ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಘಟನೆ ಜರುಗಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಯಾದಗಿರಿಯಿಂದ ಇಂಗಳಗಿಗೆ ತೆರಳುತ್ತಿದ್ದ ಕ್ರೂಸರ್ ಮತ್ತು ವಾಡಿಯಿಂದ ಚೆನ್ನೈ ಕಡೆಗೆ ಯಾದಗಿರಿ ಮಾರ್ಗವಾಗಿ ತೆರಳುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.ಇಂಗಳಗಿಯ ಐದು ಜನ ಮೃತಪಟ್ಟಿದ್ದು ಎಲ್ಲರೂ ಸಂಬಂಧಿಕರು ಆಗಿದ್ದಾರೆ. ಮಹೆಬೂಬ ಅಲಿ(42), ತೊಲಾ ಭಾಷಾ(30), ಹುಸೇನ್ ಶಾಹಾಪುರ(47), ರಸೂಲಬಿ(43) ಹಾಗೂ ಫಾತಿಮಾ(40) ಮೃತಪಟ್ಟವರು. ಡಿಕ್ಕಿ ರಭಸಕ್ಕೆ ಕ್ರೂಸರ್ ಮತ್ತು ಕ್ರೂಸರ್ನಲ್ಲಿ ಪ್ರಯಾಣಿಸುತ್ತಿದ್ದ ಐವರ ದೇಹಗಳು ಛಿದ್ರಗೊಂಡಿವೆ.ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀವಾಸಲು, ಡಿವೈಎಸ್ ಪಿ ಶಂಕರಗೌಡ ಪಾಟೀಲ್ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿದರು. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.