ಕಳೆಗಟ್ಟಿದ ವರಮಹಾಲಕ್ಷ್ಮೀಗೆ ಹಬ್ಬದ ಸಂಭ್ರಮ

ದೇವಿಯನ್ನು ಅಲಂಕರಿಸಿರುವುದು
ದೇವಿಯನ್ನು ಅಲಂಕರಿಸಿರುವುದು
Published on

ಪ್ರಮುಖ ಮುಖ್ಯಾಂಶಗಳು

  • ವರಮಹಾಲಕ್ಷ್ಮೀ ಹಬ್ಬ
  • ಮಹಿಳೆಯರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಶನಿವಾರಸಂತೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣದಲ್ಲಿ ಮಹಿಳೆಯರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮನೆಯಲ್ಲಿ ವರಮಹಾಲಕ್ಷ್ಮಿ ದೇವಿಯನ್ನು ಪೂಜಿಸಿ, ತದನಂತರ ಅಕ್ಕಪಕ್ಕದವರನ್ನು ಪೂಜೆಗೆ ಬರಮಾಡಿಕೊಂಡು ಪ್ರಸಾದ ವಿತರಿಸಿದರು.

ದೇವಿಯ ವಿಗ್ರಹವನ್ನು ಬಾಳೆಗಿಡ, ತಳೀರುತೋರಣ, ಹೂವಿನಿಂದ ಅಲಂಕರಿಸಿದ ಪೀಠದಲ್ಲಿ ಕೂರಿಸಿ ನಂತರ ಹಣ, ಚಿನ್ನಾಭರಣಗಳನ್ನು ಇಟ್ಟು ಪೂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net