ಕೋಟೆ ಅಭಿವೃದ್ಧಿಗೆ 50 ಕೋಟಿ ರೂ. ಬೇಡಿಕೆ

ಚನ್ನಮ್ಮನ ಕಿತ್ತೂರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ಜೈಸಿದ್ಧರಾಮ ಮಾರಿಹಾಳ, ಮಲ್ಲಯ್ಯ ಹಿರೇಮಠ, ವೆಂಕಟೇಶ ಕಾಮಣ್ಣವರ,ಕೃಷ್ಣ ಬಾಳೇಕುಂದರಗಿ, ಶಂಕರ ಬಡಿಗೇರ ಇತರರಿದ್ದರು.
ಚನ್ನಮ್ಮನ ಕಿತ್ತೂರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ಜೈಸಿದ್ಧರಾಮ ಮಾರಿಹಾಳ, ಮಲ್ಲಯ್ಯ ಹಿರೇಮಠ, ವೆಂಕಟೇಶ ಕಾಮಣ್ಣವರ,ಕೃಷ್ಣ ಬಾಳೇಕುಂದರಗಿ, ಶಂಕರ ಬಡಿಗೇರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಚನ್ನಮ್ಮನ ಕಿತ್ತೂರು
ಪಟ್ಟಣದ ಸಮಗ್ರ ಅಭಿವೃದ್ಧಿ, ಸಾಮಾನ್ಯ ಜನರಿಗೆ ಮೂಲ ಸೌಕರ್ಯ ಒದಗಿಸುವುದೇ ನನ್ನ ಗುರಿ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದಲ್ಲಿ ರಸ್ತೆ, ಚರಂಡಿ ಸೇರಿದಂತೆ 3.25 ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೋಟೆ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನದ ಬೇಡಿಕೆ ಇಡಲಾಗಿದ್ದು, ಸಿಎಂ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದರು.
ಪಪಂ ಅಧ್ಯ ಜೈಸಿದ್ಧರಾಮ ಮಾರಿಹಾಳ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಅಭಿಯಂತ ವೆಂಕಟೇಶ ಕಾಮಣ್ಣವರ, ಪಪಂ ಸದಸ್ಯ ಕೃಷ್ಣ ಬಾಳೇಕುಂದರಗಿ, ಶಂಕರ ಬಡಿಗೇರ, ಪ್ರಮೋದ ಕಾಜಗಾರ, ಕಿರಣ ಪಾಟೀಲ, ಪಾಪು ನರಗುಂದ, ದೌಲತ್​ ಪಾರೆಂಡೀಕರ, ಮಂಜುನಾಥ ತೊಟ್ಟಿಲಮನಿ, ರಾಜು ಕಲ್ಲವಡ್ಡರ, ನಾಗರಾಜ ಅಸುಂಡಿ, ಅಷ್ಪಾಕ್​ ಹವಾಲ್ದಾರ, ಪ್ರವಿಣ ಜಕ್ಕನಗೌಡರ, ಅಷ್ಪಾಕ್​ ಸುತಗಟ್ಟಿ, ಕುತುಬುದ್ದೀನ್​ ನದೀಮುಲ್ಲಾ, ಅಪ್ಪಾಸಾಬ್​ ಶಿಲ್ಲೆದಾರ, ಬಸವರಾಜ ಸಂಗೊಳ್ಳಿ, ಸುರೇಶ ಕಿತ್ತೂರ, ಸಂಜು ಪಡಾದ, ರವಿ ಇನಾಮದಾರ್​, ಮಂಜುನಾಥ ದೊಡ್ಡಣ್ಣವರ, ದಿನೇಶ ವಳಸಂಗ, ಎಸ್​.ಎಸ್​.ವಳಸಂಗ, ಜಗದೀಶ ಟನಟ್ಟಿ, ಪ್ರವಿಣ ಶೆಟ್ಟರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net