

ಚಿಂತಾಮಣಿ :
ದೊಡ್ಡಬೊಮ್ಮನಹಳ್ಳಿಯಲ್ಲಿ ಅಂಗನವಾಡಿ ಛಾವಣಿಯ ಸಿಮೆಂಟ್ ಕಾಂಕ್ರಿಟ್ ಪದರ ಕಳಚಿಬಿದ್ದು, ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಗ್ರಾಮದ ಜೀವಿಕಾ, ರಿತಿಾಗೆ ಗಂಭೀರ ಗಾಯಗಳಾಗಿದ್ದು, ಇನ್ನಿಬ್ಬರಿಗೆ ತರಚಿದ ಗಾಯಗಳಾಗಿವೆ. ನಾಲ್ವರಿಗೂ ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಪಾಲಕರ ಕಣ್ಣೀರು, ಪರಿಹಾರಕ್ಕೆ ಆಗ್ರಹ
ಮಕ್ಕಳು ಗಾಯಗೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆ ಪಾಲಕರು ಅಂಗನವಾಡಿ ಕೇಂದ್ರ ಹಾಗೂ ಆಸ್ಪತ್ರೆಗೆ ಬಂದು ಕಣ್ಣೀರಿಟ್ಟರು. ಕೂಲಿ ಮಾಡಿ ಜೀವನ ಮಾಡುತ್ತೇವೆ. ಉತ್ತಮ ಆಸರೆ ಹಾಗೂ ಕಲಿಕೆಯ ಉದ್ದೇಶದಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಿದ್ದು, ಇಲ್ಲೂ ಸುರತೆ ಇಲ್ಲದಿರುವುದು ದುರದೃಷ್ಟಕರ. ಮಕ್ಕಳಿಗೆ ಅಗತ್ಯ ಚಿಕಿತ್ಸೆ ಕೊಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಿಂತಾಮಣಿ ತಾಲೂಕಿನ ದೊಡ್ಡಬೊಮ್ಮನಹಳ್ಳಿ ಅಂಗನವಾಡಿ ಕಟ್ಟಡದ ಛಾವಣಿ ಪದರ ಬಿದ್ದು ಗಾಯಗೊಂಡ ಮಗುವಿನ ಆರೋಗ್ಯ ವಿಚಾರಿಸಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳಾ ಕಲ್ಯಾಣಧಿಕಾರಿ ವೆಂಕಟೇಶಪ್ಪ.
ಅಂಗನವಾಡಿ ಕೇಂದ್ರದಲ್ಲಿ ಮಗಳಿಗೆ ಗಂಭೀರ ಗಾಯವಾಗಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಭಯವಾಯಿತು. ಏನಾದರೂ ದೊಡ್ಡ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ?.
— ಕನಕರಾಜ್, ಗಾಯಾಳು ಜೀವಿಕಾ ತಂದೆ,
ನಿಲ್ಲದ ಅವಡಗಳು
ಶಿಥಿಲಾವಸ್ಥೆಯ ಶಾಲೆ ಕಟ್ಟಡಗಳಲ್ಲಿ ಛಾವಣಿಯ ಕಾಂಕ್ರೀಟ್ ಚೂರುಗಳು ಬಿದ್ದು ವಿದ್ಯಾರ್ಥಿಗಳು ಗಾಯಗೊಳ್ಳುವ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಈ ಹಿಂದೆ ಬಾಗೇಪಲ್ಲಿ ತಾಲೂಕಿನ ಲುಮದ್ದೇಪಲ್ಲಿಯ ಸರ್ಕಾರಿ ಶಾಲೆಯಲ್ಲಿ ಕಾಂಕ್ರಿಟ್ ಚೂರು ಬಿದ್ದು, ಮೂವರು ವಿದ್ಯಾರ್ಥಿಗಳ ಗಾಯಗೊಂಡಿದ್ದು, ಈ ಪೈಕಿ ಬಾಲಕಿಯ ತಲೆಗೆ 4 ಹೊಲಿಗೆ ಹಾಕಲಾಗಿತ್ತು. ಇನ್ನು ರಾಯಚೂರು ತಾಲೂಕಿನ ಅರಸಿಗೇರ ಸರ್ಕಾರಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿನಿ ಗಾಯಗೊಂಡ ಪ್ರಕರಣ ವರದಿಯಾಗಿತ್ತು.ಜಿಲ್ಲೆಗಳಲ್ಲಿನ ಹಲವು ಶಾಲೆಗಳ ಪೈಕಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿ ಛಾವಣಿಯ ಕಾಂಕ್ರಿಟ್ ಚೂರುಗಳು ಉದುರಿ ಬೀಳುವುದು, ಮಳೆಯ ನೀರು ಸೋರುವುದು, ಗೋಡೆ ಮುಟ್ಟಿದಾಗ ವಿದ್ಯುತ್ ಶಾಕ್ ಹೊಡೆಯುವುದು ಸೇರಿದಂತೆ ಹಲವು ಆತಂಕಕಾರಿ ಟನೆಗಳು ನಡೆಯುತ್ತಿವೆ. ಛಾವಣಿಯಿಂದ ಕಲ್ಲು ಮಣ್ಣು ಉದುರಿದ ಕುರುಹುಗಳನ್ನು ಹೊಂದಿರುವ ಶಾಲೆಗಳಿವೆ. ಆದರೆ, ಇದನ್ನು ಸಂಬಂಧಪಟ್ಟ ಇಲಾಖೆಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿ ಬಂದಿವೆ.