ಆಹಾರ ಧಾನ್ಯಗಳ ಖರೀದಿಯಲ್ಲಿ ದಾಖಲೆ ಸೃಷ್ಟಿಸಿದ ಆಹಾರ ಇಲಾಖೆ: 5.693 ಲಕ್ಷ ಮೆ.ಟನ್ ರಾಗಿ ಸಂಗ್ರಹ- Food Department creates record
ಆಹಾರ ಇಲಾಖೆಯ ಕಾರ್ಯದರ್ಶಿ ಎಂ. ಕನಗವಲ್ಲಿ
Published on:
Copied
Follow Us
ಬೆಂಗಳೂರು: ಆಹಾರ ಇಲಾಖೆಯು ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಿದೆ.
ಇಲಾಖೆಯ ಅಧೀನದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು 2025-26ರಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ 2,46,605 ರೈತರಿಂದ 5.693 ಲಕ್ಷ ಮೆಟ್ರಿಕ್ ಟನ್ ರಾಗಿ ಹಾಗೂ 40,845 ರೈತರಿಂದ 2.218 ಲಕ್ಷ ಮೆ.ಟನ್ ಬಿಳಿಜೋಳ ಖರೀದಿಯಾಗಿದ್ದು, ಇದು ಹೊಸ ದಾಖಲೆಯಾಗಿದೆ.
ರೋಗಿ ಮತ್ತು ಬಿಳಿ ಜೋಳ ಖರೀದಿಯಿಂದ 3,602 ಕೋಟಿ ರೂ.ಮೌಲ್ಯದ ಆಹಾರ ಧಾನ್ಯಗಳ ವಹಿವಾಟು ನಡೆದಿರುವುದರಿಂದ ರೈತರಿಗೆ ಅನುಕೂಲವಾಗಿದೆ. 2020- 21ರಲ್ಲಿ 4.753 ಮೆ.ಟನ್ ರಾಗಿ ಮತ್ತು 2024-25ರಲ್ಲಿ 1.941 ಮೆ.ಟನ್ ಬಿಳಿ ಜೋಳ ಖರೀದಿಯಾಗಿತ್ತು. ವಿಶೇಷವಾಗಿ ಒಣ ಭೂಮಿ ಪ್ರದೇಶಗಳಲ್ಲಿ ರಾಗಿ ಮತ್ತು ಬಿಳಿಜೋಳ ಬೆಳೆಯುವ ರೈತರು, ಮುಂದಿನ ದಿನಗಳಲ್ಲಿ ತಮ್ಮ ಆಹಾರ ಧಾನ್ಯಗಳನ್ನು ಉತ್ತಮ ಗುಣಮಟ್ಟದಲ್ಲಿ ಸರ್ಕಾರದ ಖರೀದಿ ಕೇಂದ್ರಗಳಿಗೆ ತರಬೇಕೆಂದು ಇಲಾಖೆ ಮನವಿ ಮಾಡಿದೆ.
ಸಾರ್ವಜನಿಕ ವಿತರಣಾ ಪದ್ಧತಿಗೆ ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಧಾನ್ಯ ಸಂಗ್ರಹವಾದರೆ, ಅದನ್ನು ಇತರೆ ರಾಜ್ಯಗಳಿಗೆ ಪೂರೈಸುವ ಮೂಲಕ ರಾಜ್ಯದ ರೈತರಿಗೆ ಇನ್ನಷ್ಟು ಆರ್ಥಿಕ ಅನುಕೂಲ ಕಲ್ಪಿಸಲು ಅನುಕೂಲವಾಗಲಿದೆ. 2025-26ರ ಖಾರ್ಿ ಮಾರಾಟ ಋತುವಿನಲ್ಲಿ ಸಿರಿಧಾನ್ಯ, ಕಿರುಧಾನ್ಯ ಸಂಗ್ರಹಣೆಯಲ್ಲಿ ತೋರಿದ ಅತ್ಯುತ್ತಮ ಸಾಧನೆಗಾಗಿಕೇಂದ್ರ ಆಹಾರ ಇಲಾಖೆಯು, ರಾಜ್ಯ ಆಹಾರ ಇಲಾಖೆಗೆ ‘ಶ್ರೀ ಅನ್ನ ಸಂಗ್ರಹಣೆಯಲ್ಲಿ ಶ್ರೇಷ್ಠತೆ 2025-26 ಪ್ರಶಸ್ತಿ ನೀಡಿದೆ.
ದೆಹಲಿಯಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ರಾಜ್ಯ ಆಹಾರ ಇಲಾಖೆಯ ಕಾರ್ಯದರ್ಶಿ ಎಂ. ಕನಗವಲ್ಲಿ ಅವರು ಕೇಂದ್ರ ಆಹಾರ ಇಲಾಖೆ ಅಧಿಕಾರಿಗಳಿಂದ ‘ಶ್ರೀ ಅನ್ನ ಸಂಗ್ರಹಣೆಯಲ್ಲಿ ಶ್ರೇಷ್ಠತೆ 2025-26 ಪ್ರಶಸ್ತಿ’ ಸ್ವೀಕರಿಸಿದರು. ಇದೇ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಎಂಡಿ ಎಂ.ಕೆ. ಜಗದೀಶ್ ಇದ್ದರು.