ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸರಿಯಾದ ರಸ್ತೆ, ವಾಹನ ಸೌಕರ್ಯ ಇಲ್ಲದ ಕಾಲದಲ್ಲೇ ಯಡಿಯೂರಪ್ಪ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ಬಿಜೆಪಿಯಿಂದ ಇಬ್ಬರೇ ಶಾಸಕರಿದ್ದಾಗಲೂ ಅವರು ಎಂದಿಗೂ ಹೋರಾಟದಿಂದ ಹಿಂದೆ ಸರಿದ ವರಲ್ಲ. ನಭೂತೋ, ನಭವಿಷ್ಯತೆ ಎಂಬಂತೆ ಈ ಸಮಾರಂಭ ಜರುಗಬೇಕು ಎಂದು ಕೋರಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ವೀರ ವನಿತೆ ಓನಕೆ ಓಬವ್ವ, ಮದಕರಿ ನಾಯಕರಿಗೆ ಜನ್ಮ ನೀಡಿದ ಈ ಐತಿಹಾಸಿಕ ನಾಡಿನಲ್ಲಿ ನಡೆಯುವ ಅಭಿಮಾನೋತ್ಸವ ಬಿಜೆಪಿಗೆ ಶಕ್ತಿ ಕೊಡಲಿ ಎಂದು ಆಶಿಸಿದರು. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು, ಕೇಂದ್ರದ ಮಾಜಿ ಸಚಿವರಾದ ಜಿ.ಎಂ.ಸಿದ್ದೇಶ್ವರ್, ಎ.ನಾರಾಯಣಸ್ವಾಮಿ, ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ರೇಣುಕಾಚಾರ್ಯ, ಮುನಿರತ್ನ, ಹರತಾಳು ಹಾಲಪ್ಪ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್ಸಿ ಎನ್.ರವಿಕುಮಾರ್ ಇತರರು ಮಾತನಾಡಿದರು.