ಕೋಲಾರ ಜಿಲ್ಲೆಯಲ್ಲಿ ಸೇವಂತಿಗೆ, ಚಂಡುಹೂವು ಬೆಳೆಗಾರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಟೊಮೆಟೋ ಬೆಳೆಗಳಿಂದ ರೈತರು ನಷ್ಟ ಹೊಂದಿದ್ದು, ಹೂವು ಬೆಳೆಯಲು ರೈತರು ಮುಂದಾಗಿದ್ದಾರೆ. ಕಳೆದ ವರ್ಷ ತೀವ್ರ ನಷ್ಟಕ್ಕೆ ಸಿಲುಕಿದ ಹೂವು ಬೆಳೆಗಾರರು ಈ ವರ್ಷವಾದರೂ ಉತ್ತಮ ಬೆಲೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ವರ್ಷದ ಪ್ರಾರಂಭದಲ್ಲಿಯೇ ಚೆಂಡುಹೂವಿಗೆ ಬೆಲೆ ಕುಸಿತ ಕಂಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.