

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು :ದ್ವಾದಶಜ್ಯೋತಿರ್ಲಿಂಗಗಳಲ್ಲಿ ಒಂದಾದಹಿಮಾಲಯದ ಕೇದಾರನಾಥ ದೇವಾಲಯದಮಾಜಿ ಪ್ರಧಾನ ಅರ್ಚಕ,ವೇದಮೂರ್ತಿಗುರುಲಿಂಗ ಹಿರೇಮಠ ಅವರು ಅನಾರೋಗ್ಯದಿಂದಬೆಂಗಳೂರಿನಲ್ಲಿ ಸೋಮವಾರಲಿಂಗೈಕ್ಯರಾಗಿದ್ದಾರೆ.
76 ವರ್ಷವಯಸ್ಸಿನ ಗುರುಲಿಂಗಯ್ಯ ಹಿರೇಮಠಅವರು ಕಳೆದ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿಕಿರಿಯ ಪುತ್ರನೊಂದಿಗೆ ವಾಸವಾಗಿದ್ದು,ಬೆಂಗಳೂರಿನಲ್ಲಿಚಿಕಿತ್ಸೆ ಪಡೆಯುತ್ತಿದ್ದರು. ಇವರ ಹಿರಿಯರುಮೂರು ತಲೆಮಾರಿನಿಂದ ಉತ್ತರಾಖಂಡದಲ್ಲಿನೆಲೆಸಿದ್ದು,ಕೇದಾರ ಪೀಠದ322ನೇಜಗದ್ಗುರು ರಾವಲ್ ಶಾಂತಲಿಂಗಶಿವಾಚಾರ್ಯ ಭಗವತ್ಪಾದರ ಕಾಲದಲ್ಲಿಅರ್ಚಕರಾಗಿ ಸೇವೆಗೆ ಸೇರಿದ್ದರು.1970 ರಿಂದ ಸುಮಾರು40 ವರ್ಷಗಳಕಾಲ ಕೇದಾರನಾಥ ದೇವಾಲಯ ಅರ್ಚಕರಾಗಿಸೇವೆ ಸಲ್ಲಿಸಿ ನಿವೃತ್ತರಾಗಿದ್ದಗುರುಲಿಂಗ ಅವರ ಪುತ್ರ ಶಿವಶಂಕರಲಿಂಗಅವರು ಪ್ರಸ್ತುತ ಕೇದಾರನಾಥದಮಧ್ಯಮಹೇಶ್ವರ ದೇವಾಲಯದ ಅರ್ಚಕರಾಗಿಸೇವೆ ಸಲ್ಲಿಸುತ್ತಿದ್ದಾರೆ.
ಗುರುಲಿಂಗಹಿರೇಮಠ ಅವರ ಅಂತ್ಯಸಂಸ್ಕಾರಹಾಗೂ ಕ್ರಿಯಾಸಮಾಧಿಯು ಮಂಗಳವಾರ ಸಂಜೆ ಸ್ವಗ್ರಾಮವಾದಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿಯಲ್ಲಿನಡೆಯಲಿದೆ ಎಂದು ಕುಟುಂಬದ ಮೂಲಗಳುತಿಳಿಸಿವೆ.