ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ನರೇಗಾ ಕೂಲಿಕಾರರಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ಹೂಗಾರ, ರಾಮಕೃಷ್ಣ ಜೋಶಿ, ನರೇಗಾ ಸಂಯೋಜಕ ಅಮರೇಶ್ ಇತರರಿದ್ದರು.
Published on:
Copied
Follow Us
ದೇವದುರ್ಗ: ಕೂಲಿ ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯಬೇಕು ಎಂದು ಕ್ಷಯರೋಗ ಮೇಲ್ವಿಚಾರಕ ರವಿಶಂಕರ ಶುಕ್ಲ ಹೇಳಿದರು.
ತಾಲೂಕಿನ ಗಬ್ಬೂರು ಗ್ರಾಮದ ತಾಯಮ್ಮನ ಹಳ್ಳದಲ್ಲಿ ನರೇಗಾ ಕೂಲಿಕಾರರಿಗೆ ಆಯೋಜಿಸಿದ್ದ ಕ್ಷಯರೋಗ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು.
ಬೇಸಿಗೆ ಹಿನ್ನೆಲೆಯಲ್ಲಿ ಕೂಲಿಕಾರರ ಆರೋಗ್ಯ ಸುರಕ್ಷತೆಗಾಗಿ ಶಿಬಿರ ಆಯೋಜಿಸಲಾಗಿದೆ. ಪ್ರಸ್ತುತ ಕಲುಷಿತ ವಾತಾವರಣ, ನೀರು, ಆಹಾರ ಅಸಮಾತೋಲನದಿಂದ ನಾನಾ ಕಾಯಿಲೆಗಳು ಬರುತ್ತಿದ್ದು, ಮುನ್ನೆಚ್ಚರಿಕೆ ವಹಿಸಬೇಕು. ಕ್ಷಯರೋಗಿಗಳಿಗೆ ಉಚಿತ ಚಿಕಿತ್ಸೆ, ಆರು ತಿಂಗಳು ಪ್ರೋತ್ಸಾಹಧನ ನೀಡಲಾಗುತ್ತಿದೆ.
ಕ್ಷಯರೋಗಿಗಳ ಸಂಪರ್ಕ ಹೊಂದಿದ ಜನರು ಟಿಬಿ ತಪಾಸಣೆಗೆ ಒಳಪಟ್ಟು, ಸೂಕ್ತ ಚಿಕಿತ್ಸೆ ಪಡೆದಲ್ಲಿ ಗುಣಮುಖರಾಗಬಹುದು ಎಂದರು. 220 ಕೂಲಿಕಾರರ ಆರೋಗ್ಯ ತಪಾಸಣೆ ಮಾಡಲಾಯಿತು.
ಪ್ರಮುಖರಾದ ಮಂಜುನಾಥ್ ಕರಿಗಾರ, ಡ್ಯಾನಿಯಲ್, ಪಂಪಾಪತಿ, ತಾಲೂಕು ಕ್ಷಯ ಮೇಲ್ವಿಚಾರಕ ಭೀಮೇಶ್, ಆರೋಗ್ಯ ಇಲಾಖೆ ಸಿಬ್ಬಂದಿ ರಾಮಕೃಷ್ಣ, ರವೀಂದ್ರ, ಅಭಿಜಿತ್, ದೇವಮ್ಮ ಇತರರಿದ್ದರು.