ಎಚ್‌ಎಎಲ್ ಸಂಸ್ಥಾಪನಾ ದಿನದ ಅಂಗವಾಗಿ ಫಿಟ್ ಇಂಡಿಯಾ ವಾಕಥಾನ್

ಎಚ್‌ಎಎಲ್ ಸಂಸ್ಥಾಪನ ದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಫಿಟ್ ಇಂಡಿಯಾ ವಾಕಥಾನ್‌ಗೆ ಎಚ್‌ಎಎಲ್ ಸಿಎಂಡಿ ಡಾ.ಡಿ.ಕೆ.ಸುನಿಲ್ ಚಾಲನೆ ನೀಡಿದರು. ಹಿರಿಯ ಅಧಿಕಾರಿಗಳು, ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್, ಪರ್ವತಾರೋಹಿ ಅರಿತ್ರಾ ರಾಯ್ ಉಪಸ್ಥಿತರಿದ್ದರು.
ಎಚ್‌ಎಎಲ್ ಸಂಸ್ಥಾಪನ ದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಫಿಟ್ ಇಂಡಿಯಾ ವಾಕಥಾನ್‌ಗೆ ಎಚ್‌ಎಎಲ್ ಸಿಎಂಡಿ ಡಾ.ಡಿ.ಕೆ.ಸುನಿಲ್ ಚಾಲನೆ ನೀಡಿದರು. ಹಿರಿಯ ಅಧಿಕಾರಿಗಳು, ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್, ಪರ್ವತಾರೋಹಿ ಅರಿತ್ರಾ ರಾಯ್ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಚ್‌ಎಎಲ್​ನಿಂದ ಫಿಟ್ ಇಂಡಿಯಾ ವಾಕಥಾನ್‌
  • ಎಚ್​ಎಎಲ್ 86 ನೇ ಸಂಸ್ಥಾಪನ ದಿನಾಚರಣೆ
  • ಕ್ರಿಕೆಟ್ ತಾರೆ ಶ್ರೇಯಾಂಕ ಪಾಟೀಲ್, ಪರ್ವತಾರೋಹಿ ಅರಿತ್ರಾ ರಾಯ್ ಭಾಗಿ

ಬೆಂಗಳೂರು:ಫಿಟ್ ಇಂಡಿಯಾವಾಕಥಾನ್‌ನೊಂದಿಗೆ ಎಚ್‌ಎಎಲ್ತನ್ನ 86 ನೇಸಂಸ್ಥಾಪನ ದಿನಾಚರಣೆಯನ್ನುಸೋಮವಾರ ಆಚರಿಸಿಕೊಂಡಿತು. ಆರೋಗ್ಯ,ಏಕತೆ ಮತ್ತುಶ್ರೇಷ್ಠತೆಯ ತನ್ನ ಬದ್ಧತೆಯನ್ನುಇದರೊಂದಿಗೆ ಪ್ರದರ್ಶಿಸಿತು.

ಕಾರ್ಯಕ್ರಮದಲ್ಲಿಎಚ್‌ಎಎಲ್ ಸಿಎಂಡಿ ಡಾ.ಡಿ.ಕೆ.ಸುನಿಲ್,ನಿರ್ದೇಶಕರಾದಬರೇಣ್ಯ ಸೇನಾಪತಿ,ಕೆ.ರವಿ,ಎಂ.ಜಿ.ಬಾಲಸುಬ್ರಮಣ್ಯವಾಕಥಾನ್‌ಗೆ ಚಾಲನೆ ನೀಡಿದರು.

ಬೆಂಗಳೂರುಮೂಲದ ವಿಭಾಗಗಳಿಂದ ಸಾವಿರಾರುಉದ್ಯೋಗಿಗಳು ಭಾಗವಹಿಸಿದ್ದರು. ರಾಷ್ಟ್ರೀಯಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಶ್ರೇಯಾಂಕ ಪಾಟೀಲ್ ಮತ್ತುಪರ್ವತಾರೋಹಿ ಅರಿತ್ರಾ ರಾಯ್ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಇದೇವೇಳೆ ಡಾ.ಡಿ.ಕೆ.ಸುನಿಲ್ಅರಿತ್ರಾ ರಾಯ್ ಅವರ ದಕ್ಷಿಣಅಮೆರಿಕಾ ಪರ್ವತಾರೋಹಣವನ್ನುಉದ್ಘಾಟಿಸಿದರು. ಅರಿತ್ರಾ ತಮ್ಮಮುಂದಿನ ಸಾಹಸವಾಗಿ ದಕ್ಷಿಣಅಮೆರಿಕಾದ ಅತಿ ಎತ್ತರದ ಮೌಂಟ್ಅಕಾನ್‌ಕಾಗುವಾವನ್ನು ಏರಲಿದ್ದಾರೆ.

ಎಚ್‌ಎಎಲ್ಯಾವಾಗಲೂ ಧೈರ್ಯ,ಶ್ರೇಷ್ಠತೆಮತ್ತು ಗಡಿಗಳನ್ನು ದಾಟುವ ಮನೋಭಾವಹೊಂದಿದೆ. 86 ನೇಸಂಸ್ಥಾಪನಾ ದಿನವನ್ನು ಆಚರಿಸುತ್ತಿರುಸಂದರ್ಭದಲ್ಲಿ ಸ್ಥಿತಿಸ್ಥಾಪಕತ್ವ,ನಾಯಕತ್ವ ಮತ್ತುಸವಾಲುಗಳನ್ನು ಜಯಿಸುವ ಸಾಮರ್ಥ್ಯವನ್ನುಪ್ರದರ್ಶಿಸುವ ಅಸಾಧಾರಣಅನ್ವೇಷಣೆಗಳನ್ನು ಪ್ರೋತ್ಸಾಹಿಸಲುಎಚ್‌ಎಎಲ್ ಮುಂದಾಗಿದೆ ಎಂದುಎಚ್‌ಎಎಲ್ ಸಿಎಂಡಿ ಡಾ.ಡಿ.ಕೆ.ಸುನಿಲ್ಹೇಳಿದ್ದಾರೆ.

ಎಚ್‌ಎಎಲ್ದಿನವನ್ನು ಪ್ರತಿವರ್ಷ ಡಿ.23ರಂದು ಆಚರಿಸಲಾಗುತ್ತದೆ.ಈ ವರ್ಷವೂಎಚ್‌ಎಎಲ್​ನ ಎಲ್ಲಾ ವಿಭಾಗಗಳುಮತ್ತು ಕಚೇರಿಗಳಲ್ಲಿ ಆಚರಿಸುವುದರಜೊತೆಗೆ ಹೊಸ ಮ್ಯಾನೇಜ್‌ಮೆಂಟ್ಅಕಾಡೆಮಿ ಕ್ಯಾಂಪಸ್‌ನಲ್ಲಿವಿಶೇಷ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net