ಈ ತಿದ್ದುಪಡಿ ಮೂಲಕ ಕಂದಾಯ ನ್ಯಾಯಾಲಯಗಳನ್ನು ಪಾರದರ್ಶಕವಾಗಿ, ನಿಯಮಬದ್ಧವಾಗಿ ನಡೆಸಲು ಹಾಗೂ ಸಾರ್ವಜನಿಕರಿಗೆಸರಳ- ಸುಳಲಿತ ನ್ಯಾಯದಾನ ನೀಡಲು ತೀರ್ಮಾನಿಸಲಾಗಿದೆ. ಭೂ ಪರಿವರ್ತನೆಯನ್ನು ಸರಳೀಕೃತವಾಗಿ ಪ್ರಕ್ರಿಯೆಗೊಳಪಡಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತಸಾಗಿಸಲು ಹಾಗೂ ಬಂಡವಾಳ ಹೂಡಿಕೆಗೆ ಹೂಡಿಕೆದಾರರ ಸ್ನೇಹಿಯಾಗಿ ಖರೀದಿಸಲಾದ ಭೂಮಿಗೆ ಭೂ ಪರಿವರ್ತನೆನೀಡಲು ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ತಿಳಿಸಿದೆ.