ಫುಟ್​ಪಾತ್​ ಕಾಮಗಾರಿಗೆ ಗ್ರಹಣ

Footpath work hits a roadblock
Footpath work hits a roadblock
Published on

ಚಿಂತಾಮಣಿ:

ನಗರದ ಬೆಂಗಳೂರು ಜೋಡಿ ರಸ್ತೆಯ ಕನ್ನಂಪಲ್ಲಿ ಓಟಿ ಕೆರೆಯಿಂದ ಎಂ.ಜಿ. ರಸ್ತೆಯ ಪಿಸಿಆರ್​ ಕಾಂಪ್ಲೆಕ್ಸ್​ವರೆಗೆ ಅಂದಾಜು 8.37 ಕೋಟಿ ವೆಚ್ಚದಲ್ಲಿ ಫುಟ್​ಪಾತ್​ ಅಭಿವೃದ್ಧಿ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

ಇಲ್ಲಿನ ಬೆಂಗಳೂರು ಜೋಡಿ ರಸ್ತೆಯ ಪಾದಚಾರಿ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರೇ ಡೆಲ್ಟ್​ ಯೋಜನೆಯಡಿ ಅಜಾದ್​ ಚೌಕದ ಕಾಮಗಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಅಲ್ಲಿ ಸಂಚಾರ ದಟ್ಟಣೆಯಿಂದ ಆ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ. ಅಜಾದ್​ ಚೌಕ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ತಣವೇ ಜೋಡಿ ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

— ಪ್ರಸಾದ್​ ರೆಡ್ಡಿ, ಜೆಇ, ನಗರಸಭೆ, ಚಿಂತಾಮಣಿ

ಸುಸಜ್ಜಿತ ಪಾದಚಾರಿ ರಸ್ತೆ, ಸೈಕಲ್​ ಟ್ರಾ$್ಯಕ್​, ಆಕರ್ಷಕ ವಿದ್ಯುತ್​ ದೀಪಗಳು, ಚರಂಡಿ ನಿರ್ಮಾಣ ಹಾಗೂ ರಸ್ತೆ ವಿಭಜಕಗಳ ಸೌಂದಯೀರ್ಕರಣವನ್ನು ಒಳಗೊಂಡ ಈ ಯೋಜನೆಗೆ 2025ರ ಜುಲೈನಲ್ಲಿ ಚಾಲನೆ ನೀಡಲಾಗಿತ್ತು. ರಸ್ತೆ ಪಕ್ಕದ ಒತ್ತುವರಿ ತೆರವು ಹಾಗೂ ವಿದ್ಯುತ್​ ಕಂಬಗಳ ಸ್ಥಳಾಂತರದ ನೆಪದಲ್ಲಿ ಆರಂಭದಲ್ಲೆ ಹಲವು ತಿಂಗಳು ಕಾಮಗಾರಿ ನನೆಗುದಿಗೆ ಬಿದ್ದಿತ್ತು.

ವ್ಯಾಪಾರಸ್ಥರಿಗೆ ತೊಂದರೆ

ಫುಟ್​ಪಾತ್​ ಕಾಮಗಾರಿಗಾಗಿ ಅಂಗಡಿಗಳ ಮುಂಭಾಗ ಗುಂಡಿ ತೆಗೆದು ಕಾಂಕ್ರೀಟ್​ ಹಾಕದೆ ಹಾಗೆಯೇ ಬಿಡಲಾಗಿದೆ. ಅಂಗಡಿಗಳ ಮೆಟ್ಟಿಲುಗಳನ್ನು ತೆರವುಗೊಳಿಸಿ 6 ತಿಂಗಳು ಕಳೆದರೂ ಕಾಮಗಾರಿ ಮುಂದುವರಿದಿಲ್ಲ. ಇದರಿಂದಾಗಿ ಸಾರ್ವಜನಿಕರು ಹಾಗೂ ಗ್ರಾಹಕರು ಅಂಗಡಿಗಳಿಗೆ ಬರಲು ಹರಸಾಹಸ ಪಡುತ್ತಿದ್ದು, ವ್ಯಾಪಾರ ಸಂಪೂರ್ಣ ಣಿಸಿದೆ. ರಸ್ತೆ ವಿಭಜಕಗಳಲ್ಲಿ ಅಲಂಕಾರಿಕ ಬೀದಿ ದೀಪ ಅಳವಡಿಕೆ ಹಾಗೂ ಗಿಡ ನೆಡುವ ಭರವಸೆಗಳು ಕಾಗದಕ್ಕಷ್ಟೇ ಸೀಮಿತವಾಗಿವೆ.ಪೌರಾಯುಕ್ತ ಜಿ.ಎನ್​.ಚಲಪತಿ ಕಳೆದ ಏಪ್ರಿಲ್​ನಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಗೆ ವೇಗ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಐದು ತಿಂಗಳು ಕಳೆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಅಡೆತಡೆಗಳನ್ನು ನಿವಾರಿಸಿದ ನಂತರ ಓಟಿಕೆರೆ ಬಳಿಯಿಂದ ಕೆಲಸ ಪುನರಾರಂಭಗೊಂಡರೂ, ಹಲವೆಡೆ ಹಾಲಿ ಇದ್ದ ಫುಟ್​ಪಾತ್​ ತೆರವುಗೊಳಿಸಿ ನೂತನ ಚರಂಡಿ ನಿರ್ಮಿಸಲಾಗಿದೆ. ಆದರೆ, ಚರಂಡಿಯ ಮೇಲೆ ಮುಚ್ಚಳ (ಸ್ಲಾ$್ಯಬ್​) ಅಳವಡಿಸದ ಕಾರಣ ಕಸ&ಕಡ್ಡಿ ಬಿದ್ದು ನೀರು ನಿಂತು ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸ್ಥಳಿಯರು ಅಧಿಕಾರಿಗಳಿಗೆ ದೂರಿಕೊಂಡಾಗ ಸಕ್ಕಿಂಗ್​ ಯಂತ್ರ ತಂದು ನೀರು ತೆಗೆಯುತ್ತಿದ್ದಾರೆಯೇ ಹೊರತು ಶಾಶ್ವತ ಪರಿಹಾರ ಕಲ್ಪಿಸಿಲ್ಲ.

ಕೆಎಸ್​ಆರ್​ಟಿಸಿ ಡಿಪೋ ಮುಂಭಾಗ ಚರಂಡಿ ಗೋಡೆ ಎತ್ತರಿಸಿ ಮುಚ್ಚಳ ಅಳವಡಿಸದೆ ಬಿಡಲಾಗಿದೆ. ಅಂಗಡಿಗಳ ಮುಂದಿನ ಮೆಟ್ಟಿಲು ತೆರವುಗೊಳಿಸಿ 6 ತಿಂಗಳು ಕಳೆದರೂ ಪಾದಚಾರಿ ರಸ್ತೆ ನಿರ್ಮಿಸಿಲ್ಲ. ಇದರಿಂದ ಸಾರ್ವಜನಿಕರು ಹಾಗೂ ಅಂಗಡಿಯವರು ನರಕಯಾತನೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಣ ಎಚ್ಚೆತ್ತು ಕೆಲಸ ಪೂರ್ಣಗೊಳಿಸಬೇಕು.

— ಎಂ.ಆರ್​. ಲೋಕೇಶ್​, ಜಿಲ್ಲಾಧ್ಯ, ಕರವೇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net