ಕಲಬುರಗಿ ಕೇಂದ್ರ ಕಾರಾಗೃಹದ ಬಂದಿ ಪುತ್ರನ ಶಿಕ್ಷಣಕ್ಕಾಗಿ ಸ್ಥಳಿಯ ಸಂಸ್ಥೆಗಳ ಮುಖ್ಯಸ್ಥರು ಚೆಕ್ ಮೂಲಕ ಆರ್ಥಿಕ ನೆರವು ನೀಡಿದರು. ರಾಕೇಶ ಕಾಂಬಳೆ, ಫಾದರ್ ಮಿರಿಂಡಾ, ಫಾದರ್ ಮಾಕ್ಸಿಮ್, ಕಿರಣ, ಬಿ.ಸುರೇಶ್, ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ನಾಗರಾಜ ಮೂಲಗೆ ಇತರರಿದ್ದರು.
Published on:
Copied
Follow Us
ಕಲಬುರಗಿ: ಕೇಂದ್ರ ಕಾರಾಗೃಹದ ಬಂದಿಯ ಪುತ್ರನ ಶೈಕ್ಷಣಿಕ ವೆಚ್ಚ ಭರಿಸಲು ಹಲವು ಸಂಸ್ಥೆಗಳು ಮುಂದೆ ಬಂದಿವೆ. ಶಿಾ ಬಂದಿ ದತ್ತಾತ್ರೇಯ ಸುಭಾಷ ಆರ್ಥಿಕ ದುರ್ಬಲರಾಗಿದ್ದು, ಈತನ ಪುತ್ರನ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ (ಫ್ಯಾರಾ ಮೆಡಿಕಲ್ ಕೋರ್ಸ್) ಕಾಲೇಜು ವೆಚ್ಚ ಭರಿಸಲು ಅನುವು ಮಾಡಿಕೊಡುವಂತೆ ಕೋರಲಾಗಿತ್ತು. ಸ್ಥಳಿಯ ಸಂಸ್ಥೆಗಳಾದ ಡಿವೈನ್ ಸ್ಕೂಲ್ ಆಫ್ ನರ್ಸಿಂಗ್ ಸಂಸ್ಥಾಪಕ ಡಾ.ಕಿರಣ್ ಜಾರ್ಜ್ ಹಾಗೂ ಕಡಗಂಚಿಯ ಕಾರ್ಮಲ್ ಜ್ಯೋತಿ ಚಾರಿಟೇಬಲ್ ಟ್ರಸ್ಟ್ನವರು ಮೂರು ವರ್ಷದ ಶೈಕ್ಷಣಿಕ ವೆಚ್ಚ ಭರಿಸಲು ಸಮ್ಮತಿಸಿ ಚೆಕ್ ಮೂಲಕ ಮೊದಲ ವರ್ಷದ ಶುಲ್ಕಕ್ಕಾಗಿ ನೆರವು ನೀಡಿದರು. ಬಂದಿ ಪುತ್ರನ ವಿದ್ಯಾಭ್ಯಾಸಕ್ಕಾಗಿ ಅರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಸಂಸ್ಥೆ ಮುಖ್ಯಸ್ಥರನ್ನು ಜೈಲಿನ ಪ್ರಭಾರಿ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಅಭಿನಂದಿಸಿದರು. ಡಿವೈನ್ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಕಾರ್ಮಲ್ ಜ್ಯೋತಿ ಚಾರಿಟೇಬಲ್ ಟ್ರಸ್ಟ್ನ ಫಾದರ್ ಮಿರಿಂಡಾ, ಫಾದರ್ ಮಾಕ್ಸಿಮ್, ಕಿರಣ, ಈ ಸಂಸ್ಥೆ ಸಹಾಯಕ ಅಧೀಕ್ಷಕ ಬಿ.ಸುರೇಶ್, ಜೈಲರ್ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್ ಮತ್ತು ಸಂಸ್ಥೆ ಶಿಕ್ಷಕ ನಾಗರಾಜ ಮೂಲಗೆ ಇದ್ದರು.