ಬೈಲಹೊಂಗಲ ಮಾಜಿ ಶಾಸಕ ಪುತ್ರ ರಾಜು ಬೋಳಶೆಟ್ಟಿ ಕೊಲೆ ಪ್ರಕರಣ: ಮಹಿಳೆ ಸೇರಿ ನಾಲ್ವರ ಬಂಧನ! Raju Bolashetti Death Case

ಬೈಲಹೊಂಗಲ ಮಾಜಿ ಶಾಸಕ ಪುತ್ರ ರಾಜು ಬೋಳಶೆಟ್ಟಿ ಕೊಲೆ ಪ್ರಕರಣ: ಮಹಿಳೆ ಸೇರಿ ನಾಲ್ವರ ಬಂಧನ! Raju Bolashetti Death Case
ಬೈಲಹೊಂಗಲ ಮಾಜಿ ಶಾಸಕ ಪುತ್ರ ರಾಜು ಬೋಳಶೆಟ್ಟಿ ಕೊಲೆ ಪ್ರಕರಣ: ಮಹಿಳೆ ಸೇರಿ ನಾಲ್ವರ ಬಂಧನ! Raju Bolashetti Death Case
Published on

ಪ್ರಮುಖ ಮುಖ್ಯಾಂಶಗಳು

  • ಬೈಲಹೊಂಗಲ ಮಾಜಿ ಶಾಸಕ ಪುತ್ರ ರಾಜು ಬೋಳಶೆಟ್ಟಿ ಕೊಲೆ ಪ್ರಕರಣ
  • ಓರ್ವ ಮಹಿಳೆ, ಆಕೆಯ ಅಪ್ರಾಪ್ತ ಪುತ್ರ ಸೇರಿ ನಾಲ್ವರ ಬಂಧನ
  • ಕೊಲೆಗೆ ಅನೈತಿಕ ಸಂಬಂಧ ಮತ್ತು ಹಣಕಾಸಿನ ವ್ಯವಹಾರ ಕಾರಣ ಎಂದು ತಿಳಿದುಬಂದಿದೆ
ಧಾರವಾಡ: ಬೈಲಹೊಂಗಲ ಮಾಜಿ ಶಾಸಕ ಪುತ್ರ ರಾಜು ಬೋಳಶೆಟ್ಟಿ ಕೊಲೆ ಪ್ರಕರಣ ( Raju Bolashetti Death Case ) ಕ್ಕೆ ಸಂಬಂಧಿಸಿ ಓರ್ವ ಮಹಿಳೆ, ಆಕೆಯ ಅಪ್ರಾಪ್ತ ಪುತ್ರ ಸೇರಿ ನಾಲ್ವರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ಗ್ರಾಮದ ಮುನೀರಾ ದಿಲ್ಲುನಾಯ್ಕ, ಬಸವರಾಜ ಪೂಜೇರಿ, ಮೃತ್ಯುಂಜಯ ಕಂಬಾರ ಹಾಗೂ ಮುನೀರಾಳ ಅಪ್ರಾಪ್ತ ಪುತ್ರನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಗುಂಜನ್ ಆರ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಮಾ. 21ರಂದು ಉಡಕೇರಿ ಗ್ರಾಮ ಬಳಿಯ ಮೃತ ರಾಜು ಬೋಳಶೆಟ್ಟಿ ಅವರ ಫಾರ್ಮ್ ಹೌಸ್‌ನಲ್ಲಿ ರಾಜುನನ್ನು ಕೊಲೆ ಮಾಡಿದ್ದರು. ಬಳಿಕ ಧಾರವಾಡ ತಾಲೂಕಿನ ರಾಮಾಪುರ ಗ್ರಾಮ ಬಳಿ ನಿರ್ಜನ ಅರಣ್ಯ ಪ್ರದೇಶಕ್ಕೆ ರಾಜು ಅವರ ಕಾರಿನಲ್ಲಿ ಮೃತದೇಹ ತಂದಿದ್ದರು. ಮಾ. 22ರಂದು ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದರು.
ರಾಜು ಮೃತದೇಹ ಸಂಪೂರ್ಣ ಬೆಂದಿತ್ತು. ಕೊಲೆಗೆ ಅನೈತಿಕ ಸಂಬಂಧ ಮತ್ತು ಹಣಕಾಸಿನ ವ್ಯವಹಾರ ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳು ಸಾಕ್ಷ್ಯ ನಾಶಕ್ಕೆ ಮೃತನನ್ನು ಅವರದೇ ಕಾರಿನಲ್ಲಿ ಸುಟ್ಟು ಹಾಕಿದ್ದರು ಎಂದು ಎಸ್ಪಿ ಗುಂಜನ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net