ಅಲ್ಲದೇ ಪಟ್ಟಣದ ಪ್ರಮುಖ ಮಾರ್ಗಗಳಾದ ಬಸವೇಶ್ವರ ಸರ್ಕಲ್, ರಾಣಾಪ್ರತಾಪಸಿಂಹ ಸರ್ಕಲ್, ಶಿವಾಜಿ ಮಹಾರಾಜ ವತ್ತ, ಹಾಗೂ ಡಾ. ಅಂಬೇಡ್ಕರ್ ಸರ್ಕಲ್, ಬಸ್ ನಿಲ್ದಾಣ ಮುಂಭಾಗ, ಖಾಸ್ಗತೇಶ್ವರ ಮಠದ ಮುಂಭಾಗ ಭಕ್ತರು ಹಾಗೂ ವಿವಿಧ ಯುವ ಸಂಘಟಕರು ಖಾಸ್ಗತರ ಹಾಗೂ ವಿರಕ್ತ ಶ್ರೀಗಳ ಹಾಗೂ ಸಿದ್ದಲಿಂಗ ಶ್ರೀಗಳ ಭಾವಚಿತ್ರದೊಂದಿಗೆ ಸ್ವಾಗತ ಕೋರುವಂತಹ ಕಟೌಟ್‌ಗಳನ್ನು ಕಟ್ಟಿದ್ದಾರೆ.