ತಿಪ್ಪಸಂದ್ರ ಕೆಪಿಎಸ್ ಶಾಲೆಯಲ್ಲಿ ಸಂಸತ್ ರಚನೆ Student Parliament

ತಿಪ್ಪಸಂದ್ರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು Student Parliament ಶಾಲಾ ಸಂಸತ್‌ಗೆ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು.ಗೋಪಾಲ್,ನಾಗರಾಜು, ರಘು, ಪಂಕಜ, ನೇತ್ರಾವತಿ ಇತರರು ಇದ್ದರು.
ತಿಪ್ಪಸಂದ್ರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು Student Parliament ಶಾಲಾ ಸಂಸತ್‌ಗೆ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು.ಗೋಪಾಲ್,ನಾಗರಾಜು, ರಘು, ಪಂಕಜ, ನೇತ್ರಾವತಿ ಇತರರು ಇದ್ದರು.
Published on
ಕುದೂರು :ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯ ಬೆಳೆಸುವ ಉದ್ದೇಶದಿಂದ ತಿಪ್ಪಸಂದ್ರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಣಕು ಮತದಾನ ಮೂಲಕ ಶಾಲಾ ಸಂಸತ್ ರಚಿಸಲಾಯಿತು. Student Parliament
ಸಮಾಜ ವಿಜ್ಞಾನ ಪಠ್ಯಕ್ಕೆ ಪೂರಕವಾಗಿ ಆಯೋಜಿಸಿದ್ದ ಚಟುವಟಿಕೆಯಲ್ಲಿ 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಶಾಲಾ ಮುಖ್ಯಶಿಕ್ಷಕ ಬಿ.ಎಸ್ ಹೇಮಂತ್ ಅವರ ಮಾರ್ಗದರ್ಶನದಡಿ ಶಿಕ್ಷಕರನ್ನು ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿತ್ತು.
ನೈಜ ಚುನಾವಣಾ ಮಾದರಿಯಲ್ಲಿ ಪ್ರಕ್ರಿಯೆ ಪ್ರತಿ ತರಗತಿಯಲ್ಲಿ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನಾಗಿ ವಿಂಗಡಿಸಿ, ಆಕಾಂಕ್ಷಿ ವಿದ್ಯಾರ್ಥಿಗಳಿಂದ ನಾಮಪತ್ರ ಸ್ವೀಕರಿಸಲಾಯಿತು. ಚುನಾವಣಾ ಪ್ರಚಾರ ಬಳಿಕ ಮತದಾನ ದಿನ ಮಕ್ಕಳು ಗುರುತಿನ ಚೀಟಿಯೊಂದಿಗೆ ಮತಗಟ್ಟೆಗೆ ಆಗಮಿಸಿದರು.
ಮತದಾರರ ಪಟ್ಟಿ ಪರಿಶೀಲನೆ, ಬೆರಳಿಗೆ ಶಾಯಿ ಹಚ್ಚಿ, ಬ್ಯಾಲೆಟ್ ಪತ್ರದಲ್ಲಿ ರಹಸ್ಯ ಮತದಾನ ಸೇರಿದಂತೆ ನೈಜ ಚುನಾವಣೆ ಕಟ್ಟುನಿಟ್ಟಾಗಿ ಪಾಲಿಸಲಾಯಿತು.
ಮತ ಎಣಿಕೆ ಬಳಿಕ ಅತಿ ಹೆಚ್ಚು ಮತ ಪಡೆದ ಹರ್ಷಿತ್ ಶಾಸಕಾಂಗ ಪಕ್ಷ ನಾಯಕರಾಗಿ ಆಯ್ಕೆಯಾದರು. ಬಳಿಕ 11 ಸದಸ್ಯರ ಸಚಿವ ಸಂಪುಟ ರಚಿಸಿದರು.
ಸ್ವಚ್ಛತಾ ಸಚಿವೆ - ವರ್ಷ, ಕಾನೂನು ಸಚಿವೆ - ದಿವ್ಯಶ್ರೀ, ಆಹಾರ ಸಚಿವ - ಸಚಿನ್, ಆರೋಗ್ಯ ಸಚಿವ - ಚೇತನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ - ರಂಜಿತ್ ಕ್ರೀಡಾ ಸಚಿವ - ಉಮೇಸ್, ಗ್ರಂಥಾಲಯ ಸಚಿವೆ - ಪವಿತ್ರ, ಶಿಕ್ಷಣ ಸಚಿವೆ - ಸುಪ್ರಿಯಾ, ತೋಟಗಾರಿಕೆ ಸಚಿವೆ - ಪವಿತ್ರ ಇತರರು ಇದ್ದರು.ಸಾಂಸ್ಕೃತಿಕ ಸಚಿವ - ರಿಷಿತ್ ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯಶಿಕ್ಷಕ ಬಿ.ಎಸ್ ಹೇಮಂತ್ ಮಾತನಾಡಿ, ಇಂತಹ ಚುನಾವಣೆ ಪ್ರಕ್ರಿಯೆ ಮಕ್ಕಳಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಸಂವಿಧಾನ ಬಗ್ಗೆ ಅರಿವು ಮೂಡಿಸಿದೆ ಎಂದರು. ಶಿಕ್ಷಕರಾದ ಗೋಪಾಲ್, ಜಿ.ಎಚ್,ನಾಗರಾಜು, ರಘು, ಪಂಕಜ, ನೇತ್ರಾವತಿ, ಕಿಶೋರ್, ನವೀನ್ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net