ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​

ಅತ್ಯಾಚಾರ ಪ್ರಕರಣದ ಅಪರಾಧಿಗಳು
ಅತ್ಯಾಚಾರ ಪ್ರಕರಣದ ಅಪರಾಧಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ವರ್ಷ ಮಾರ್ಚ್​ನಲ್ಲಿ ನಡೆದ ಅತ್ಯಾಚಾರ ಪ್ರಕರಣ
  • ಇಸ್ರೇಲಿ ಮಹಿಳೆ ಮತ್ತು ಹೋಂ ಸ್ಟೇ ಮಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಮೂವರು
  • ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಗಂಗಾವತಿ ಸೆಷನ್ಸ್ ನ್ಯಾಯಾಲಯ
ಕೊಪ್ಪಳ: ವರ್ಷದ ಹಿಂದೆ ಗಂಗಾವತಿ ತಾಲೂಕಿನ ಸಣಾಪುರದಲ್ಲಿ ವಿದೇಶಿ ಮಹಿಳೆ ಹಾಗೂ ಸ್ಥಳೀಯ ಹೋಂ ಸ್ಟೇ ಒಡತಿ ಮೇಲೆ ಅತ್ಯಾಚಾರ (Rape Case) ಎಸಗಿದ್ದ ಮೂವರು ಅಪರಾಧಿಗಳಿಗೆ ಇದೀಗ ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ. 
ಗಂಗಾವತಿ ನಗರದ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯಸಾಯಿ) ಹಾಗೂ ಶರಣಪ್ಪ (ಶರಣು ಬಸವರಾಜ್) ಶಿಕ್ಷೆಗೆ ಗುರಿಯಾಗಿರುವ ಮೂವರು ಅಪರಾಧಿಗಳು. ಕಳೆದ ವರ್ಷ, ಮಾರ್ಚ್​ನಲ್ಲಿ ಸಣಾಪುರಕ್ಕೆ ಇಸ್ರೇಲಿ ಮಹಿಳೆ ಪ್ರವಾಸದ ಸಲುವಾಗಿ ಭೇಟಿ ನೀಡಿದ್ದರು. ಇದೇ ವೇಳೆ, ಒಡಿಶಾ ಪ್ರವಾಸಿಗರ ಜೊತೆ ಅಮೆರಿಕ, ಮಹಾರಾಷ್ಟ್ರದ ಪ್ರವಾಸಿಗರು ಕೂಡ ಇದ್ದರು. ಇವರೆಲ್ಲರನ್ನೂ ಸಣಾಪುರದ ಕಾಲುವೆ ಪಕ್ಕದಲ್ಲಿ ಬೆಳದಿಂಗಳ ಸೌಂದರ್ಯ ನೋಡಲು ಹೋಂ ಸ್ಟೇ ಮಾಲಕಿ ಕರೆದೊಯ್ದ ವೇಳೆ ಅತ್ಯಾಚಾರ ನಡೆದಿದೆ.
ಕುಡಿದ ಆಮಲಿನಲ್ಲಿ ಅದೇ ಮಾರ್ಗದಲ್ಲಿ ‌ಬಂದಿದ್ದ ಅಪರಾಧಿಗಳು, ಇಸ್ರೇಲಿ ಮಹಿಳೆ ಮತ್ತು ಹೋಂ ಸ್ಟೇ ಒಡತಿ ಮೇಲೆ ಅತ್ಯಾಚಾರ ಎಸಗಿದ್ದರು. ಬಳಿಕ ಒಡಿಶಾ ಪ್ರವಾಸಿಯನ್ನು ಕೊಲೆಗೈದರು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ತಲೆ ತಗ್ಗಿಸುವಂತೆ ಮಾಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆರೋಪಿಗಳನ್ನು ಅಪರಾಧಿಗಳೆಂದು ಪ್ರಕಟಿಸಿ ಶಿಕ್ಷೆ ಕಾಯ್ದಿರಿಸಿತ್ತು. ಇಂದು ಮರಣ ದಂಡನೆ ವಿಧಿಸಿ ಎಂದು ತೀರ್ಪಿನಲ್ಲಿ ಆದೇಶಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net