

ಪ್ರಮುಖ ಮುಖ್ಯಾಂಶಗಳು
ಹೆಚ್ಚುತ್ತಿರುವ ಅವಘಡಗಳು
| ತುರ್ತು ಸಹಾಯವಾಣಿಗೆ 1235 ಕರೆಗಳು | ಅಗ್ನಿಶಾಮಕ ದಳ ರಕ್ಷಣೆ
ಆನಂದ ಭಮ್ಮನ್ನವರ ಚಿಕ್ಕೋಡಿ:
ಜಿಲ್ಲೆಯಲ್ಲಿ ಆಗಾಗ ನಡೆಯುವ ಅಗ್ನಿ ಅವಘಡ, ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ತುರ್ತು ಸಹಾಯಕ್ಕೆ ಬರುವ ಜಿಲ್ಲಾ ಅಗ್ನಿಶಾಮಕ ದಳ ಇಲಾಖೆ ಸೇವೆ ನೀಡುವಲ್ಲಿ ಮುಂದೆ ಇದೆ. ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 15 ಅಗ್ನಿಶಾಮಕ ದಳದ ಠಾಣೆಗಳು ಸೇವೆ ನೀಡುತ್ತಿದ್ದು, ದೊಡ್ಡ ಜಿಲ್ಲೆಯಾದರಿಂದ ತುರ್ತು ಸಹಾಯವಾಣಿ ಸಂಖ್ಯೆಗೆ ಸಾವಿರರೂ ಕರೆಗಳು ದಾಖಲಾಗಿವೆ.
ಅಗ್ನಿಶಾಮಕ ದಳ ಎರಡು ರೀತಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಅಗ್ನಿ ಅವಘಡ ಸಂಭವಿಸಿದರೇ ನಂದಿಸುವ ಕೆಲಸ ಮತ್ತು ಅಪಾಯದಲ್ಲಿರುವ ಜನಜಾನುವಾರಗಳ ರಕ್ಷಣೆಗೆ ಸದಾ ಸನ್ನದ್ಧವಾಗಿದೆ. ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪದ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಪಾತ್ರವು ಮಹತ್ವದ್ದಾಗಿದೆ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ನದಿ ದಡದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಜನರ ರಕ್ಷಣೆಯಲ್ಲಿ ಇವರ ಪಾತ್ರ ಪ್ರಮುಖವಾಗಿದೆ.
ಜಿಲ್ಲೆಯಲ್ಲಿ ೧೫ ಬೆಂಕಿ ನಂದಿಸುವ ವಾಹನಗಳು:
ಬೆಳಗಾವಿ,ಖಾನಾಪೂರ,ಕಿತ್ತೂರ,ರಾಮದುರ್ಗ,ಸವದತ್ತಿ,ಗೋಕಾಕ,ಬೈಲಹೊಂಗಲ,ಹುಕ್ಕೇರಿ,ಹತ್ತರಗಿ,ಸಏಕೇಶ್ವರ,ಚಿಕ್ಕೋಡಿ,ಸದಲಗಾ,ಅಥಣಿ,ನಿಪ್ಪಾಣಿ ಮತ್ತು ರಾಯಬಾಗ ಹೀಗೆ ಒಟ್ಟು ೧೫ ಠಾಣೆಗಳಿದ್ದು,ಯರಗಟ್ಟಿ ,ಮೂಡಲಗಿ ಮತ್ತು ಮಂಗಸೂಳಿಗೆ ಹೊಸ ಠಾಣೆ ಮಂಜೂರಾಗಿದ್ದರೆ, ಸಾವುಗಳ ಕಾಮಗಾರಿ ಪ್ರಗತಿಯಲ್ಲಿವೇ.ಮಂಜುರಾದ 416 ಸಿಬ್ಬಂದಿ ಮೇಲಕ್ಕೆ 407 ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ೧೫ ಬೆಂಕಿ ನಂದಿಸುವ ವಾಹನಗಳಿವೇ.
