ರಾಯಚೂರು ಉತ್ಸವದಲ್ಲಿ ಪುಷ್ಪಗಳು ಹೇಳಿದವು ಜಿಲ್ಲೆಯ ಇತಿಹಾಸ

ರಾಯಚೂರು ಜಿಲ್ಲಾ ಉತ್ಸವದಲ್ಲಿ ಆಯೋಜಿಸಿದ್ದ ಪುಷ್ಪಮೇಳದಲ್ಲಿ ಕಲಾವಿದ ವೆಂಕಟೇಶ ಅವರು ಅರಳೆಲೆಯಲ್ಲಿ ಬಿಡಿಸಿದ ಗಣ್ಯರ ಚಿತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವೀಕ್ಷಿಸಿದರು. ಶಾಸಕ ಬಸನಗೌಡ ದದ್ದಲ್ ಇತರರಿದ್ದರು. ರಾಯಚೂರು ಜಿಲ್ಲಾ ಉತ್ಸವದಲ್ಲಿ ಆಯೋಜಿಸಿದ್ದ ಪುಷ್ಪಮೇಳದಲ್ಲಿ ಗಮನ ಸೆಳೆದ ಹಟ್ಟಿಚಿನ್ನದಗಣಿ, ರಾಯಚೂರು ಕೋಟೆ, ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆ.
ರಾಯಚೂರು ಜಿಲ್ಲಾ ಉತ್ಸವದಲ್ಲಿ ಆಯೋಜಿಸಿದ್ದ ಪುಷ್ಪಮೇಳದಲ್ಲಿ ಕಲಾವಿದ ವೆಂಕಟೇಶ ಅವರು ಅರಳೆಲೆಯಲ್ಲಿ ಬಿಡಿಸಿದ ಗಣ್ಯರ ಚಿತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವೀಕ್ಷಿಸಿದರು. ಶಾಸಕ ಬಸನಗೌಡ ದದ್ದಲ್ ಇತರರಿದ್ದರು. ರಾಯಚೂರು ಜಿಲ್ಲಾ ಉತ್ಸವದಲ್ಲಿ ಆಯೋಜಿಸಿದ್ದ ಪುಷ್ಪಮೇಳದಲ್ಲಿ ಗಮನ ಸೆಳೆದ ಹಟ್ಟಿಚಿನ್ನದಗಣಿ, ರಾಯಚೂರು ಕೋಟೆ, ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆ.
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನದಗಣಿ, ರಾಯಚೂರು ಕೋಟೆ ಆಕರ್ಷಕ
  • ದೇಶದ ಏಕೈಕ ಹಟ್ಟಿ ಚಿನ್ನದಗಣಿ ಸ್ತಬ್ಧಚಿತ್ರ
  • ಹೂವುಗಳನ್ನು ಬಳಸಿ ವಿವಿಧ ಆಕೃತಿ ರಚನೆ
ರಾಯಚೂರು: ನಗರದ ಕೃಷಿ ವಿಜ್ಞಾನಗಳ ವಿವಿ ಸಭಾಂಗಣದಲ್ಲಿ ಆಯೋಜಿಸಿದ್ದ ಪುಷ್ಪ ಮೇಳದಲ್ಲಿ ಜಿಲ್ಲೆಯ ಇತಿಹಾಸವೇ ಹೂಗಳಲ್ಲಿ ಅರಳಿತ್ತು. ತರಹೇವಾರಿ ಹೂವುಗಳನ್ನು ಬಳಸಿ ವಿವಿಧ ಆಕೃತಿ ರಚನೆ, ಅಲಂಕಾರಿ ಚಿತ್ರ ಬಿಡಿಸಿದ್ದು ಕಣ್ಮನ ಸೆಳೆಯಿತು.
