

ಪಟ್ಟಣದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕಬಾರದೆಂಬ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿದ್ದು, ಕಸ ಹಾಕುವ ಜಾಗ ಗುರುತಿಸಿ ಸ್ವಚ್ಛಗೊಳಿಸಿ ಕಸ ಹಾಕುವವರಿಗೆ 500 ರೂ. ದಂಡ ವಿಧಿಸಲಾಗುತ್ತದೆ ಎಂದು ಬ್ಯಾನರ್ ಅಳವಡಿಸಲಾಗುತ್ತಿದೆ. ನಮ್ಮ ಊರು ಸ್ವಚ್ಛವಾಗಿರಬೇಕೆಂಬ ಮನಸ್ಥಿತಿ ಇಲ್ಲದ ಸಾರ್ವಜನಿಕರನ್ನು ತಿದ್ದುವುದು ಕಷ್ಟವಾಗಿದೆ.
ಪುರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿದ್ದು, ಈಗಾಗಲೇ ಬಹಳಷ್ಟು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರು ಯಾರೇ ಆಗಿದ್ದರೂ ಅವರನ್ನು ಗುರುತಿಸಿ ಅವರ ಮನೆಗಳ ಮುಂದೆ ಕಸ ಸುರಿಯುವ ಕ್ರಮ ಕೈಗೊಳ್ಳಲಾಗುತ್ತದೆ.