ದೇವನಹಳ್ಳಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ವಿಜೇತರಾದ ಮಕ್ಕಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು. ಹಿರಿಯ ಮೋಟಾರು ನಿರೀಕ್ಷಕರಾದ ನರಸಿಂಹಮೂರ್ತಿ, ಅರುಣಾ, ಸಿಂಧು, ಶ್ವೇತಾ, ಮಂಜುನಾಥ್, ಶಂಕರಪ್ಪ, ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿ ಇದ್ದರು.
ದೇವನಹಳ್ಳಿ : ವಾಹನ ಸವಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಿಂದ ತಮ್ಮ ಜೀವನ ಮಾತ್ರವಲ್ಲ, ಇತರರ ಜೀವವನ್ನೂ ರಕ್ಷಿಸಬಹುದು ಎಂದು ಆಲ್ ಇಂಡಿಯಾ ಫೆಡರೇಷನ್ ಅಧ್ಯಕ್ಷ ಅಶ್ರತ್ ಅಹಮದ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗದಲ್ಲಿ ಪಟ್ಟಣದ ರಾಣಿ ವೃತ್ತದ ಬಳಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಮಾತನಾಡಿದರು.
ಸುರಕ್ಷತಾ ಚಾಲನೆ ಜೀವಗಳನ್ನು ರಕ್ಷಿಸುತ್ತದೆ. ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಲೈಟ್ ಮತ್ತು ಸಿಟ್ಬೇಲ್ಟ್ ಧರಿಸುವುದರಿಂದ ಅನೇಕ ಜೀವಗಳು ಉಳಿದಿವೆ. ಆದ್ದರಿಂದ ವಾಹನ ಚಲಾಯಿಸುವಾಗ ರ್ನಿಲಕ್ಷ$್ಯವಹಿಸಬೇಡಿ ಎಂದರು.
ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಸಾವಿತ್ರಿ ಮಾತನಾಡಿ, ವಾಹನ ಸವಾರರು ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಅಪಾಯಗಳನ್ನು ತಡೆಯಬಹುದು. ಅಪಘಾತಗಳಿಗೆ ಹೆಚ್ಚಾಗಿ ಹೇಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲನೆಯೇ ಕಾರಣವಾಗಿದೆ. ನಿಯಮ ಪಾಲನೆ ಅಪಘಾತ ತಪ್ಪಿಸುವ ಮುಖ್ಯ ಮಾರ್ಗ ಎಂದರು.
ಸಾರಿಗೆ ಸಹಾಯಕ ಪ್ರಾದೇಶಿಕ ಅಧಿಕಾರಿ ಸುಧೀಂದ್ರ ಮಾತನಾಡಿ, ನಿಯಮ ಉಲ್ಲಂಘನೆ ಮಾಡಿದವ ಪರವಾನಗಿ ರದ್ದುಮಾಡುವ ಕ್ರಮ ಕೈಗೊಂಡಿದ್ದೇವೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್, ಲಘು ವಾಹನ ಚಾಲಕರು ಸೀಟ್ಬೆಲ್ಟ್ ಧರಿಸಿದರೆ ಶೇ.90 ಅಪಘಾತ ತಡೆಯಬಹುದು ಎಂದು ಹೇಳಿದರು. ಅಧಿಕಾರಿಗಳು, ಗಣ್ಯರು ರಸ್ತೆ ಸುರಕ್ಷತೆಯ ಕುರಿತು ಪ್ರಮಾಣ ವಚನ ಸ್ವೀಕರಿಸಿದರು. ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಂಸಾ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.