ಚೆಂಡು ಹೂವು, ದಾಸವಾಳ, ಕನಕಾಂಬರಿ ಹೂವುಗಳಿಂದ ನಿರ್ಮಿಸಿದ ದೇಶದ ಏಕೈಕ ಹಟ್ಟಿ ಚಿನ್ನದಗಣಿ ಸ್ತಬ್ಧಚಿತ್ರ ಆಕರ್ಷವಾಗಿತ್ತು. ವೈಟ್‌ರೋಜ್, ಚೆಂಡುಹೂವಿನಿಂದ 10 ಅಡಿ ಉದ್ದ, 4ಅಡಿ ಎತ್ತರದಲ್ಲಿ ಸ್ಥಾಪಿಸಿದ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್ ಗಮನ ಸೆಳೆಯಿತು.
ಚೆಂಡು, ಕನಕಾಂಬರಿಯಿಂದ ತಯಾರಿದ ರಾಯಚೂರು ಕೋಟೆ ಚಿತ್ರ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಜತೆಗೆ ಹೂವಿನ ಮಧ್ಯೆ ಸಾಲುಮರದ ತಿಮ್ಮಕ್ಕ, ಮಹಿಳಾ ವಿಶ್ವಕಪ್ ಗೆಲ್ಲಿಸಿದ ನಾಯಕಿ ಹರ್‌ಪ್ರಿತ್‌ಕೌರ್ ಚಿತ್ರ ಗಮನ ಸೆಳೆದವು. ಇನ್ನು ಕಲ್ಲಂಗಡಿಯಲ್ಲಿ ಜ್ಞಾನಪೀಠ ಪುರಸ್ಕೃತರ ಫೋಟೋ, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ಪುನೀತ್ ರಾಜಕುಮಾರ್ ಚಿತ್ರಗಳು ಕಣ್ಣಿಗೆ ತಂಪು ನೀಡಿದವು.
ರಾಯಚೂರಿನ ರಂಗಮಂದಿರದಲ್ಲಿ ಜಿಲ್ಲಾ ಉತ್ಸವ ನಿಮಿತ್ತ ಪತ್ರಕರ್ತ ಶಶಿಧರ್ ಅಂಗಡಿ ಬಿಡಿಸಿದ್ದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಲೋಗೋ ರಂಗೋಲಿ ಗಮನ ಸೆಳೆಯಿತು.
ಕಲಾವಿದ ವೆಂಕಟೇಶ, ಅರಳೆಲೆಯಲ್ಲಿ ರಚಿಸಿದ ಚಿತ್ರಗಳು ಆಕರ್ಷಕವಾಗಿದ್ದವು. ಅರಳೆಲೆಯಲ್ಲಿ 8 ಜ್ಞಾನಪೀಠ ಪುರಸ್ಕೃತರು, ಭಾರತರತ್ನ ಪ್ರಶಸ್ತಿ ಪುರಸ್ಕೃತರು, ಸಿದ್ಧಗಂಗಾ ಶ್ರೀಗಳು, ಸ್ವಾಮಿ ವಿವೇಕಾನಂದ, ಕಾಂತಾರ, ಶ್ರೀಕೃಷ್ಣ, ತಿರುಪತಿ ವೆಂಕಟರಮಣ, ರಾಮಸೀತೆ ಸೇರಿ ವಿವಿಧ ವ್ಯಕ್ತಿಗಳ ಚಿತ್ರಗಳು ಕಣ್ಮನ ಸೆಳೆದವು. ಅಲ್ಲದೆ ಔಷಧೀಯ ಸಸಿಗಳು, ಅಣಬೆಕೃಷಿ ಮಾಹಿತಿ ಉಪಯುಕ್ತವಾಗಿತ್ತು. ಜತೆಗೆ ಜಿಲ್ಲೆಯ ಪ್ರಗತಿಪರ ರೈತರು ಬೆಳೆದಿದ್ದ ವಿವಿಧ ಹಣ್ಣುಗಳು, ತರಕಾರಿ, ಸೊಪ್ಪುಗಳ ಪ್ರದರ್ಶನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net