

ಮಕ್ಕಳು ಸರ್ಕಾರಿ ಬಸ್‌ನಲ್ಲಿ ಹೋಗಲು ಅಗತ್ಯವಾಗಿರುವ ಬಸ್‌ಪಾಸ್ ಸೌಲಭ್ಯಕೆ ತಗಲುವ ವೆಚ್ಚವನ್ನು ವೈಯಕ್ತಿಕವಾಗಿ ವಿದ್ಯಾರ್ಥಿಗಳಿಗೆ 3 ವರ್ಷಗಳ ಕಾಲ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸುವವರೆಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು. ಈ ಯೋಜನೆ ನಮ್ಮ ಶಾಲೆಯಿಂದ ತೆರಳುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಸಲಿದೆ. ನಾನು ಈ ಶಾಲೆಯಲ್ಲಿ ಇರೋವರೆಗೂ ಈ ಸೌಲಭ್ಯ ಕಲ್ಪಿಸುವೆ.
ಸರ್ಕಾರಿ ಶಾಲೆಗಳ ಸಬಲೀಕಣಕ್ಕೆ ಈ ಎಲ್ಲ ಪ್ರಯತ್ನ ಮಹತ್ವಾಗಿದೆ. ಸರ್ಕಾರಿ ಶಾಲೆಯ ಇತರ ಎಲ್ಲ ಶಿಕ್ಷಕರು, ಮುಖ್ಯ ಶಿಕ್ಷಕರು ವಿಭಿನ್ನ ಯೋಜನೆ ಹಾಕಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳವಾಗುತ್ತದೆ. ಮುಖ್ಯ ಶಿಕ್ಷಕ ಎಂ.ಕೆ. ಹೊಳಜೋಗಿ ಅವರ ಕಾರ್ಯಗಳು ಪ್ರಶಂಸರ್ಹವಾಗಿದೆ.