ಪರಪ್ಪನ ಅಗ್ರಹಾರದಲ್ಲಿನ ಅಕ್ರಮ ಚುಟುವಟಿಕೆ ವಿಡಿಯೊ ಹಂಚಿಕೆ
ಬೆಂಗಳೂರು:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚುಟುವಟಿಕೆ, ಆಡಳಿತ ವ್ಯವವಸ್ಥೆ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಮಹಿಳಾ ಮಾಜಿ ಕೈದಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳನ್ನು ಹರಿಬಿಟ್ಟಿರುವ ಆರೋಪದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ಕಾರಾಗೃಹ ಅಧೀಕ್ಷಕ ಬಿ.ಎಂ.ಕೊಟ್ರೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಸಂಧ್ಯಾ ನಾಗರಾಜ್ ಎಂಬ ಮಹಿಳೆಯ ವಿರುದ್ಧ ಆ.21 ರಂದು ಬಿಎನ್‌ಎಸ್ ಕಾಯ್ದೆ 192ಕಲಂ ಅಡಿ ಪ್ರಕರಣ ದಾಖಲಾಗಿದೆ. ಮಹಿಳೆ ತನ್ನ ಇನ್‌ಸ್ಟಾಗ್ರಾಂ ಐಡಿ ಮೂಲಕ ಕೇಂದ್ರ ಕಾರಾಗೃಹದ ಮೇಲೆ ಕಪ್ಪು ಚುಕ್ಕೆ ಬರುವಂತ ನಿರಾಧಾರ ಆರೋಪಗಳ ವಿವಿಧ ವಿಡಿಯೊಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೈಲು ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಹಿಳಾ ಜೈಲಾಧಿಕಾರಿಯೊಬ್ಬರು ಕೈದಿಯೊಂದಿಗೆ ಲವ್ವಿ ಡವ್ವಿ ಕುರಿತಾದ ವಿಡಿಯೊಗಳನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ.
ಆರೋಪಿ ಮಹಿಳೆ ಸಂಧ್ಯಾ ನಾಗರಾಜ್, 2017ರಲ್ಲಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮಿನಿನ ಮೇಲೆ ಬಿಡುಗಡೆಯಾಗಿದರು. ನಂತರ ಮಾರ್ಚ್ 7 ರಂದು ಕಾಮಾಕ್ಷಿಪಾಳ್ಯ ಮತ್ತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಪ್ರಕರಣವೊಂದರಲ್ಲಿ ಜೈಲು ಸೇರಿ ಜೂನ್ 7 ರಂದು ಬಿಡುಗಡೆಯಾಗಿದ್ದಾರೆ.
ಈ ವೇಳೆಯೂ ಕಾರಾಗೃಹ ಇಲಾಖೆ ಮತ್ತು ಸಿಬ್ಬಂದಿ ವಿಡಿಯೊ ಹರಿಬಿಟ್ಟಿರುವುದರಿಂದ ಜೂನ್ ತಿಂಗಳಲ್ಲಿ ಎರಡು ಎನ್‌ಸಿಆರ್ ಪ್ರಕರಣ ದಾಖಲಿಸಲಾಗಿದೆ. ಈಗ ಇದೇ ಮಹಿಳೆ ಸಂಧ್ಯಾ ನಾಗರಾಜ್, ತಮ್ಮ ಇನ್‌ಸ್ಟಾಗ್ರಾಮ ಖಾತೆಯಲ್ಲಿ ಮೇಲಾಧಿಕಾರಿಗಳು, ಗೃಹ ಸಚಿವರ ಹಾಗೂ ಮಹಿಳಾ ಆಯೋಗದ ಅಧ್ಯಕ್ಷರ ಹೆಸರು ಮತ್ತು ಭಾವಚಿತ್ರ ಬಳಿಸಿ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಆಧಾರ ರಹಿತ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಜೈಲು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಈ ಕುರಿತು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.