ಹಂಪಿಯಲ್ಲಿ ವಿತ್ತ ಸಚಿವೆಯ ಚಿಂತನ ಮಂಥನ?

 ಹಂಪಿ
ಹಂಪಿ
Published on

ಪ್ರಮುಖ ಮುಖ್ಯಾಂಶಗಳು

  • ಡಿ.21ಕ್ಕೆ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಯುವ ಸಾಧ್ಯತೆ
ಹೊಸಪೇಟೆ: ವಿತ್ತ ಸಚಿವೆ ನಿರ್ಮಲ ಸೀತರಾಮನ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಆರ್ಥಿಕ ಇಲಾಖೆ ಸಂಭವಿಸಿದಂತೆ ಉನ್ನತ ಅಧಿಕಾರಿಗಳ ಜತೆ ಚಿಂತನೆ ಮಂಥನ ನಡೆಸಲು ಹಂಪಿ ಪರಿಸರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕೇಂದ್ರ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ‌ ಕಚೇರಿ ಸಭಾಂಗಣ ಹೊರತು ಪಡಿಸಿ ಪ್ರತಿವರ್ಷ ದೇಶದ ವಿವಿಧ ಸ್ಥಳಗಳನ್ನು ಆಯ್ಕೆ‌ ಮಾಡಿ ನಂತರ ಸಭೆ ನಡೆಸುತ್ತಾರೆ. ಅದರಂತೆ, ಈ ಭಾರಿ ಸಭೆ ನಡೆಸಲು ಮೂರು ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಹಂಪಿಯನ್ನು ಕೂಡ ಆಯ್ಕೆ ಮಾಡಲಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ಕೇಂದ್ರದಿಂದ ಅಧಿಕಾರಿಗಳ ತಂಡ ಬೇಟಿ‌ ನೀಡಿ ಹಂಪಿ‌ ಪರಿಸರದಲ್ಲಿ ಸಭೆ ನಡೆಸಲು ಪರಿಶೀಲನೆ ನಡೆಸಿದ್ದರು. ತಾಲೂಕಿನ ಮಲಪನಗುಡಿಯ ವಿಜಯಶ್ರೀ ರೆಸಾರ್ಟ್‌ ಸೇರಿದಂತೆ ಇತರೆ ಹೊಟೇಲ್, ರೆಸಾರ್ಟ್ ಗಳನ್ನು ಆಯ್ಕೆ ಮಾಡಲಾಗಿದೆ. ಡಿ.21ರಂದು ಸಭೆ ನಡೆಯುವ ಸಾದ್ಯತೆಯಿದೆ. ಇನ್ನು ಆರ್ಥಿಕ ಇಲಾಖೆಯಿಂದ ಅಂತಿಮ ಆದೇಶ ಬಂದ ಕೂಡಲೇ ಸಭೆಗೆ ಇಲ್ಲಿನ ಜಿಲ್ಲಾಡಳಿತ ಸಿದ್ದತೆ ನಡೆಸಲಿದೆ.
ಅಕ್ಟೋಬರ್ ನಲ್ಲಿ‌ ಮೂರು ದಿನಗಳ‌ ಕಾಲ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಪ್ರವಾಸ‌ಕೈಗೊಂಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತರಾಮನ್ ಹಂಪಿ‌ ಬೇಟಿ ನೀಡಿದರು. ಹಂಪಿ ಪರಿಸರ ಧಾರ್ಮಿಕ, ಐತಿಹಾಸಿ, ಪ್ರವಾಸೋದ್ಯಮ ಮಾತ್ರವಲ್ಲದೇ ಕೃಷಿ, ಗಣಿಗಾರಿಕೆ ಹಾಗೂ ಇತರೆ ಕ್ಷೇತ್ರಗಳಿಗೂ ಹೆಸರುವಾಸಿಯಾಗಿದೆ. ಆದ್ದರಿಂದ ಈ ಭಾಗದಲ್ಲಿ ಅನುಕೂಲ ಆಗುವಂತೆ ವಿಶೇಷ ಯೋಜನೆ ರೂಪಿಸುತ್ತಾರಾ? ಅಧಿಕಾರಿಗಳ ಜತೆ ನಡೆಯುವ ಚಿಂತನ ಮಂಥನನ ಹಂಪಿ ಪರಿಸರಕ್ಕೂ ಲಾಭವಾಗಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ.
"

ವಿತ್ತ ಸಚಿವೆ ನಿರ್ಮಲ ಸೀತರಾಮನ್ ಅವರು ಡಿಸೆಂಬರ್ ತಿಂಗಳಲ್ಲಿ ಹಂಪಿ ಪರಿಸರದಲ್ಲಿ ಸಭೆ ನಡೆಸುವ ಸಾದ್ಯತೆಯಿದೆ. ಯಾವಗ? ಯಾಕೆ ಎಂಬುದು ತಿಳಿದಿಲ್ಲ. ಪ್ರವಾಸದ ಮಾಹಿತಿ ಬಂದ ನಂತರ ಕ್ರಮಕೈಗೊಳ್ಳಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net