ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗೆ ಬೆಂಕಿ Fire breaks

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗೆ ಬೆಂಕಿ Fire breaks
ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗೆ ಬೆಂಕಿ Fire breaks
Published on
ಮುಳಬಾಗಿಲು: ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಗುರುವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೈಕ್​ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ನಗರದ ಜೈಭೀಮ್​ ಬುದ್ದ ನಗರದ ನಿವಾಸಿ ಹಾಗೂ ಮಾಜಿ ಗೃಹರಕ್ಷಕ ದಳ ಸಿಬ್ಬಂದಿ ಸುಬ್ರಮಣಿ ಅವರು ಎಂದಿನಂತೆ ಬೈಕ್​ಅನ್ನು ಮನೆಯ ಮುಂದಿನ ಗೇಟ್​ನಲ್ಲಿ ನಿಲ್ಲಿಸಿ ಮಲಗಿದ್ದಾಗ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮಧ್ಯರಾತ್ರಿಯಲ್ಲಿ ಹಚ್ಚಿದ ಬೆಂಕಿಗೆ ವಾಹನ ಸುಟ್ಟು ಬೆಂಕಿಯ ಕೆನ್ನಾಲಿಗೆಯ ಬಿಸಿ ಮನೆಯವರಿಗೆ ತಟ್ಟಿದಾಗ ಎಚ್ಚರವಾಗಿ ನೋಡಿದರೆ ವಾಹನ ಸಂಪೂರ್ಣ ಭಸ್ಮವಾಗಿತ್ತು. ಈ ಕುರಿತು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net