ಯಾದಗಿರಿಯಲ್ಲಿ ಶನಿವಾರ ಕರೆದಿದ್ದ ಜಿ¯್ಲÁ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ಹಾಗೂ ಜಿ¯್ಲÁ ಪ್ರಾಣಿ ದಯಾಸಂಘದ ಸಭೆಯಲ್ಲಿ ಡಿಸಿ ರಾಹುಲ್ ಪಾಂಡ್ವೆ ಮಾತನಾಡಿದರು. ಡಾ.ರಾಜಶೇಖರ ಕಾಸಬಾಗ, ಹೆಚ್ಚುವರಿ ಎಸ್‌ಪಿ ಧರಣೇಶ ಇತರರಿದ್ದರು.
ಜಿ¯್ಲೆಯಲ್ಲಿ ೪೪ ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಬರದ ಮುನ್ನೆಚ್ಚರಿಕೆಯಾಗಿ ಸೂಕ್ತ ಕ್ರಮ ಹಾಗೂ ಮೇವಿನ ಲಭ್ಯತೆ ಕುರಿತು ಸಮೀಕ್ಷೆ ನಡೆಸಲು ಜಿ¯್ಲÁಽಕಾರಿ ರಾಹುಲ್ ಪಾಂಡ್ವೆ ಅಽಕಾರಿಗಳಿಗೆ ಸೂಚಿಸಿದ್ದಾರೆ.
ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಜಿ¯್ಲÁ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ಹಾಗೂ ಜಿ¯್ಲÁ ಪ್ರಾಣಿ ದಯಾಸಂಘದ ಸಭೆ ನಡೆಸಿದ ಅವರು, ರೈತರು ತಮ್ಮಲ್ಲಿರುವ ಮೇವನ್ನು ಸಂರಕ್ಷಿಸಿಡಬೇಕು, ಅದನ್ನು ಬೇರೆ ಜಿ¯್ಲÉ ಅಥವಾ ರಾಜ್ಯಗಳಿಗೆ ಮಾರಾಟ ಮಾಡದಂತೆ ಅಽಕಾರಿಗಳು ತಿಳಿವಳಿಕೆ ಮೂಡಿಸಬೇಕು. ನೀರಾವರಿ ಸೌಲಭ್ಯವಿರುವ ರೈತರಿಗೆ ಮೇವಿನ ಕಿಟ್ ವಿತರಿಸಲು ಬೆಂಗಳೂರಿನ ಪಶುಪಾಲನಾ ಇಲಾಖೆ ಆಯುಕ್ತರಿಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜಶೇಖರ ಕಾಸಭಾಗ ಮಾತನಾಡಿ, ಬೀದಿ ನಾಯಿಗಳ ಹತೋಟಿಗಾಗಿ ವಿಜಯಪುರದ ವಿಕಾಸ ಅನಿಮಲï ಟ್ರ¸್ಟï ಮೂಲಕ ಗುರುಮಠಕಲï ತಾಲೂಕಿನಲ್ಲಿ ೪೫೦ ಹಾಗೂ ಯಾದಗಿರಿಯಲ್ಲಿ ೧೨೦ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸöಚಿಕಿತ್ಸೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ನಗರಸಭೆ, ಪೊಲೀಸ್ ಇಲಾಖೆ ಹಾಗೂ ಪಶುಪಾಲನಾ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ನಗರದಲ್ಲಿ ಸುಮಾರು ೫೯ ಬೀದಿ ದನಗಳನ್ನು ವಶಪಡಿಸಿಕೊಂಡು ಗೋಶಾಲೆಗಳಿಗೆ ರವಾನಿಸಲಾಗಿದೆ. ದನಗಳನ್ನು ಬೀದಿಗೆ ಬಿಡದಂತೆ ರೈತರಿಗೆ ಮನವರಿಕೆ ಮಾಡಲು ಸೂಚಿಸಲಾಗಿದೆ. ಜಿ¯್ಲÉಯಲ್ಲಿ ೮ ಗೋಶಾಲೆಗಳಿದ್ದು, ನೋಂದಾಯಿತ ಎರಡು ಗೋಶಾಲೆಗಳಿಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಹುಚ್ಚುನಾಯಿ ರೋಗ ಇತರ ಪ್ರಾಣಿಜನ್ಯ ರೋಗಗಳ ನಿಯಂತ್ರಣಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಜÁಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಹೆಚ್ಚುವರಿ ಎಸ್‌ಪಿ ಧರಣೇಶ, ಪ್ರಾದೇಶಿಕ ಸಾರಿಗೆ ಅಽಕಾರಿ ರವೀಂದ್ರಕುಮಾರ ಇತರರಿದ್ದರು.