ಸೇವಾಲಾಲ್​ ಮಹಾರಾಜರ ತತ್ವಾದರ್ಶ ಪಾಲಿಸಿ

ಮಡಕಿ ತಾಂಡಾದಲ್ಲಿ ನಾಗನಾಥ ದೇವರ ಜಾತ್ರೆ ನಿಮಿತ್ತ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಮುರಾಹರಿ ಮಹಾರಾಜ, ಶ್ರೀ ಸುರೇಶ ಮಹಾರಾಜ, ಲತಾ ಮಾತೆ, ಸವಿತಾ ಮಾತೆ, ಶ್ರೀ ಶಂಕರ್​ ಮಹಾರಾಜ, ರೇವುನಾಯಕ ಬೆಳಮಗಿ, ವೈಜನಾಥ ತಡಕಲ್​, ಶರಣಗೌಡ ಪಾಟೀಲ್​ ಇದ್ದರು.
ಮಡಕಿ ತಾಂಡಾದಲ್ಲಿ ನಾಗನಾಥ ದೇವರ ಜಾತ್ರೆ ನಿಮಿತ್ತ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಮುರಾಹರಿ ಮಹಾರಾಜ, ಶ್ರೀ ಸುರೇಶ ಮಹಾರಾಜ, ಲತಾ ಮಾತೆ, ಸವಿತಾ ಮಾತೆ, ಶ್ರೀ ಶಂಕರ್​ ಮಹಾರಾಜ, ರೇವುನಾಯಕ ಬೆಳಮಗಿ, ವೈಜನಾಥ ತಡಕಲ್​, ಶರಣಗೌಡ ಪಾಟೀಲ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮುರಾಹರಿ ಮಹಾರಾಜ ಸಲಹೆ
  • ಮಡಕಿ ತಾಂಡಾದಲ್ಲಿ ನಾಗನಾಥ ದೇವರ ಜಾತ್ರೆ
ಕಮಲಾಪುರ: ಶ್ರಾವಣದಲ್ಲಿ ದೇವರ ನಾಮಸ್ಮರಣೆಯಿಂದ ಸನ್ಮಾರ್ಗದತ್ತ ಸಾಗುತ್ತೀರಿ. ಬಂಜಾರ ಸಮಾಜದ ಆರಾಧ್ಯದೈವ ಸಂತ ಸೇವಾಲಾಲ್​ ಮಹಾರಾಜರ ತತ್ವಾದರ್ಶಗಳ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಚೌಡಾಪುರ ಶ್ರೀ ಮುರಾಹರಿ ಮಹಾರಾಜ ಹೇಳಿದರು.
ಮಡಕಿ ತಾಂಡಾದಲ್ಲಿ ಶ್ರೀ ನಾಗನಾಥ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶ ಯುವಕರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ. ಆದರೆ ಸಾರಾಯಿ, ಗಾಂಜಾ, ಗುಟ್ಖಾದಂತಹ ದುಶ್ಚಟಗಳಿಂದ ಸಾವಿನ ದವಡೆಗೆ ಯುವಕರು ಸಿಲುಕುತ್ತಿದ್ದಾರೆ. ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪಡೆದು ನಾಡು ಮತ್ತು ಹೆತ್ತವರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿ, ಬಂಜಾರ ಸಮಾಜ ದುಡಿದು ತಿನ್ನುವ ಸ್ವಾಭಿಮಾನಿ ಸ್ವಭಾವದ ಸಮುದಾಯ. ಯುವಕರು ಪಕ್ಷಭೇದ ಮರೆತು ಸಮಾಜ ಸಂಘಟನೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವೈಜನಾಥ ತಡಕಲ್​ ಮಾತನಾಡಿ, ಶ್ರೀ ಶಂಕರ್​ ಮಹಾರಾಜರು ಕೋವಿಡ್​ ಅವಧಿಯಲ್ಲಿ ತಾಂಡಾ ಮತ್ತು ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ರಾಜಕೀಯ ಚುನಾವಣೆಗೆ ಸೀಮಿತವಾಗಿರಲಿ. ನಂತರ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ರಾಜಕಾರಣಿಗಳಾದ ನಾವೇ ಚುನಾವಣೆ ನಂತರ ಎಲ್ಲರೂ ಒಂದಾಗಿರುತ್ತೇವೆ ಅಂದ್ಮೇಲೆ ನೀವೇಕೆ ಪರಸ್ಪರ ಕಚ್ಚಾಡುತ್ತೀರಿ ಎಂದು ಪ್ರಶ್ನಿಸಿದರು.
ಹಲಕರ್ಟಿ ಶ್ರೀ ಸರಸ್ವತಿ ಮಾತಾ, ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ್​ ಮಾತನಾಡಿದರು.
ಗೊಬ್ಬುರವಾಡಿ ಶ್ರೀ ಸುರೇಶ ಮಹಾರಾಜ, ಕೆಸರಟಗಿ ಪೂಜ್ಯ ಲತಾ ಮಾತೆ, ಕವನಳ್ಳಿ ತಾಂಡಾದ ಪೂಜ್ಯ ಸವಿತಾ ಮಾತೆ, ಹಲಕರ್ಟಿ ತಾಂಡಾದ ಸರಸ್ವತಿ ಮಾತೆ, ಚೇಂಗಟಾ ತಾಂಡಾ ಶ್ರೀ ಶಿವಾನಂದ ಮಹಾರಾಜ, ಲಾಡಚಿಂಚೋಳಿ ಶ್ರೀ ಸುನೀಲ ಮಹಾರಾಜ, ಮಡಕಿ ತಾಂಡಾ ಶ್ರೀ ಶಂಕರ್​ ಮಹಾರಾಜ, ಸರಸ್ವತಿ ಮಾತೆ, ಶ್ರೀ ನೀಲಕಂಠ ಮಹಾರಾಜ, ಡಾ.ರಾಜಕುಮಾರ ಚವ್ಹಾಣ್​, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಗೋರಕನಾಥ ರಾಠೋಡ್​ ಇತರರಿದ್ದರು. ಸಂತೋಷ ರಾಠೋಡ್​ ನಿರೂಪಣೆ ಮಾಡಿದರು. ವಿಶ್ವನಾಥ ರಾಠೋಡ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net