ಜನರ ಬಾಳಿಗೆ ಬೆಳಕಾಗಲಿ ಎಂಬ ಆಶಯ: ಪಂಜಿಕಲ್ ಗ್ರಾಮದ ಮುಕುಡ ನಿವಾಸಿ ಆಲ್ಬರ್ಟ್ ಪಿಂಟೋ ಅವರು ಮಾತನಾಡಿ, ಸಮಾಜಕ್ಕೆ ಉಪಯೋಗ ಆಗಲಿ, ಬಹಳಷ್ಟು ಜನರ ಬಾಳಿಗೆ ಈ ಯೋಜನೆ ಬೆಳಕಾಗಲಿ ಎನ್ನುವ ಸದುದ್ದೇಶದಿಂದ ನಾನು ಜಾಗವನ್ನು ಕೊಟ್ಟಿದ್ದೇನೆ. ನನಗೆ ಈಗಾಗಲೇ ಪರಿಹಾರ ಸಿಕ್ಕಿದೆ, ಇನ್ನು ಸ್ವಲ್ಪ ಬಾಕಿ ಉಳಿದಿದ್ದು, ಅದು ಕೂಡ ಶೀಘ್ರದಲ್ಲೇ ಸಿಗುವ ವಿಶ್ವಾಸವಿದೆ ಎಂದು ನುಡಿದರು.ಅರಳ ಮುಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿಯ ಪ್ರಮುಖರಾದ ಕೆ.ಎಚ್. ಖಾದರ್ ಅವರು ಮಾತನಾಡಿ, ಭಾರತ ಸರ್ಕಾರದ ವಿದ್ಯುತ್ ಸರಬರಾಜು ಯೋಜನೆಗಾಗಿ ನಾವು ಜಾಗ ಬಿಟ್ಟುಕೊಟ್ಟಿದ್ದೇವೆ. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಹಾಗೂ ಕರ್ನಾಟಕಕ್ಕೆ ಮತ್ತಷ್ಟು ಅನುಕೂಲವಾಗಿ ಎಲ್ಲರಿಗೂ ವಿದ್ಯುತ್ ಶಕ್ತಿ ಸಿಗುವಂತಾಗಲಿ. ಜಾಗ ನೀಡಿದ್ದಕ್ಕೆ ನಮಗೆ ಸೂಕ್ತ ಪರಿಹಾರವನ್ನು ಕೊಟ್ಟಿದ್ದಾರೆ. ಈ ಯೋಜನೆಯಿಂದ ಇಡೀ ಸಮಾಜಕ್ಕೆ ಪ್ರಯೋಜನವಾಗಲಿ ಎಂಬುವುದೇ ನಮ್ಮ ಆಶಯ ಎಂದು ಶುಭ ಹಾರೈಸಿದರು.