ಶಿರಾ ತಾಲೂಕಿನ ಯೋಜನಾ ಕಚೇರಿ ವ್ಯಾಪ್ತಿಯ ಬುhealthcampಕ್ಕಾಪಟ್ಟಣ ವಲಯ ಹುಣಸೇಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಜರುಗಿತು. ಪರಮೇಶ್ವರಯ್ಯ, ಡಾ.ಮಂಜುನಾಥ್, ಲಿಂಗಣ್ಣ, ಕೇಂದ್ರದ ಪುಷ್ಪಾಂಜಲಿ, ಚಂದ್ರಶೇಖರ್, ಟಿ. ಆಶಾ ಇದ್ದರು.
Published on:
Copied
Follow Us
ಶಿರಾ:ಯೋಜನಾ ಕಚೇರಿ ವ್ಯಾಪ್ತಿಯ ಬುಕ್ಕಾಪಟ್ಟಣ ವಲಯದ ಹುಣಸೇಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.healthcamp
ಜ್ಞಾನ ವಿಕಾಸ ಕಾರ್ಯಕ್ರಮದ ಅಂಗವಾಗಿ ನಡೆದ ಶಿಬಿರದಲ್ಲಿ ಬೆಂಗಳೂರು ಮಹಾವೀರ ಜೈನ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕಿಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಶಿಬಿರದಲ್ಲಿ ಹೃದಯ ಸಂಬಂಧಿ ತಪಾಸಣೆಗಾಗಿ ಇಸಿಜಿ, ಪಾದಸ್ಪರ್ಶ ಸ್ಕಾ$ನಿಂಗ್, ರಕ್ತದೊತ್ತಡ, ರಕ್ತದ ಸಕ್ಕರೆ ಹಾಗೂ ಮೂಳೆಯ ಸಾಂದ್ರತೆ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯಲ್ಲಿ ಭಾಗವಹಿಸಿದವರಿಗೆ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಡಾ.ಮಂಜುನಾಥ್ ಸೂಕ್ತ ಸಲಹೆ ನೀಡಿದರು.
ಒಕ್ಕೂಟ ಅಧ್ಯಕ್ಷ ಲಿಂಗದೇವರು ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಜತೆ ಹಲವು ಜನೋಪಯೋಗಿ ಯೋಜನೆಗಳು ತಲುಪುತ್ತಿದ್ದು, ಗ್ರಾಮೀಣ ಜನರಿಗೆ ಅನುಕೂಲವಾಗುತ್ತಿದೆ ಎಂದರು. ಸುಮಾರು 60ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಊರಿನ ಮುಖ್ಯಸ್ಥ ಪರಮೇಶ್ವರಯ್ಯ, ಡಾ.ಮಂಜುನಾಥ್, ಮಹಾವೀರ ಜೈನ ಆಸ್ಪತ್ರೆ ಸಿಬ್ಬಂದಿ, ಒಕ್ಕೂಟ ಅಧ್ಯಕ್ಷ ಲಿಂಗಣ್ಣ, ಕೇಂದ್ರದ ಅಧ್ಯಕ್ಷೆ ಪುಷ್ಪಾಂಜಲಿ, ವಲಯ ಮೇಲ್ವಿಚಾರಕ ಚಂದ್ರಶೇಖರ್, ಸಮನ್ವಯಾಧಿಕಾರಿ ಟಿ.ಆಶಾ ಸೇವಾ ಪ್ರತಿನಿಧಿ ವಿಕಾಸ ಕೇಂದ್ರ ಸದಸ್ಯರು ಇದ್ದರು.