ಕೇಂದ್ರ ಸರ್ಕಾರದ ಸಬ್ಸಿಡಿ ಹಿಂಪಡೆಯುವ ನಿರ್ಧಾರದಿಂದ ವಿಮಾನಯಾನ ಸೇವೆ ಕಳೆದ ವರ್ಷ ಸ್ಥಗಿತಗೊಂಡಿತು. ರಾಜ್ಯ ಸರ್ಕಾರದಿಂದಲೇ ಸಬ್ಸಿಡಿ ಹಣ ಭರಿಸಿ ವಾಯುಯಾನ ಸೇವೆ ಕಲ್ಪಿಸಲು ನಿರ್ಧರಿಸಲಾಗಿದೆ. ಸ್ಟಾರ್ ಏರ್ಲೆನ್ ಸಂಸ್ಥೆಯೊಂದಿಗೆ (2025ರ ಏ.15ರಿಂದ 2026ರ ಏ.14) ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಏ.15ರಿಂದ ಸೇವೆ ಸ್ಥಗಿತಗೊಳಿಸಿತು. ಸ್ಟಾರ್ ಏರ್ಲೆನ್ ಕಳೆದ ವರ್ಷಕ್ಕಿಂತ ಹೆಚ್ಚು ಅಂದರೆ 22 ಕೋಟಿ ರೂ.ಗೆ ಪಟ್ಟು ಹಿಡಿದಿತ್ತು. ಅಧಿಕಾರಿಗಳ ಜತೆ ಜಿಲ್ಲಾಡಳಿತ ಸತತ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದು ಲ ನೀಡಿದೆ. ಮುಂದಿನ ಒಂದು ವರ್ಷದ ಅವಧಿಗೆ ವಿಮಾನಯಾನ ಪುನರಾರಂಭಕ್ಕೆ ಕಲ್ಯಾಣ ಕರ್ನಾಟಕ ಅಭಿವದ್ಧಿ ಮಂಡಳಿಯಿಂದ 14.25 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಇದಕ್ಕೆ ಸ್ಟಾರ್ ಏರ್ಲೆನ್ಸ್ ಸಹ ಸಮ್ಮತಿ ಸೂಚಿಸಿದೆ.