ್ಟಣ, ಬಳೂರಗಿ, ಬಡದಾಳ, ಚಿಂಚೋಳಿ, ರೇವೂರ (ಬಿ), ರೇವೂರ (ಕೆ), ದಿಕ್ಸಂಗಾ, ನಂದರಗಾ, ಅರ್ಜುಣಗಿ, ಭೈರಾಮಡಗಿ ಸೇರಿ ಒಟ್ಟು 13 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಯೋಜನೆಯಿಂದ ಅಂತರ್ಜಲ ವೃದ್ಧಿಯಾಗಿ ಬೋರ್ವೇಲ್, ಬಾವಿಗಳಿಗೆ ನೀರು ಬರುತ್ತದೆ ಎಂದರು.