ಮಕ್ಕಳ ವಿದ್ಯಾಭ್ಯಾಸದತ್ತ ಗಮನಹರಿಸಿ

ಮಾಡಿಯಾಳದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಕೋಣೆಗಳನ್ನು ಶಾಸಕ ಬಿ.ಆರ್​.ಪಾಟೀಲ್​ ಉದ್ಘಾಟಿಸಿದರು. ಗೋವರ್ಧನ, ಸಿದ್ದರಾಮ ಪ್ಯಾಟಿ, ಹೊನ್ನೇಶ ಅಳ್ಳಗಿ ಇತರರಿದ್ದರು.
ಮಾಡಿಯಾಳದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಕೋಣೆಗಳನ್ನು ಶಾಸಕ ಬಿ.ಆರ್​.ಪಾಟೀಲ್​ ಉದ್ಘಾಟಿಸಿದರು. ಗೋವರ್ಧನ, ಸಿದ್ದರಾಮ ಪ್ಯಾಟಿ, ಹೊನ್ನೇಶ ಅಳ್ಳಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಕರಿಗೆ ಶಾಸಕ ಬಿ.ಆರ್​.ಪಾಟೀಲ್​ ಸಲಹೆ
  • ಮಾಡಿಯಾಳದಲ್ಲಿ ಶಾಲೆ ಕೋಣೆಗಳ ಉದ್ಘಾಟನೆ
ನಿಂಬರ್ಗಾ: ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಬರಬೇಕಾದರೆ ಶಿಕ್ಷಕರು ಶಾಲೆಯಲ್ಲಿ ಕರೆಯುವ ಪ್ರತಿ ಸಭೆಗೂ ಪಾಲಕರು ತಪ್ಪದೇ ಹಾಜರಾಗಿ ಮಕ್ಕಳ ಶಿಕ್ಷಣಮಟ್ಟ ತಿಳಿದುಕೊಳ್ಳಬೇಕು ಎಂದು ಶಾಸಕ ಬಿ.ಆರ್​.ಪಾಟೀಲ್​ ಹೇಳಿದರು.
ಮಾಡಿಯಾಳದಲ್ಲಿ ಕೆಕೆಆರ್​ಡಿಬಿ ಅಕ್ಷರ ಅವಿಷ್ಕಾರ ಯೋಜನೆಯಡಿ 1.19 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸರ್ಕಾರಿ ಪ್ರಾಥಮಿಕ ಶಾಲೆಯ 7 ಹಾಗೂ ಪ್ರೌಢಶಾಲೆಯ 5 ಕೋಣೆಗಳ ಉದ್ಘಾಟನೆ, 80 ಲಕ್ಷ ರೂ. ವೆಚ್ಚದಲ್ಲಿ ಸ್ವತಂತ್ರ ಪದವಿಪೂರ್ವ ಕಾಲೇಜಿನ 5 ಕೋಣೆಗಳ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಪಾಲಕರು ಕಟ್ಟೆ ಮೇಲೆ ಕುಳಿತು ಅನವಶ್ಯಕ ವಿಷಯ ಚರ್ಚಿಸಿ ಕಾಲಹರಣ ಮಾಡುವುದನ್ನು ಬಿಟ್ಟು ಹೆಚ್ಚಿನ ಸಮಯ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡಬೇಕು. ಟಿವಿ, ಮೊಬೈಲ್​ಗಳಿಂದ ಮಕ್ಕಳನ್ನು ದೂರವಿಟ್ಟರೆ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ ಎಂದರು.
ದೊಡ್ಡ ಹಳ್ಳಿಗಳಾದ ಮಾಡಿಯಾಳ, ಖಜೂರಿ, ನಿಂಬರ್ಗಾ, ಮಾದನಹಿಪ್ಪರಗಾ, ಕಡಗಂಚಿ ಗ್ರಾಮಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಸಮನ್ವಯ ಶಿಕ್ಷಣಾಧಿಕಾರಿ ಅಣ್ಣಪ್ಪ ಹಾದಿಮನಿ ಮಾತನಾಡಿ, 2024-25ನೇ ಸಾಲಿನಲ್ಲಿ ಸುಮಾರು 142 ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳ ಕೋಣೆಗಳನ್ನು ಶಾಸಕರು ನಿರ್ಮಿಸಿ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಅಲ್ಲದೆ ಸರ್ಕಾರವೂ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡರಾದ ಚನ್ನು ಬಿರಾದಾರ, ಶ್ರವಣಕುಮಾರ ಮದ್ರೆಕರ್​ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗೋವರ್ಧನ, ಎಇಇ ಹೋನ್ನೇಶ ಅಳ್ಳಗಿ, ಪ್ರಮುಖರಾದ ಪ್ರಭುರಾಯ ಪೂಜಾರಿ, ಅವಧೂತಪ್ಪ ಪೂಜಾರಿ, ಸಂಜಯಕುಮಾರ ಜೋಗನ್​, ಸಂಪತಕುಮಾರ, ಸಲಾಂ ಸಗರಿ, ಆನಂದ ಗಾಜರೆ, ಬಿಜಿ ಪಾಟೀಲ್​, ನಾದಕೆಂಚಪ್ಪ, ಜಾಫರ್​ಅಲಿ, ಗುರುಶರಣ ಪಾಟೀಲ್​, ಬಾಬು ಗೊಬ್ಬೂರ, ಕಲ್ಮೇಶ ಪಾಟೀಲ್​, ವಿಶ್ವನಾಥ ಸರಸಂಬಿ, ಲಕ್ಷ್ಮಣ ತಳಕೇರಿ, ಹಿರಗಪ್ಪ ದೊಡ್ಡಮನಿ, ಸದಾಶಿವ ಉಪ್ಪಿನ್​, ಸಿದ್ದಣ್ಣ ಪೂಜಾರಿ ಇತರರಿದ್ದರು.ಶರಣಬಸಪ್ಪ ಉಪ್ಪಿನ ನಿರೂಪಣೆ ಮಾಡಿದರು. ಶಿವುಕುಮಾರ ಸಿಂಗೆ ವಂದಿಸಿದರು.
"

ನಮ್ಮ ಭಾಗದಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಕುಡಿವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಜನರಿಗೆ ಕುಡಿವ ನೀರು, ಉದ್ಯೋಗ ಸೇರಿ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

— > ಬಿ.ಆರ್​.ಪಾಟೀಲ್​, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net