ಮಾಜಿ ಶಿಕ್ಷಣ ಸಚಿವ, ಬಿಜೆಪಿ ಹಿರಿಯ ನಾಯಕ ಬಿ.ಸಿ. ನಾಗೇಶ್ ನಿಧನ | BC Nagesh

ಮಾಜಿ ಸಚಿವ ಬಿಸಿ ನಾಗೇಶ್​ (67)
ಮಾಜಿ ಸಚಿವ ಬಿಸಿ ನಾಗೇಶ್​ (67)
Published on
ಬೆಂಗಳೂರು: ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕರಾದ ಬಿ.ಸಿ. ನಾಗೇಶ್​ (67) ಅವರು ಇಂದು ಜಯನಗರದಲ್ಲಿರುವ ತಮ್ಮ ಪುತ್ರಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ನಿಧನರಾಗಿದ್ದಾರೆ. ನಾಳೆ (ಆ.19) ತುಮಕೂರಿನ ತಿಪಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಿಕ್ಷಣ ಸಚಿವರಾಗಿ ಹಾಗೂ ಶಾಸಕರಾಗಿದ್ದ ಸಮಯದಲ್ಲಿ ತಮ್ಮ ದಿಟ್ಟ ಹಾಗೂ ಒಂದಷ್ಟು ಗಟ್ಟಿಯಾದ ನಿರ್ಧಾರಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಅವರು, ಹಲವರ ಮೆಚ್ಚುಗೆಗೂ ಪಾತ್ರರಾಗಿದ್ದರು. ಇದೀಗ ಅವರ ಅಗಲಿಕೆಯ ಸುದ್ದಿಗೆ ರಾಜ್ಯದ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net