ತುರ್ತು ಸೇವೆಗೆ ಕರೆ ಮಹಾಪೂರ:
ತುರ್ತು ಸಹಾಯವಾಣಿ ಸಂಖ್ಯೆಗೆ ಜಿಲ್ಲೆಯಲ್ಲಿ ಕಳೆದ ೨೦೨೫ರಲ್ಲಿ ಒಟ್ಟು ೧೨೩೫ ಕರೆಗಳು ದಾಖಲಾಗಿವೆ. ಇವುಗಳಲ್ಲಿ ಸಣ್ಣ,ಮಧ್ಯಮ ಮತ್ತು ದೊಡ್ಡ ಅವಘಡ ಎಂದು ಮೂರು ರೀತಿಯ ಪ್ರಕರಣಗಳು ವರದಿಯಾಗಿವೆ. ಕಳೆದ ೨೦೨೫ರ ಒಂದೇ ವರ್ಷದಲ್ಲಿ ಜಿಲ್ಲೆಯಲ್ಲಿ ೧೧೭೦ ( ೧ ರಿಂದ ೧೦ ಲಕ್ಷ ರೂ.ನಷ್ಟ) ,೪೪ ಮಧ್ಯಮ( ೧೦-೫೦ ಲಕ್ಷ ರೂ ನಷ್ಟದ) ಹಾಗೂ ೫೦ ಲಕ್ಷ ರೂ.ಮೇಲ್ಪಟ ನಷ್ಟವಾಗಿರುವ ಅವಘಡಗಳು ದಾಖಲಾಗಿವೆ. ಬೆಂಕಿ ಅವಘಡ ಪ್ರಕರಣಗಳೇ ಹೆಚ್ಚಾಗಿವೆ.ಹಾಗೂ ಈ ವರ್ಷ ಮಾರ್ಚ್‌ವರೆಗೆ 250ಕ್ಕೂ ಅಧಿಕ ಕರೆಗಳು ಸಹಾಯವಾಣಿಗೆ ಸಂಪರ್ಕಿಸುತ್ತವೆ.
ಅಧಿಕಾರಿಗಳ ಸಲಹೆ:
ಸಾಮಾನ್ಯವಾಗಿ ಜನವೇರಿ ಮತ್ತು ಪೆಬ್ರುವರಿಯಲ್ಲಿ ಕಬ್ಬಿಗೆ ಬೆಂಕಿ ತಗುಲುವ ಪ್ರಕರಣಗಳು ಸಾಮಾನ್ಯವಾಗಿವೆ.ಆದರಿಂದ ರೈತರು ತಮ್ಮ ಜಮೀನಿನಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಕೂಡಲೇ ಹೆಸ್ಕಾಂ ಇಲಾಖೆ ಗಮನಕ್ಕೆ ತಂದು ತಂತಿಗಳನ್ನು ಸರಿ ಪಡಿಸಬೇಕು. ಮತ್ತು ವಿಶೇಷವಾಗಿ ನದಿಯಲ್ಲಿ ಅಪ್ರಾಪ್ತರು,ಕಾಲುವೆ ಮತ್ತು ಕೃಷಿ ಹೊಂಡದಲ್ಲಿ ಈಜುಲು ಹೋಗುವಾಗ ಕುಟುಂಬಸ್ಥರ ಜೊತೆ ಹೋಗಬೇಕು,ಈಜು ಬಾರದಿದ್ದರೆ ನೀರಿಗೆ ಇಳಿಯದಂತೆ ಪಾಲಕರು ಗಮನಿಸಬೇಕು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಸಲಹೆ ನೀಡಿದ್ದಾರೆ.
ಕೋಟ್-1
ಯಾವುದೇ ಅಗ್ನಿ ಅವಘಡ ಸಂಭವಿಸಿದರೇ ಕೂಡಲೇ ತುರ್ತು ಸೇವೆಗೆ ಕರೆ ಮಾಡಿ. ಮತ್ತು ಸಿಬ್ಬಂದಿ ಬರುವವರೆಗೆ ಬೆಂಕಿ ನಂದಿಸುವ ಕಾರ್ಯ ಸ್ಥಳೀಯರು ಮುಂದಾಗಬೇಕು.ಜಿಲ್ಲೆಯಲ್ಲಿ 15 ಬೆಂಕಿ ನಂದಿಸುವ ವಾಹನಗಳ ರಕ್ಷಣಾ ಕರೆ ಸಿದ್ದವ. ಶೀಘ್ರವೇ ಇನ್ನೂ ಮೂರು ಠಾಣೆಗಳು ಸೇವೆಗೆ ಸಿದ್ದವಾಗಲಿವೆ.
ರಂಗನಾಥ ರಾಠೋಡ
ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ,ಬೆಳಗಾವಿ