ದೂರದೃಷ್ಟಿ ಚಿಂತನ ಸಮಾಜದ ಶ್ರೇಯೋಭಿವೃದ್ಧಿಗೆ ಸಹಕಾರಿ / NELAMANAGL

ನೆಲಮಂಗಲದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್​ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ನೆಲಮಂಗಲದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್​ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
Published on
ನೆಲಮಂಗಲ : ಅಂಬೇಡ್ಕರ್​ ತತ್ವಾದರ್ಶ, ದೂರದೃಷ್ಟಿ ಚಿಂತನೆಗಳು ಸಮಾಜದ ಶ್ರೇಯೋಭಿವೃದ್ಧಿಗೆ ಸಹಕಾರಿ ಎಂದು ಶಾಸಕ ಎನ್​.ಶ್ರೀನಿವಾಸ್​ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಡಾ.ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾವ್​ ಜಯಂತಿಯಲ್ಲಿ ಮಾತನಾಡಿದರು. ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾವ್​ ಸಮಾನತೆ ನೆಲೆಸಲು, ನ್ಯಾಯ ಸಿಗುವಂತೆ ಮಾಡಿರುವುದನ್ನು ಮರೆಯುವಂತಿಲ್ಲ. ಆದರೆ ಅಂಬೇಡ್ಕರ್​ ಅವರ ಹೆಸರಿನಲ್ಲಿ ಸಮಾಜ ಘಾತಕ ಕೆಲಸಗಳನ್ನು ಮಾಡುವುದು, ಸಮಾಜದ ಜನರ ಬಗ್ಗೆ ಕೆಟ್ಟ ಆಲೋಚನೆ ಮಾಡಿ ಸಮಾಜ ಹೊಡೆಯುವ ಕೆಲಸ ಮಾಡಬಾರದು ಎಂದರು.
ಬೃಹತ್​ ಮೆರವಣಿಗೆ : ನಗರದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೂ ತಮಟೆ, ದೇವರ ಕುಣಿತ, ವೀರಗಾಸೆ, ಗೊಂಬೆ ಕುಣಿತ, ಕರಡಿ ಕುಣಿತ ಸೇರಿ ವಿವಿಧ ಕಲಾತಂಡಗಳ ಜತೆ ಬೆಳ್ಳಿ ರಥದಲ್ಲಿ ಡಾ.ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾವ್​ ಭಾವಚಿತ್ರಗಳ ಹಾಗೂ ಬೃಹತ್​ ಪುತ್ಥಳಿಯ ಮೆರವಣಿಗೆಯನ್ನು ನಗರದ ಮುಖ್ಯರಸ್ತೆಯಲ್ಲಿ ಮಾಡಲಾಯಿತು.ಸಾವಿರಾರು ಮುಖಂಡರು, ವಿವಿಧ ಸಮುದಾಯಗಳ ಮುಖಂಡರು, ದಲಿತ ಸಂಘಟನೆಗಳು, ಕನ್ನಡಪರ, ರೈತಪರ ಸಂಘಟನೆಗಳು, ಅಧಿಕಾರಿಗಳು, ಶಿಕ್ಷಕರು ಭಾಗವಹಿಸುವ ಮೂಲಕ ಅಂಬೇಡ್ಕರ್​ ಜಯಂತಿಯ ಬೃಹತ್​ ಮೆರವಣಿಗೆ ನೆಲಮಂಗಲ ತಾಲೂಕಿನಲ್ಲಿ ಹೊಸ ಇತಿಹಾಸ ಸೃಷ್ಟಿಮಾಡಿತ್ತು.
ಎನ್​ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​, ಇಒ ಡಾ.ಬಿಂದು, ಬಿಇಒ ಕೆ.ಸಿ.ರಮೇಶ್​, ಪೌರಾಯುಕ್ತ ಗಂಗಾಧರ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸಿ.ಪ್ರದಿಪ್​, ಮಂಜುನಾಥ್​, ಹನುಮಂತೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಾಣಿ, ಟಿಎಪಿಸಿಎಂಎಸ್​ ಅಧ್ಯಕ್ಷ ಹನುಮಂತರಾಜು, ಗ್ಯಾರಂಟಿ ಸಮಿತಿ ಅಧ್ಯೆ ನಾಗರತ್ನಮ್ಮ ಇದ್ದರು.
ಸಾಧಕರಿಗೆ ಸನ್ಮಾನ : ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಲೆಕ್ಯಾತನಹಳ್ಳಿ ಉಮೇಶ್​, ಮೆಳೆಕತ್ತಿಗನೂರು ಭೂಪಾಲಯ್ಯ, ಬ್ಯಾಡರಹಳ್ಳಿ ನಿತಿನ್​, ಶ್ರೀನಿವಾಸಪುರ ಗಿರಿಯಪ್ಪ, ಹನುಮಂತೇಗೌಡ, ಸೊಂಪುರ ವೀರಯ್ಯ ಹಾಗೂ ಅಂಬೇಡ್ಕರ್​ ಜಯಂತಿ ಹಿನ್ನಲೆ ಕಾನೂನು ವಿಭಾಗದಲ್ಲಿ ಗಣೇಶ್​ ಮೂರ್ತಿ, ದಿಲೀಪಕುಮಾರ್​, ಸುಮಾ, ಪ್ರಶಾಂತ್​, ಸಮಾಜ ಸೇವೆಯಲ್ಲಿ ಜಯರಾಮಯ್ಯ ಅವರಿಗೆ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಶಸ್ತಿ ನೀಡಿ ಶಾಸಕರು ಸನ್ಮಾನಿಸಿದರು.
ಪುಷ್ಪ ನಮನ : ತಾಲೂಕು ಕಚೇರಿ ಸಮೀಪ ಡಾ.ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾವ್​ ಬೃಹತ್​ ಭಾವಚಿತ್ರಕ್ಕೆ ಶಾಸಕ ಎನ್​.ಶ್ರೀನಿವಾಸ್​ ಸೇರಿ ಮುಖಂಡರು ಪುಷ್ಪನಮನ ಸಲ್ಲಿಸಿದರು. ಅಂಬೇಡ್ಕರ್​ ವೇಷ ಧರಿಸಿದ ವಿದ್ಯಾರ್ಥಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು. ಹಿರಿಯ ಸಾಹಿತಿ ಡಾ.ಚೌಡಯ್ಯ ಅವರು ಅಂಬೇಡ್ಕರ್​, ಕುವೆಂಪು, ಬಸವಣ್ಣನವರ ವಿಚಾರವಾಗಿ ರಚಿಸಿದ ಈ ನೆಲದ ಗುಣಗಳು ಪುಸ್ತಕವನ್ನು ಶಾಸಕರು ಹಾಗೂ ಗಣ್ಯರು ಬಿಡುಗಡೆ ಮಾಡಿದರು.
ತಮಟೆ ಬಾರಿಸಿದ ಶಾಸಕರು : ಶಾಸಕ ಎನ್​.ಶ್ರೀನಿವಾಸ್​ ಅವರು ಬಸ್​ನಿಲ್ದಾಣದ ಸಮೀಪ ತಮಟೆ ಭಾರಿಸುವ ಮೂಲಕ ಗಮನ ಸೆಳೆದರು. ಶಾಸಕರು ತಮಟೆ ಬಾರಿಸುತ್ತಿದ್ದಂತೆ ಮುಖಂಡರು, ಜನರು ಕುಣಿದು ಕುಪ್ಪಣಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net