ಯಲಗೂರು ಗೋಶಾಲೆಗೆ ಐದು ಟ್ರ್ಯಾಕ್ಟರ್ ಜೋಳದ ಮೇವು ದಾನ

ಮುದ್ದೇಬಿಹಾಳ ತಾಲೂಕಿನ ಯಲಗೂರು ಗ್ರಾಮದ ಪ್ರಸಿದ್ಧ ಮಾರುತೇಶ್ವರ ದೇವಸ್ಥಾನದ ಗೋಶಾಲೆಯ ಗೋವುಗಳಿಗೆ ಜೋಳದ ಮೇವನ್ನು ಅಖಂಡ ಹಿಂದೂ ಮಹಾ ಸಮ್ಮೇಳನದ ಸಂಘಟಕರ ವತಿಯಿಂದ ಟ್ರ್ಯಾಕ್ಟರ್‌ನಲ್ಲಿ ಒಯ್ಯುತ್ತಿರುವುದು.
ಮುದ್ದೇಬಿಹಾಳ ತಾಲೂಕಿನ ಯಲಗೂರು ಗ್ರಾಮದ ಪ್ರಸಿದ್ಧ ಮಾರುತೇಶ್ವರ ದೇವಸ್ಥಾನದ ಗೋಶಾಲೆಯ ಗೋವುಗಳಿಗೆ ಜೋಳದ ಮೇವನ್ನು ಅಖಂಡ ಹಿಂದೂ ಮಹಾ ಸಮ್ಮೇಳನದ ಸಂಘಟಕರ ವತಿಯಿಂದ ಟ್ರ್ಯಾಕ್ಟರ್‌ನಲ್ಲಿ ಒಯ್ಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಅಖಂಡ ಹಿಂದೂ ಮಹಾ ಸಮ್ಮೇಳನದ ಸಂಘಟಕರಿಂದ ನಿರ್ಧಾರ
  • ಸಮ್ಮೇಳನದಲ್ಲಿ ಉಳಿದ ಹಣ ಸದುಪಯೋಗ
ಮುದ್ದೇಬಿಹಾಳ: ತಾಲೂಕಿನಲ್ಲಿ ಕಳೆದ ಜನವರಿ ತಿಂಗಳಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ್ದ ತಾಲೂಕು ಮಟ್ಟದ ಅಖಂಡ ಹಿಂದೂ ಮಹಾ ಸಮ್ಮೇಳನದ ಸಂಘಟಕರು, ಹಿಂದೂ ಸಮ್ಮೇಳನ ನಡೆಸಿ ಉಳಿದ ಹಣದಿಂದ ಗೋ ಸೇವೆಯಂತಹ ಸತ್ಕಾರ್ಯಕ್ಕೆ ಬಳಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸಮ್ಮೇಳನದ ಖರ್ಚು-ವೆಚ್ಚಗಳ ನಂತರ ಉಳಿದ ಹಣದಲ್ಲಿ ಯಲಗೂರು ಗ್ರಾಮದ ಪ್ರಸಿದ್ಧ ಮಾರುತೇಶ್ವರ ದೇವಸ್ಥಾನದ ಗೋಶಾಲೆಯ ಗೋವುಗಳಿಗೆ ಜೋಳದ ಮೇವನ್ನು ದಾನವಾಗಿ ನೀಡಿದ್ದಾರೆ.
ದೇಶಾದ್ಯಂತ ನಡೆದ ಹಿಂದೂ ಮಹಾ ಸಮ್ಮೇಳನಗಳ ಮಾದರಿಯಲ್ಲಿ ಮುದ್ದೇಬಿಹಾಳ ತಾಲೂಕಿನ ಜನತೆ ಕೂಡ ಒಗ್ಗಟ್ಟಿನಿಂದ ಸಮ್ಮೇಳನ ಆಯೋಜಿಸಿ ಯಶಸ್ವಿಗೊಳಿಸಿದ್ದರು.
ಈ ವೇಳೆ ಸಂಗ್ರಹವಾದ ಹಣದಲ್ಲಿ ಸಮ್ಮೇಳನದ ನಂತರ ಉಳಿದಯಾದ ಮೊತ್ತವನ್ನು ವ್ಯರ್ಥ ಮಾಡದೆ, ಪುಣ್ಯದ ಕೆಲಸಕ್ಕೆ ಬಳಸಲು ಸಮಾಜ ಬಾಂಧವರು ನಿರ್ಧರಿಸಿದ್ದರು. ಪ್ರಸ್ತುತ ಜಾನುವಾರುಗಳಿಗೆ ಮೇವಿನ ಕೊರತೆ ಇರುವುದನ್ನು ಮನಗಂಡು, ಯಲಗೂರ ಗೋಶಾಲೆಯ ಮೂಕ ಪ್ರಾಣಿಗಳ ಹಸಿವು ನೀಗಿಸಲು ರೈತರಿಂದ 5 ಟ್ರ್ಯಾಕ್ಟರ್ ತುಂಬಿದ ಜೋಳದ ಮೇವನ್ನು ಖರೀದಿಸಿ ದಾನ ಮಾಡಿದ್ದಾರೆ. ಪ್ರಭು ಕಡಿ, ಪರಶುರಾಮ ಪವಾರ, ವೆಂಕನಗೌಡ ಪಾಟೀಲ್, ಮುರಿಗೆಪ್ಪ ಮೋಟಗಿ, ಮಾಣಿಕ ದಂಡಾವತಿ, ಸುಭಾಸ್ ಕುಲಕರ್ಣಿ, ನಿಂಗಣ್ಣ ಮಹೀಂದ್ರಕರ, ಅಜಯ್ ಭೋಸಲೆ, ಉಮರಾಮ ಪಟೇಲ, ಕಾಶಿನಾಥ ಹುಗ್ಗಿ, ಶ್ರೀಶೈಲ ದೊಡ್ಡಮನಿ, ಬಾಬು ಗೋಗಿ, ಅಶೋಕ್ ಪಿ, ಮಣಿ, ಸಂಗಮೇಶ ನಾವದಗಿ, ಮಹಾಂತೇಶ ಬೂದಿಹಾಳಮಠ, ವಿಜಯ ಬಡಿಗೇರ, ವಿಕ್ರಮ ಓಸ್ವಾಲ್ ಮತ್ತಿತರರಿದ್ದರು.

"ಗಮನ ಸೆಳೆದ ಸಮಾಜದ ನಡೆ

ಕೃಷಿಯ ಅವಿಭಾಜ್ಯ ಅಂಗವಾಗಿರುವ ಗೋವುಗಳಿಗೆ ಮೇವಿನ ತೀವ್ರ ಅಭಾವವಿರುವ ಈ ಸಮಯದಲ್ಲಿ, ಸಮಾಜ ಬಾಂಧವರು ತೋರಿದ ಈ ಕಾಳಜಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಬುಧವಾರ ಸಂಘಟಕರು ಹಾಗೂ ಹಿಂದೂ ಬಾಂಧವರು ಸ್ವತಃ ಟ್ರ್ಯಾಕ್ಟರ್‌ಗಳ ಮೂಲಕ ಕಣಿಕೆಯನ್ನು ಯಲಗೂರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ದೇವಸ್ಥಾನದ ಗೋಶಾಲೆಗೆ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net